ನಿಫಾ ವೈರಸ್‌ ಆತಂಕ; ರೋಗ ಲಕ್ಷಣ, ತಡೆಗಟ್ಟುವ ವಿಧಾನದ ಮಾಹಿತಿ

Date:

ನಿಫಾ ವೈರಸ್‌ ಸೋಂಕಿಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್‌ ಚಿಕಿತ್ಸೆ ಇಲ್ಲ. ಉಸಿರಾಟದ ಕಾರ್ಯವನ್ನು ನಿರ್ವಹಿಸುವುದು, ಜ್ವರ ಹಾಗೂ ದೇಹದ ನೋವನ್ನು ನಿಯಂತ್ರಿಸುವುದು ಮತ್ತು ಇಂಟ್ರಾವೆನಸ್‌ ದ್ರವಗಳನ್ನು ದೇಹಕ್ಕೆ ನೀಡುವುದು ಈ ರೀತಿಯ ಆರೈಕೆಗಳು ಅವಶ್ಯವಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಪ್ರಾಯೋಗಿಕ ಚಿಕಿತ್ಸೆಗಳು ಮತ್ತು ಆಂಟಿವೈರಲ್‌ ಔಷಧಿಗಳನ್ನು ಪರಿಶೋಧಿಸಲಾಗಿದೆ. ಆದರೂ ಅವುಗಳ ಪರಿಣಾಮ ಈಗಲೂ ಅನಿಶ್ಚಿತವಾಗಿಯೇ ಉಳಿದಿದೆ.

ನೆರೆಯ ಕೇರಳದಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಐಸೋಲೇಷನ್‌ ವಾರ್ಡ್‌ ಸಿದ್ಧತೆ ನಡೆದಿದೆ.  

ನಿಫಾ ವೈರಸ್‌ ಝೊನೋಟಿಕ್‌ ವೈರಸ್‌ ಆಗಿದ್ದು, ಇದು ಮಾನವರಲ್ಲಿ ತೀವ್ರವಾದ ಉಸಿರಾಟ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನಿಫಾ ವೈರಸ್‌ ಬಾವಲಿಗಳ ಮಲ ಹಾಗೂ ಲಾಲಾರಸದಿಂದ ಹರಡುತ್ತದೆ ಎನ್ನಲಾಗುತ್ತದೆ. ಇದು ಸೋಂಕಿತ ಪ್ರಾಣಿ, ಪಕ್ಷಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸುವುದರಿಂದ ಈ ವೈರಸ್‌ ಹರಡುತ್ತದೆ.

ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿತರು ಕಂಡುಬಂದಿದ್ದು, ಇಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಯರಾಜನಗರದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಮುಂಜಾಗೃತ ಕ್ರಮವಾಗಿ ಮೂರು ಹಾಸಿಗೆಯ ಐಸೋಲೇಶನ್ ವಾರ್ಡ್ ಸಿದ್ಧತೆ ಮಾಡಲಾಗಿದೆ. ನಿಫಾ ವೈರಸ್ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡುವ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬಾವಲಿಗಳಲ್ಲಿ ಪ್ಟೆರೋಪಸ್‌ ಎಂಬ ಜಾತಿಯ ಬಾವಲಿಗಳು ಇರುತ್ತವೆ. ಇವು ಹೆಚ್ಚಾಗಿ ಹಣ್ಣುಗಳನ್ನು ತಿನ್ನುತ್ತವೆ. ಅವು ನಿಫಾ ಹರಡುವಿಕೆಗೆ ನೈಸರ್ಗಿಕ ಆತಿಥೇಯಗಳಾಗಿದ್ದು, ಅವುಗಳ ಮಲ ಹಾಗೂ ಲಾಲಾರಸದಲ್ಲಿ ವೈರಸ್‌ ಕಂಡುಬರುತ್ತದೆ. ಇವು ಕೊಳೆತ ಹಣ್ಣುಗಳನ್ನು ಸೇವಿಸುವ ಮೂಲಕ ವೈರಸ್‌ ಹರಡುವಿಕೆಗೆ ಕಾರಣವಾಗುತ್ತವೆ” ಎಂದರು.

“ಬಾವಲಿಗಳು ಸೇವಿಸಿದ ಕೊಳೆತ ಹಣ್ಣುಗಳನ್ನು ಸೇವಿಸುವ ಹಂದಿಗಳಿಂದ ಈ ವೈರಸ್‌ ಮಾನವರಿಗೂ ಹರಡಬಹುದು. ಸೋಂಕಿತ ಹಂದಿಗಳೊಂದಿಗಿನ ನಿಕಟ ಸಂಪರ್ಕದಿಂದ ಈ ವೈರಸ್‌ ಮಾನವರಲ್ಲಿ ಹರಡಲು ಪ್ರಮುಖ ಕಾರಣಗಳಲ್ಲಿ ಒಂದಾಗಿರುತ್ತದೆ. ಕೆಲವೊಮ್ಮೆ ನಿಫಾ ವೈರಸ್‌ ಸೋಂಕಿತ ವ್ಯಕ್ತಿಗಳೊಂದಿಗಿನ ನಿಕಟ ಸಂಪರ್ಕದಿಂದಲೂ ಹರಡುವ ಸಾಧ್ಯತೆ ಇದೆ” ಎಂದು ಹೇಳಿದರು.

