ಸುಮಾರು 1000 ದಿನಗಳಿಂದ ಉಕ್ರೇನ್ ಎಂಬ ಸಣ್ಣ ರಾಷ್ಟ್ರದ ಮೇಲೆ ರಷ್ಯಾ ಎಂಬ ಬಲಾಢ್ಯ ದೇಶವು ನಿರಂತರವಾಗಿ ದಾಳಿ ನಡೆಸುತ್ತಿದೆ. 1991ರಲ್ಲಿ ಸೋವಿಯತ್ ಒಕ್ಕೂಟವು ಪತನಗೊಂಡ ಬಳಿಕ ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿದೆ. ಅಮೆರಿಕ ಬೆಂಬಲಿತ ತೀವ್ರ ಬೆಂಬಲಿತ ಸಂಘಟನೆಗಳು ರಾಜಧಾನಿ ಕೀವ್ನಲ್ಲಿ ಹಿಂಸಾತ್ಮಾಕವಾಗಿ, ಪ್ರಜಾತಾಂತ್ರಿಕವಾಗಿ ಚುನಾಯಿತರಾದ ಆಗಿನ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೋವಿಕ್ ದೇಶ ಬಿಡುವಂತೆ ಮಾಡುತ್ತಾರೆ.
ನಂತರ ಶುರುವಾದ ಹಿಂಸಾತ್ಮಾಕ ಪ್ರಕ್ರಿಯೆಯಲ್ಲಿ ಉಕ್ರೇನ್ ಪ್ರದೇಶದಲ್ಲಿರುವ ರಷ್ಯನ್ನರ ಮೇಲೆ ದಾಳಿ ನಡೆದಿದೆ. ಡಾನ್ಬಾಸ್ ಪ್ರದೇಶದಲ್ಲಿ 2014-2015ರ ಅವಧಿಯಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಎರಡು ಪ್ರದೇಶದಲ್ಲಿ ಅಂತರ್ ಯುದ್ಧ ನಡೆದಿದೆ. ಉಕ್ರೇನ್ನ ಸೇನೆಯಲ್ಲಿರುವ ನಾಝಿ ಆರಾಧಕರು ಉಕ್ರೇನ್ನ ಸೇನೆಯಲ್ಲಿರುವ ನಾಝಿ ಆರಾಧಕರು ನಡೆಸಿದ ಈ ಅಂತರ್ ಯುದ್ಧದಲ್ಲಿ 2021ರ ಹೊತ್ತಿಗೆ 15000 ಜನರ ಸಾವಿಗೆ ಕಾರಣವಾಗಿದೆ. ಈ ಪೈಕಿ 3,400ಕ್ಕೂ ಮಂದಿ ನಾಗರಿಕರಾಗಿದ್ದಾರೆ. ಇದರಲ್ಲಿ ಅಮೆರಿಕ ಕೈವಾಡ ಅಲ್ಲಗಳೆಯುವಂತಿಲ್ಲ.
2014ರಿಂದ ಈ ಅಂತರ್ ಯುದ್ದ ನಡೆಯುತ್ತಿದೆ. ಆದರೆ 2022ರ ಫೆಬ್ರವರಿ 24ರಂದು ರಷ್ಯಾ ಸೇನೆಯೇ ನೇರವಾಗಿ ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಯುದ್ದ ಇನ್ನಷ್ಟು ಉಲ್ಭಣಗೊಂಡಿತು. ಈಗಾಗಲೇ ಐದು ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇವೆಲ್ಲವೂ ಕೂಡಾ ಈಗ ‘ದೊಡ್ಡಣ್ಣನ’ ಹಿಡಿತಕ್ಕೆ ಸಿಲುಕಿ ಮೂರನೇ ವಿಶ್ವಯುದ್ದದ ಹಾದಿಯನ್ನು ತುಳಿದಿದೆ.
ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧ | ಬಲವಂತವಾಗಿ ರಷ್ಯಾ ಸೇನೆಗೆ ನೇಮಕ; ರಾಜ್ಯದ ಮೂವರು ಸೇರಿ ನಾಲ್ವರು ಭಾರತೀಯರು ವಾಪಸ್
ಇವೆಲ್ಲವುದರ ನಡುವೆ ಯುದ್ಧ ಆರಂಭವಾಗಿ 1000 ದಿನಗಳಾದ ಹೊತ್ತಿನಲ್ಲಿ (ನವೆಂಬರ್ 19) ಉಕ್ರೇನ್ ಇದೇ ಮೊದಲ ಬಾರಿಗೆ, ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಯನ್ನು (ATACMS) ರಷ್ಯಾದ ಮೇಲೆ ಪ್ರಯೋಗಿಸಿದೆ. ಈ ಹಿಂದೆ ಸಣ್ಣ ಕ್ಷಿಪಣಿಗಳನ್ನು ಬಳಸಿದ್ದ ಉಕ್ರೇನ್ ಈಗ ನೇರವಾಗಿ ರಷ್ಯಾದ ನೆಲಕ್ಕೆ ಅಪ್ಪಳಿಸುವ ದೀರ್ಘ ಶ್ರೇಣಿಯ ಕ್ಷಿಪಣಿ ಪ್ರಯೋಗಿಸಿದೆ. ಉಕ್ರೇನ್ನಲ್ಲಿ ಬಹುತೇಕರು ಯುದ್ಧ ಅಂತ್ಯಕ್ಕೆ ಧ್ವನಿಗೂಡಿಸಿರುವಾಗ ಸೇನೆಯ ಈ ನಡೆ ಆಘಾತಕಾರಿಯಾಗಿದೆ. ಆದರೆ ಇವೆಲ್ಲವುದಕ್ಕೂ ಕುಮ್ಮಕ್ಕು ಅಮೆರಿಕದ್ದು ಎಂಬುದು ವಾಸ್ತವ. ರಷ್ಯಾದೊಂದಿಗಿನ ತನ್ನ ವೈರುತ್ಯಕ್ಕೆ ಅಮೆರಿಕ ಉಕ್ರೇನ್ ಅನ್ನು ಬಲಿಕೊಡುತ್ತಿದೆ.
ಉಕ್ರೇನ್ ಅಮೆರಿಕದ ಪ್ರಚೋದನೆಗೆ ಒಳಗಾದರೆ, ರಷ್ಯಾ ಪ್ರತಿರೋಧ ಒಡ್ಡುತ್ತದೆ. ಉಕ್ರೇನ್ ಕ್ಷಿಪಣಿ ದಾಳಿ ಬಳಿಕ ರಷ್ಯಾ ತನ್ನ ಅಣ್ವಸ್ತ್ರ ನೀತಿ ಬದಲಾಯಿಸಿದೆ. ಈ ನೀತಿ ಪ್ರಕಾರ ಯಾವುದೇ ದೇಶ ರಷ್ಯಾದ ಮೇಲೆ ಕ್ಷಿಪಣಿ ದಾಳಿ ನಡೆಸಿದರೂ ಅದಕ್ಕೆ ಸಹಾಯ ಮಾಡಿದ, ಕ್ಷಿಪಣಿ ರಫ್ತು ಮಾಡಿದ ದೇಶಗಳ ಮೇಲೆಯೂ ರಷ್ಯಾ ದಾಳಿ ಮಾಡಬಹುದಾಗಿದೆ. ಹಾಗೆಯೇ ರಷ್ಯಾವು ಅತೀ ವೇಗವಾಗಿ ಚಲಿಸುವ ಕ್ಷಿಪಣಿಯಾದ ಓರೆಸ್ನಿಕ್ ಕ್ಷಿಪಣಿಯನ್ನು ಪ್ರಾಯೋಗಿಕವಾಗಿ ಉಕ್ರೇನ್ ಮೇಲೆ ಪ್ರಯೋಗಿಸಿದೆ. ಈ ಮೂಲಕ ಮುಂದೊಂದು ದಿನ ಉಕ್ರೇನ್ ಮೇಲೆ ಭಾರೀ ಹಾನಿ ಉಂಟು ಮಾಡುವ ಓರೆಸ್ನಿಕ್ ಕ್ಷಿಪಣಿ ದಾಳಿ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ರಷ್ಯಾ ನೀಡಿದೆ. ಆದರೆ ಇಲ್ಲಿ ನಷ್ಟ ಇಡೀ ವಿಶ್ವದ ಶಾಂತಿ, ಆರ್ಥಿಕತೆಗೆ.
