ಬಿಲಿಯನೇರ್ ಉದ್ಯಮಿ, ಟೆಲಿಗ್ರಾಮ್ ಮೆಸೆಜಿಂಗ್ ಆಪ್‌ನ ಸ್ಥಾಪಕ ಮತ್ತು ಸಿಇಒ ಪವೆಲ್ ಡೊರಾವ್ ಅವರನ್ನು ಶನಿವಾರ (ಆ.24) ಸಂಜೆ ಪ್ಯಾರಿಸ್ ಹೊರವಲಯದ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಡೊರಾವ್ ಅವರು ತನ್ನ ಖಾಸಗಿ ಜೆಟ್ ಮೂಲಕ ವಿದೇಶಕ್ಕೆ ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ತನಿಖಾ ಕಾರಣದಿಂದ ಅವರ ವಿರುದ್ದ ಫ್ರಾನ್ಸ್‌ನಲ್ಲಿ ಪೊಲೀಸ್ ವಾರಂಟ್ ಜಾರಿಯಾಗಿತ್ತು ಎಂದು ಟಿಎಫ್1 ವೆಬ್ ಸೈಟ್ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
ಡುರೊವ್ ತನ್ನ ಅಪ್ಲಿಕೇಷನ್ ಕ್ರಿಮಿನಲ್ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂದು ಶಂಕಿಸಲಾಗಿದೆ. ತನಿಖಾಧಿಕಾರಿಯೊಬ್ಬರು, ‘ಟೆಲಿಗ್ರಾಮ್‌ನಲ್ಲಿ ಸಾಕಷ್ಟು ತೊಂದರೆಗಳು ನಡೆಯುತ್ತಿವೆ’ ಎಂದು ಹೇಳಿದ್ದಾರೆ. ಇನ್ನು ತಾನು ಅರೆಸ್ಟ್ ಆಗಬಹುದೆಂದು ತಿಳಿದಿದ್ದರೂ ಟೆಲಿಗ್ರಾಂ ಸಂಸ್ಥಾಪಕ ಪ್ಯಾರಿಸ್‌ಗೆ ಬಂದಿದ್ದರೆಂಬುವುದು ಅಚ್ಚರಿ ಮೂಡಿಸುವ ವಿಚಾರವಾಗಿದೆ.
ರಷ್ಯಾದ ಮೂಲದ ಡುರೊವ್ ಅವರು ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್ ಅನ್ನು ಪ್ರಾರಂಭಿಸಿದರು. ಅವರ ಸಂಪತ್ತು $15.5 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಈ ಅಪ್ಲಿಕೇಶನ್ ರಷ್ಯಾ, ಉಕ್ರೇನ್ ಮತ್ತು ಪೂರ್ವ ಯುರೋಪಿಯನ್ ದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಫೇಸ್‌ಬುಕ್, ಯೂಟ್ಯೂಬ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್ ಮತ್ತು ವೀಚಾಟ್ ನಂತರ ಟೆಲಿಗ್ರಾಮ್ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ.
