ದುಬೈ ಮರುಭೂಮಿಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರು ‘ಉಬರ್ ಒಂಟೆ’ ಬುಕ್ ಮಾಡಿ ಪಾರಾಗಿದ್ದೇವೆ ಎಂದು ಹೇಳಿಕೊಂಡಿದ್ದು, ಸದ್ಯ ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ದುಬೈನ ವಿಶಾಲವಾದ ಮರುಭೂಮಿಯಲ್ಲಿ ಸಿಲುಕಿರುವ ಇಬ್ಬರು ಮಹಿಳೆಯರನ್ನು ನಾವು ನೋಡಬಹುದು. ಬಳಿಕ ಉಬರ್ ಅಪ್ಲಿಕೇಶನ್ ಅನ್ನು ತೆರೆದಾಗ ಅವರಿಗೆ ಅನಿರೀಕ್ಷಿತವಾಗಿ ಉಬರ್ ಒಂಟೆ ಆಯ್ಕೆ ಕಾಣಿಸಿಕೊಂಡಿದೆ.
ಸಾಮಾನ್ಯವಾಗಿ ಕಾರುಗಳ ಬದಲಿಗೆ ಅವರಿಗೆ ಎಟಿವಿಯಂತಹ ಆಯ್ಕೆಗಳನ್ನು ನೀಡಲಾಗುತ್ತದೆ. ಆದರೆ ಉಬರ್‌ನಲ್ಲಿ ಒಂಟೆಯನ್ನು ನೋಡಿ ಆಶ್ಚರ್ಯವಾಗಿದೆ ಎಂದಿದ್ದಾರೆ. ಇದರ ವಿಡಿಯೋವನ್ನು ಮಾಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕ
ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ, “ನಾವು ಮರುಭೂಮಿಯಲ್ಲಿ ಸಿಲುಕಿದ್ದೇವೆ. ಉಬರ್ ಪರೀಕ್ಷಿಸಲು ನಿರ್ಧರಿಸಿದ್ದೇವೆ. ಏನಾಗಿದೆ ಊಹಿಸಿ? ಅಲ್ಲಿ ಒಂಟೆ ಇದೆ” ಎಂದು ಹೇಳಿದ್ದಾರೆ.
ಈ ಉಬರ್ ಒಂಟೆಯನ್ನು ಆಯ್ಕೆ ಮಾಡಿದ ಬಳಿಕ ದೀಪಕ್ ಎಂಬ ವ್ಯಕ್ತಿ ಒಂಟೆಯೊಂದಿಗೆ ಬಂದು ಮಹಿಳೆರನ್ನು ಮರುಭೂಮಿಯಿಂದ ಪಾರು ಮಾಡಿದ್ದಾರೆ. ಆದರೆ ಈ ವಿಡಿಯೋ ನಿಜವೇ ಎಂಬುದು ಖಚಿತವಾಗಿಲ್ಲ. “ನೀವು ಅದನ್ನು ನಂಬುತ್ತೀರಾ? ನಾವು ನಿಜವಾಗಿಯೂ ಒಂಟೆಯನ್ನು ಬುಕ್ ಮಾಡಿದೆವು” ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕೆಲವು ನಿಟ್ಟಿಗರು ಇದನ್ನು ನಕಲಿ ಎಂದು ಹೇಳಿದರೆ, ಇನ್ನು ಕೆಲವರು ಆ ರೀತಿ ನಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ. “ದುಬೈನಲ್ಲಿ ಮಾತ್ರ ಉಬರ್‌ನಲ್ಲಿ ಒಂಟೆ ಬುಕ್ ಮಾಡಬಹುದು. ಅದು ದೊಡ್ಡ ವಿಷಯವೇನಲ್ಲ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್ನಲ್ಲಿ 18 ಮಂದಿ ಸಾವು
ಇನ್ನೋರ್ವ ನೆಟ್ಟಿಗರು “ನಿಮ್ಮ ಸುರಕ್ಷತೆಗಾಗಿ ಮೊದಲು ನಂಬರ್ ಪ್ಲೇಟ್ ಪರಿಶೀಲಿಸಿ” ಎಂದು ಗೇಲಿ ಮಾಡಿದ್ದಾರೆ. “ಇನ್ನೋರ್ವರು ನೀವು ಮರುಭೂಮಿಯ ನಡುವೆ ಸಿಲುಕಿರುವಂತೆ ಕಾಣುವುದಿಲ್ಲ. ನೀವು ವಿಡಿಯೋ ಮಾಡಿದ ಪ್ರದೇಶ ಹಿಂಭಾಗದಲ್ಲಿಯೇ ನಾವು ದಾರಿ ಕಾಣಬಹುದು” ಎಂದು ಹೇಳಿದ್ದಾರೆ.
“ಇದು ನಟನೆ ಅಲ್ಲವೇ? ಆದರೆ ಸತ್ಯದಂತೆಯೇ ಇದೆ” ಎಂದು ಮತ್ತೋರ್ವ ನೆಟ್ಟಿಗರು ತಿಳಿಸಿದ್ದಾರೆ. “ನಿಮ್ಮ ಹಿಂಭಾಗದಲ್ಲಿ ದಾರಿಯಿದೆ. ಆದರೆ ನೀವು ಮರುಭೂಮಿಯಲ್ಲಿ ಸಿಲುಕಿದ್ದೀರಿ ಎಂದು ಹೇಳುತ್ತಿದ್ದೀರಿ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
