28 ವರ್ಷದ ಯುವಕನೊಬ್ಬ ತನ್ನ ಹೆಂಡತಿಯನ್ನು ಕೊಂದು 224 ತುಂಡುಗಳನ್ನಾಗಿ ಮಾಡಿ ನದಿಗೆ ಎಸೆದ ಆಘಾತಕಾರಿ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಆರೋಪಿಯು ಯಾವುದೇ ಕಾರಣ ನೀಡದೆ ಕೊಲೆಯನ್ನು ಒಪ್ಪಿಕೊಂಡಿದ್ದು ಏ.8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಮಾರ್ಚ್ 25 ರಂದು ಘಟನೆ ನಡೆದಿದ್ದು, ಆರೋಪಿ ನಿಕೊಲಸ್ ಮೆಟ್ಸೊನ್ ಲಂಡನ್‌ನ ಲಿಂಕ್ಲೊನ್ ಸಿಟಿಯ ನಿವಾಸಿಯಾಗಿದ್ದು, 26 ವರ್ಷದ ತನ್ನ ಪತ್ನಿ ಹೋಲಿ ಬ್ರಮ್‌ಲೇ ಎಂಬುವವರನ್ನು ಚಾಕುವಿನಿಂದ ಅಮಾನುಷವಾಗಿ ಹತ್ಯೆ ಮಾಡಿ ದೇಹವನ್ನು 224 ತುಂಡುಗಳನ್ನಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನದಿಗೆ ಎಸೆದಿದ್ದಾನೆ.
ಕೊಲೆಯಾದ 8 ದಿನಗಳ ನಂತರ ಯುವತಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಪೊಲೀಸರ ವರದಿಗಳ ಪ್ರಕಾರ ತಾನು ಆರಂಭದಲ್ಲಿ ಕೊಲೆ ಮಾಡಿಲ್ಲ ಎಂದು ನಿರಾಕರಿಸಿದ್ದಾನೆ.
ಮೃತದೇಹವನ್ನು ನದಿಗೆ ಎಸೆಯಲು ಸಹಾಯ ಮಾಡಿದ ಆರೋಪಿಯ ಸ್ನೇಹಿತ 28 ವರ್ಷದ ಜೋಶ್ವಾ ಹಾನ್‌ಕಾಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ಆರೋಪಿ ನಿಕೊಲಸ್ ಮೆಟ್ಸೊನ್ ಈ ಮೊದಲು ತನ್ನ ಮಾಜಿ ಸ್ನೇಹಿತೆಯರಿಗೆ ತೊಂದರೆ ನೀಡಿದ ಕಾರಣಕ್ಕಾಗಿ 2013,2016 ಹಾಗೂ 2017ರಲ್ಲಿ ಶಿಕ್ಷೆಗೊಳಗಾಗಿದ್ದ.
ಕೊಲೆಯಾದ ಯುವತಿ ಆರೋಪಿಯನ್ನು 2021ರಲ್ಲಿ ವಿವಾಹವಾಗಿದ್ದು, ತಾನು ವಾಸವಿದ್ದ ಅಪಾರ್ಟ್‌ಮೆಮೆಂಟ್‌ನಲ್ಲೆ ಹಲವು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಹತ್ಯೆಯಾದ ಯುವತಿಯ ಹಿಂದಿನ ಹೇಳಿಕೆಗಳನ್ನು ಆಕೆಯ ತಾಯಿ ಹಾಗೂ ಸಹೋದರಿಯೆ ಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಓದಿದರು. ದಂಪತಿಗಳು 16 ತಿಂಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ತಮ್ಮ ಸಂಬಂಧ ಮುರಿದುಕೊಂಡಿದ್ದರು ಎಂದು ಹೇಳಿಕೆಯಲ್ಲಿ ತಾಯಿ ಹಾಗೂ ಸಹೋದರಿ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುವುದಕ್ಕೂ ಒಂದು ವಾರ ಮುನ್ನ ಪೊಲೀಸರು ಅಪಾರ್ಟ್‌ಮೆಂಟ್‌ಗೆ ತೆರಳಿದಾಗ ಆರೋಪಿಯೇ ಬಾಗಿಲು ತೆರೆದಿದ್ದಾನೆ. ಪತ್ನಿ ತನ್ನನ್ನು ನಿಂದಿಸಿ, ಹಲ್ಲೆ ಮಾಡಿ ಹೋಗಿದ್ದಾಳೆ ಎಂದು ತಿಳಿಸಿದ್ದ. ಒಂದು ವಾರದ ನಂತರ ಮಾ.25 ರಂದು ಪೊಲೀಸರು ಪುನಃ ಬಂದಾಗ ರಕ್ತದ ಕಲೆಗಳು ಸ್ನಾನದ ಕೋಣೆ, ಮಲಗುವ ಕೋಣೆಯಲ್ಲಿ ಇರುವುದನ್ನು ಗಮನಿಸಿ ಆರೋಪಿಯನ್ನು ಬಂಧಿಸಲಾಗಿದೆ.