ನಿಫಾ ವೈರಸ್‌ನ ಲಕ್ಷಣಗಳು

ನಿಫಾ ವೈರಸ್‌ ಸೋಂಕಿತರಲ್ಲಿ ಆರಂಭದಲ್ಲಿ ಸೌಮ್ಯತರವಾದ ರೋಗಲಕ್ಷಣಗಳು ಕಾಣಿಸಬಹುದು. ಜ್ವರ, ಕೆಮ್ಮು, ತಲೆನೋವು, ತಲೆತಿರುಗುವಿಕೆ, ಕೆಮ್ಮ ಇಂತಹ ಲಕ್ಷಣಗಳು ಕಾಣಿಸಬಹುದು. ಈ ಸಮಸ್ಯೆ ತೀವ್ರವಾದರೆ ಎನ್ಸೆಫಾಲಿಟಿಸ್‌ (ಮೆದುಳಿನ ಉರಿಯೂತ), ಪ್ರಜ್ಞೆ ತಪ್ಪುವುದು, ತೀವ್ರ ಅನಾರೋಗ್ಯ, ಕೋಮಾದಂತಹ ಪರಿಸ್ಥಿತಿಯೂ ಎದುರಾಗಬಹುದು ಎನ್ನುತ್ತಾರೆ ಡಾ. ಅನಿಕೇತ್‌ ಮುಲೆ.

ನಿಫಾ ವೈರಸ್‌ಗೆ ಚಿಕಿತ್ಸೆ

ನಿಫಾ ವೈರಸ್‌ ಸೋಂಕಿಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್‌ ಚಿಕಿತ್ಸೆ ಇಲ್ಲ. ಉಸಿರಾಟದ ಕಾರ್ಯವನ್ನು ನಿರ್ವಹಿಸುವುದು, ಜ್ವರ ಹಾಗೂ ದೇಹದ ನೋವನ್ನು ನಿಯಂತ್ರಿಸುವುದು ಮತ್ತು ಇಂಟ್ರಾವೆನಸ್‌ ದ್ರವಗಳನ್ನು ದೇಹಕ್ಕೆ ನೀಡುವುದು ಈ ರೀತಿಯ ಆರೈಕೆಗಳು ಅವಶ್ಯವಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಪ್ರಾಯೋಗಿಕ ಚಿಕಿತ್ಸೆಗಳು ಮತ್ತು ಆಂಟಿವೈರಲ್‌ ಔಷಧಿಗಳನ್ನು ಪರಿಶೋಧಿಸಲಾಗಿದೆ. ಆದರೂ ಅವುಗಳ ಪರಿಣಾಮ ಈಗಲೂ ಅನಿಶ್ಚಿತವಾಗಿಯೇ ಉಳಿದಿದೆ. ನಿಫಾ ವೈರಸ್‌ನ ಗಂಭೀರ ಸ್ವರೂಪ ಮತ್ತು ಏಕಾಏಕಿ ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ಮಾರ್ಗಸೂಚಿಗಳು ಮತ್ತು ಶಿಫಾರಸುಗಳನ್ನು ಅನುಸರಿಸುವುದು ಮತ್ತು ಶಂಕಿತ ಪ್ರಕರಣಗಳು ಉದ್ಭವಿಸಿದರೆ ತುರ್ತು ವೈದ್ಯಕೀಯ ಆರೈಕೆ, ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

“ನಿಪಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಪಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಆಡುತ್ತದೆ. ಬಾವಲಿಯಿಂದ ಮತ್ತು ಪಕ್ಷಿಗಳು ಹಾಗೂ ಹಕ್ಕಿಗಳು ತಿಂದು ಬಿಟ್ಟ ಹಣ್ಣು ಹಂಪಲುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ಹರಡುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ” ಎಂದು ತಿಳಿಸಿದರು.

ರೋಗವನ್ನು ಪತ್ತೆ ಹಚ್ಚುವ ವಿಧಾನ

“ಎಲೀಸಾ ಅಧಾರಿತ ರಕ್ತ ಪರೀಕ್ಷೆಯಿಂದ ನಿಫಾ ವೈರಾಣುಗಳನ್ನು ಗುರುತಿಸಬಹುದು. ಆರ್‌ಟಿಪಿಸಿಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ”ಎಂದು ಹೇಳಿದರು.

