ಹಕ್ಕಿ ಜ್ವರ ಆತಂಕ ಹೆಚ್ಚಾಗುತ್ತಿರುವ ನಡುವೆ ಅಮೆರಿಕಾದಲ್ಲಿ ಹಕ್ಕಿ ಜ್ವರದ ಎರಡನೇ ಮಾನವ ಪ್ರಕರಣ ಪತ್ತೆಯಾಗಿರುವುದಾಗಿ ಯುಎಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲನೆಯ ಪ್ರಕರಣ ದಾಖಲಾದ ಎರಡು ತಿಂಗಳ ಅವಧಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಮೊದಲನೆಯದಾಗಿ ಟೆಕ್ಸಾಸ್ನಲ್ಲಿ ಒಬ್ಬರಲ್ಲಿ H5N1 ಎಂಬ ವೈರಸ್ ಸೋಂಕು ಕಂಡು ಬಂದಿದೆ. ಈಗ ಮಿಚಿಗನ್ನಲ್ಲಿ ಮತ್ತೊಬ್ಬರಲ್ಲಿ ಈ ವೈರಸ್ ಕಂಡು ಬಂದಿದೆ. ಇಬ್ಬರೂ ಕೂಡಾ ಡೈರಿ ಫಾರ್ಮ್ ಕಾರ್ಮಿಕರು ಆಗಿದ್ದು, ಸಣ್ಣ ಪುಟ್ಟ ರೋಗ ಲಕ್ಷಣಗಳನ್ನು ಹೊಂದಿದ್ದರು. ಈಗ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
US reports second human case of bird flu
Read @ANI Story | https://t.co/KVgiYz5Gc9#US #birdflu #Michigan pic.twitter.com/tzeZ7Yggjq
— ANI Digital (@ani_digital) May 23, 2024
ಈ ರೋಗದಿಂದ ಸಾಮಾನ್ಯ ಜನರಿಗೆ ಅಪಾಯ ಪ್ರಮಾಣ ‘ಕಡಿಮೆ’ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಆದರೆ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಕೂಡಾ ಹೇಳಿದೆ.
ಇದನ್ನು ಓದಿದ್ದೀರಾ? ನಿಫಾ ವೈರಸ್ ಆತಂಕ; ರೋಗ ಲಕ್ಷಣ, ತಡೆಗಟ್ಟುವ ವಿಧಾನದ ಮಾಹಿತಿ
“ಸೋಂಕಿತ ಹಸುಗಳಿಂದ ಬರುವ ಹಸಿ ಹಾಲಿನಲ್ಲಿ ವೈರಸ್ ಅಧಿಕವಾಗಿರುತ್ತದೆ. ಡೈರಿ ಹಸುಗಳಲ್ಲಿ ಈ ವೈರಸ್ ಹರಡುವಿಕೆಯ ಪ್ರಮಾಣವನ್ನು ಗಮನಿಸಿದರೆ, ಇದೇ ರೀತಿಯಾಗಿ ಹೆಚ್ಚಾಗಿ ಹಕ್ಕಿ ಜ್ವರ ಮಾನವ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ” ಎಂದು ಸಿಡಿಸಿ ತಿಳಿಸಿದೆ.
ಮಿಚಿಗನ್ನಲ್ಲಿ ಡೈರಿ ಫಾರ್ಮ್ನಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲಿ ಹಕ್ಕಿ ಜ್ವರ ಕಂಡು ಬಂದಿದೆ. ಅಲ್ಲಿ ಹಸುಗಳಲ್ಲಿ H5N1 ವೈರಸ್ ಕಂಡು ಬಂದಿದೆ. ವ್ಯಕ್ತಿಯ ಒಂದು ಮೂಗಿನಿಂದ ಮತ್ತು ಇನ್ನೊಂದು ಕಣ್ಣಿನಿಂದ ಎರಡು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.