ಉಕ್ರೇನ್ ಸೇರಿದಂತೆ 160ಕ್ಕೂ ಅಧಿಕ ರಾಷ್ಟ್ರಗಳು ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರ ಬಳಕೆಯನ್ನು ನಿಷೇಧಿಸುವ ಒಪ್ಪಂದಗಳಿಗೆ ಸಹಿ ಹಾಕಿವೆ. ಬೈಡನ್ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಇಂತಹ ಶಸ್ತ್ರಾಸ್ತ್ರಗಳ ಬಳಕೆಯ ವಿರುದ್ಧ ಮಾತನಾಡಿದ್ದರು. ಆದರೆ ಈಗ ಉಕ್ರೇನ್ಗೆ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರ ಒದಗಿಸಲು ಅವಕಾಶ ನೀಡಿದ್ದಾರೆ. ಅದಕ್ಕೆ ಉಕ್ರೇನ್ ಅಪಾಯದಲ್ಲಿದೆ ಎಂಬ ಸಬೂಬು ನೀಡಿದ್ದಾರೆ. ಈ ಮೂಲಕ ಮೂರನೇ ಮಹಾಯುದ್ದಕ್ಕೆ ಸಕಲ ವೇದಿಕೆಯನ್ನು ಬೈಡನ್ ತನ್ನ ಅಧಿಕಾರಾವಧಿ ಮುಗಿಯುವುದಕ್ಕೂ ಮುನ್ನ ಸಜ್ಜುಗೊಳಿಸುತ್ತಿದ್ದಾರೆ.
ಯುದ್ಧ ನಿಲ್ಲಿಸಿ: ಉಕ್ರೇನಿಯನ್ನರ ಕೂಗು
ಉಕ್ರೇನ್ನಲ್ಲಿ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ GALLUP POLL ಸಂಸ್ಥೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಸುಮಾರು ಶೇಕಡ 52ರಷ್ಟು ಉಕ್ರೇನಿಯನ್ನರು ಸಾಧ್ಯವಾದಷ್ಟು ಶೀಘ್ರ ಒಂದು ಒಪ್ಪಂದಕ್ಕೆ ಬಂದು ಈ ಯುದ್ಧಕ್ಕೆ ಅಂತ್ಯ ಹಾಡಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಯುದ್ಧಕೋರತನವು ಸಮರ ಅಂತ್ಯವಾಗದಂತೆ ಕಂಗಾವಲು ಕಾಯುತ್ತಿದೆ. ಅದಕ್ಕಾಗಿ ಉಕ್ರೇನ್ಗೆ ಬೇಕಾದ ಆರ್ಥಿಕ ಬೆಂಬಲವನ್ನು ಕೂಡಾ ನೀಡುತ್ತಿದೆ. ಉಕ್ರೇನ್ನ ಜನರು ಯುದ್ಧವನ್ನು ವಿರೋಧಿಸುವಾಗ ಅಲ್ಲಿನ ಆಡಳಿತ ಮಾತ್ರ ಅಮೆರಿಕದ ತಾಳಕ್ಕೆ ತಕ್ಕ ಕುಣಿದು ತಮ್ಮ ದೇಶವನ್ನು ಅಧಃಪತನಕ್ಕೆ ತಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧ ಟೀಕಿಸಿದ ರಷ್ಯಾದ ಪತ್ರಕರ್ತನಿಗೆ 8 ವರ್ಷ ಜೈಲು ಶಿಕ್ಷೆ!
ಈಗಾಗಲೇ ರಷ್ಯಾ- ಉಕ್ರೇನ್ ಅಂತ್ಯಕ್ಕಾಗಿ ಎರಡು ಬಾರಿ ಶಾಂತಿ ಒಪ್ಪಂದವನ್ನು (Minsk agreements) ಮಾಡಲಾಗಿದೆ. ಆದರೆ ಎರಡೂ ಒಪ್ಪಂದವನ್ನು ಕೂಡಾ ಅಮೆರಿಕದ ಕುಮ್ಮಕ್ಕಿನಿಂದ ಉಕ್ರೇನ್ ಮುರಿದಿದೆ. ರಷ್ಯಾವು ಉಕ್ರೇನ್ ಎಂಬ ಪುಟ್ಟ ರಾಷ್ಟ್ರದ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದೆ. ಇದಕ್ಕಾಗಿ ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳನ್ನು ಯುದ್ಧದಾಳುಗಳನ್ನಾಗಿ ಬಳಸುತ್ತಿದೆ. ಇವೆಲ್ಲವುದಕ್ಕೂ ಅಮೆರಿಕ ಕುಮ್ಮಕ್ಕು ನೀಡುತ್ತಿದೆ. ಅಮೆರಿಕ ಮತ್ತು ರಷ್ಯಾದ ನಡುವಿನ ದ್ವೇಷ ಇಂದು ನಿನ್ನೆಯದಲ್ಲ. ಈ ಹಿಂದೆ ಮಾಡಿದ್ದ ಯುಎಸ್ ರಷ್ಯಾ ಭದ್ರತಾ ಒಪ್ಪಂದ 2021ರ ಡಿಸೆಂಬರ್ 15ರಂದು ಕಸದ ತೊಟ್ಟಿ ಸೇರಿದೆ. ಈಗ ಉಕ್ರೇನ್ ಅನ್ನು ತನ್ನ ದಾಳವಾಗಿ ಅಮೆರಿಕ ಬಳಸಿ ನಾಶದ ಅಂಚಿಗೆ ದೂಕುತ್ತಿದೆ.
ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಬಳಸಿಕೊಂಡು ಯುದ್ಧಕ್ಕೆ ನಾಂದಿ ಹಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕದ ಸೋಗಲಾಡಿತನಕ್ಕೆ ಈಗಾಗಲೇ ಹಲವು ದೇಶಗಳು ಬೆಲೆ ತೆರುತ್ತಿದೆ. ಅದಕ್ಕೆ ಮೊದಲ ಮತ್ತು ಎರಡನೇ ಮಹಾಯುದ್ದವೇ ಸಾಕ್ಷಿ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನೂ ಕೂಡಾ ಅಮೆರಿಕದ ಅಧ್ಯಕ್ಷ ಜೋ ಬೈಡನ್, ರಷ್ಯಾ ವಿರುದ್ದದ ತನ್ನ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಉಕ್ರೇನ್ ಯುದ್ದ ನಿಲ್ಲಬೇಕು, ಶಾಂತಿ ನೆಲೆಸಬೇಕು ಎಂಬುದು ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು. (ಟ್ರಂಪ್ ಸಂಸತ್ತು ಸದಸ್ಯರುಗಳು ಯುದ್ಧ ಪ್ರೇಮಿಗಳು ಎಂಬುದು ಮರೆಯುವಂತಿಲ್ಲ) ಆದರೆ ಹಾಲಿ ಅಧ್ಯಕ್ಷ ಜೋ ಬೈಡನ್ ನಿಲುವೇ ಬೇರೆ. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂಬಂತೆ ಅಮೆರಿಕ ಅಧ್ಯಕ್ಷ ಬೈಡನ್ ತನ್ನ ಅಧಿಕಾರವಧಿ ಮುಗಿಯುವ ಮುನ್ನ ಮೂರನೇ ಯುದ್ದಕೆ ನಾಂದಿ ಹಾಡಿಯೇ ಬಿಡೋಣ ಎಂದು ಪಣತೊಟ್ಟಂತಿದೆ.
ಅಮೆರಿಕದಲ್ಲಿ ಅಧ್ಯಕ್ಷರು ಬದಲಾದರೂ ಕೂಡಾ ಆ ದೇಶದ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಧೋರಣೆಗಳು ಬದಲಾಗದು. ಇಂದು ಬೈಡನ್ ನಾಳೆ ಟ್ರಂಪ್. ಅದರಲ್ಲೂ ಟ್ರಂಪ್ – ನರೇಂದ್ರ ಮೋದಿ ಸ್ನೇಹಿತರು. ಮುಂದೊಂದು ದಿನ ಅಮೆರಿಕ ತನ್ನ ಈ ಯುದ್ದ ಪಿಪಾಸು ತನಕ್ಕೆ ಭಾರತವನ್ನು ಕೂಡಾ ಬಳಸಿಕೊಳ್ಳಬಹುದು. ಅಮೆರಿಕದ ಮಾಜಿ ವಿದೇಶಾಂಗ ನೀತಿ ಮುಖ್ಯಸ್ಥ ಹೆನ್ರಿ ಕಿಸಿಂಜರ್ ಹೇಳುವಂತೆ “ಅಮೆರಿಕದೊಂದಿಗೆ ವೈರತ್ವ ಅಪಾಯಕಾರಿ, ಅಮೆರಿಕದ ಗೆಳೆತನ ಮಾರಣಾಂತಿಕ”. ಹಾಗಾಗಿ ಅಮೆರಿಕದೊಂದಿಗೆ ಭಾರತ ಸ್ನೇಹದ ಹೆಜ್ಜೆಯನ್ನು ಎಚ್ಚರದಿಂದ ಇಡುವುದು ಲೇಸು.