ತಡೆಗಟ್ಟುವ ವಿಧಾನ

“ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ/ನೀರಾಗಳನ್ನು ಕುಡಿಯಬಾರದು. ತಾಜಾ ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರ ಇವುಗಳನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧಿಕರಿಸಬೇಕು.  ಅನಾರೋಗ್ಯದ ಹಂದಿಗಳನ್ನು ಇತರೆ ಪ್ರಾಣಿಗಳೊಂದಿಗಿನ ನೇರ ಸಂಪರ್ಕವನ್ನು ತಪ್ಪಿಸಬೇಕು” ಎಂದು ಈ ದಿನ.ಕಾಮ್‌ಗೆ ತಿಳಿಸಿದರು.

ಇದನ್ನೂ ಓದಿದ್ದೀರಾ? ಕೋಟಾ: ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ; ಈ ವರ್ಷದಲ್ಲಿ 25ನೇ ಘಟನೆ

“ಬಾವಲಿಗಳ ಪ್ರವೇಶವನ್ನು ತಪ್ಪಿಸಲು, ತೆರದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಬೇಕು. ಕೈಗಳನ್ನು ಸಂಪೂರ್ಣವಾಗಿ ಶುದ್ದೀಕರಿಸುವುದು ತಡೆಗಟ್ಟುವಿಕೆಯ ಬಹುಮುಖ್ಯ ಕ್ರಮವಾಗಿರುತ್ತದೆ. ನಿಫಾ ವೈರಸ್ ಸೋಂಕಿತ ರೋಗಿಯು ಉಪಯೋಗಿಸಿದ ಬಟ್ಟೆ ಮತ್ತು ಇತರ ಪದಾರ್ಥಗಳನ್ನು ಸೋಂಕು ನಿವಾರಣೆ ಮಾಡಬೇಕು. ಸೋಂಕಿತ ರೋಗಿಯು ಕನಿಷ್ಟ 15 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಬಾವಲಿಗಳಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು. ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ವಿಶೇಷ ಆರೈಕೆ ಬಳಕೆ ಮುಖಗವಸು ಮತ್ತು ಕೈಗವಸುಗಳನ್ನು ಉಪಯೋಗಿಸಬೇಕು. ಇದರಿಂದ ನಿಫಾ ವೈರಸ್‌ ತಡೆಗಟ್ಟಬಹುದು” ಎಂದು ತಿಳಿಸಿದರು.  

“ನಮ್ಮ ತಾಲೂಕಿನಲ್ಲಿ ಸಂಶಯಾಸ್ಪದವಾಗಿ ನಿಫಾ ವೈರಸ್ ಸೋಂಕಿತರು ಕಂಡುಬಂದರೆ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆಹಾಗಾಗಿ ಮುಂಜಾಗೃತಾ ಕ್ರಮವಾಗಿ ಮೂರು ಹಾಸಿಗೆಯ ಐಸೋಲೇಶನ್ ವಾರ್ಡ್ ಸಿದ್ಧತೆ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಪರಿಸರ ಉಳಿಸುವ ವಾಗ್ದಾನ ಪಕ್ಷಗಳ ಪ್ರಣಾಳಿಕೆ ಸೇರಲಿ: ಡಾ. ವಾಸು

ಆರೋಗ್ಯ ರಕ್ಷಣೆ ವ್ಯಕ್ತಿಗತವಾಗಿ ಉಳಿದಿಲ್ಲ. ಹಾಗಾಗಿ ವಾಯುಗುಣ ವೈಪರೀತ್ಯ ಮತ್ತು ಆರೋಗ್ಯದ...

ದಾವಣಗೆರೆ | ಅಸ್ಪೃಶ್ಯತಾ ನಿವಾರಣಾ ಜಾಗೃತಿ ಕಲಾ ಜಾಥಾ

ಎಲ್ಲ ಸಮುದಾಯಗಳ ಮಾನವರು ಒಂದೇ. ನಾವೆಲ್ಲ ಕೂಡಿ ಸಹೋದರತ್ವ ಭಾವನೆಯಿಂದ ಬದುಕಬೇಕೆಂಬ...

ಮಂಗಳೂರು | ಕರಾವಳಿಯ ಇತಿಹಾಸವನ್ನು ಕಟ್ಟಿದವರು ಮಿಷನರಿಗಳು; ಪ್ರೊ. ಪುರುಷೋತ್ತಮ ಬಿಳಿಮಲೆ

ಕರಾವಳಿಯ ಇತಿಹಾಸ ಬರೆದವರಲ್ಲಿ ಪ್ರಮುಖ ಪಾತ್ರವನ್ನು ಬಿ.ಎ ಸಾಲೆತ್ತೂರು, ಗೋವಿಂದ ಪೈ...

ತುಮಕೂರು | ಕೆರೆ ಒತ್ತುವರಿ ತೆರವು ಮಾಡಿ ಕೆರೆಯಾಗಿಯೇ ಉಳಿಸಿ: ಬೈಚೇನಹಳ್ಳಿ ಗ್ರಾಮಸ್ಥರ ಮನವಿ

ಕೆರೆಯ ಜಾಗವನ್ನು ಮಣ್ಣು ತುಂಬಿಸಿಕೊಂಡು ಒತ್ತುವರಿ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದು,...