ಶೇ.200 ತೆರಿಗೆ ವಿಧಿಸಿ ಚೀನಾವನ್ನು ನಾಶಪಡಿಸಬಲ್ಲೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Date:

Advertisements

ಚೀನಾ ಅಪರೂಪದ ಅಯಸ್ಕಾಂತ(earth magnets) ಅನ್ನು ಪೂರೈಸಬೇಕು, ಇಲ್ಲವಾದರೆ ಶೇಕಡ 200ರಷ್ಟು ಹೆಚ್ಚುವರಿ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಹಾಗೆಯೇ ಈ ವರ್ಷದ ಕೊನೆಯಲ್ಲಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

ಟ್ರಂಪ್ ವಾಷಿಂಗ್ಟನ್‌ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರನ್ನು ಭೇಟಿಯಾದಾಗ, ಯುಎಸ್-ಚೀನಾ ಸಂಬಂಧಗಳ ಸ್ಥಿತಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಇತ್ತೀಚಿನ ಸಂಭಾಷಣೆಗಳ ಬಗ್ಗೆ ವರದಿಗಾರರನ್ನು ಉದ್ದೇಶಿಸಿ ಮಾತನಾಡಿ ಈ ಘೋಷಣೆ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಭಾರತದ ಮೇಲೆ ಶೇ 25ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಸುಳಿವು

Advertisements

ಆಟೋಮೋಟಿವ್‌ನಿಂದ ರಕ್ಷಣೆಯವರೆಗಿನ ಕೈಗಾರಿಕೆಗಳಲ್ಲಿ ಬಳಸುವ ಅಪರೂಪದ ಆಯಸ್ಕಾಂತದ ಪ್ರಮುಖ ಉತ್ಪಾದಕರಾಗಿ ಚೀನಾದ ಪಾತ್ರವನ್ನು ಉಲ್ಲೇಖಿಸಿದ ಟ್ರಂಪ್, “ಚೀನಾ ನಮಗೆ ಆಯಸ್ಕಾಂತಗಳನ್ನು ನೀಡಬೇಕು” ಎಂದರು.

“ಅವರು ನಮಗೆ ಆಯಸ್ಕಾಂತಗಳನ್ನು ನೀಡದಿದ್ದರೆ, ನಾವು ಅವರಿಗೆ ಶೇಕಡ 200ರಷ್ಟು ಸುಂಕ ಅಥವಾ ಬೇರೆ ಹೊರೆಯನ್ನು ವಿಧಿಸಬೇಕಾಗುತ್ತದೆ. ಆದರೆ ಅದರಿಂದಾಗಿ ನಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.

“ಒಂದು ಹಂತದಲ್ಲಿ, ಬಹುಶಃ ಈ ವರ್ಷದ ಅವಧಿಯಲ್ಲಿ ಅಥವಾ ಸ್ವಲ್ಪ ಸಮಯದ ನಂತರ, ನಾವು ಚೀನಾಕ್ಕೆ ಹೋಗುತ್ತೇವೆ. ನಾವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ” ಎಂದೂ ಈ ಸಂದರ್ಭದಲ್ಲೇ ಹೇಳಿದ್ದಾರೆ.

ಈಗಾಗಲೇ ಟ್ರಂಪ್ ಚೀನಾ ಹಲವು ದೇಶಗಳ ವಸ್ತುಗಳ ಮೇಲೆ ಸುಂಕದ ಹೊರೆಯನ್ನು ಹೆಚ್ಚಿಸಿದ್ದಾರೆ. ಚೀನಾದ ಮೇಲೆ ಈ ಹಿಂದೆ ವಿಧಿಸುತ್ತಿದ್ದ ಶೇಕಡ 36 ಸುಂಕವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಶೇಕಡ 145ಕ್ಕೆ ಏರಿಸಿದ್ದಾರೆ. ಇದೀಗ ತಮಗೆ ಬೇಕಾದ ಆಯಸ್ಕಾಂತ ನೀಡದಿದ್ದರೆ ಶೇಕಡ 200ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಚೀನಾ ಮಾತ್ರವಲ್ಲದೆ ಭಾರತ ಸೇರಿದಂತೆ ಹಲವು ದೇಶಗಳ ಮೇಲಿನ ಸುಂಕವನ್ನು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಏರಿಸಿದ್ದಾರೆ. ಹಾಗೆಯೇ ಸುಂಕ ಏರಿಸುವ, ವ್ಯಾಪಾರ ನಡೆಸದೆ ಇರುವ ಬೆದರಿಕೆ ನೀಡಿಯೇ ಭಾರತ-ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ನಡುವಿನ ಯುದ್ಧಗಳನ್ನು ನಿಲ್ಲಿಸಿರುವುದಾಗಿ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಸುಂಕವೇ ತನ್ನ ಅಸ್ತ್ರ ಎಂಬಂತೆ ಬಿಂಬಿಸುತ್ತಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ಕ್ಷಾಮ ಉಲ್ಬಣ: ಸುತ್ತಲಿನ ಪ್ರದೇಶಗಳಿಗೂ ಬರ ಪರಿಸ್ಥಿತಿ ಸಾಧ್ಯತೆ

ಗಾಝಾದಲ್ಲಿನ ಕ್ಷಾಮ ಪರಿಸ್ಥಿತಿ ಮತ್ತಷ್ಟು ಹೆಚ್ಚಳವಾಗಿದೆ ಮತ್ತು ಅದು ಸುತ್ತಮುತ್ತಲಿನ ಪ್ರದೇಶಗಳಿಗೂ...

ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಬಂಧನ

ರಾಜ್ಯ ನಿಧಿ ದುರುಪಯೋಗದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್...

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

Download Eedina App Android / iOS

X