ಭಾರತೀಯ ಮೂಲದ ಮರಿಯನ್ ಬಯೋಟೆಕ್ ಕೆಮ್ಮಿನ ಸಿರಪ್ ನಿಂದ 68 ಮಕ್ಕಳು ಮೃತಪಟ್ಟ ಅಪರಾಧಕ್ಕಾಗಿ ಉಜ್ಬೇಕಿಸ್ತಾನ ಕೋರ್ಟ್ ಒಬ್ಬ ಭಾರತೀಯ ಸೇರಿ 23 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೋರ್ಟ್ 6 ತಿಂಗಳ ದೀರ್ಘಾವಧಿ ವಿಚಾರಣೆ ನಡೆಸಿತ್ತು.
ಸಿರಪ್ ನಿಂದ 65 ಮಂದಿ ಮೃತಪಟ್ಟಿದ್ದಾರೆ ಎಂದು ಸೆಂಟ್ರಲ್ ಏಷ್ಯನ್ ನೇಷನ್ ಈ ಮೊದಲು ತಿಳಿಸಿತ್ತು. ಆದರೆ ಕಳೆದ ತಿಂಗಳು ಸರ್ಕಾರಿ ಅಭಿಯೋಜಕರು ಸಾವಿನ ಸಂಖ್ಯೆ ಹೆಚ್ಚಿದ್ದು ಹಾಗೂ ಇನ್ನು ಇಬ್ಬರ ಮೇಲೆ ಆರೋಪವೊರಿಸಿದ್ದರು.
ಅಪರಾಧಿಗಳಿಗೆ 2 ರಿಂದ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಲ್ಲಿ ಕುರಾಮ್ಯಾಕ್ಸ್ ಮೆಡಿಕಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಭಾರತೀಯ ಮೂಲದ ಸಿಂಗ್ ರಾಘವೇಂದ್ರ ಪ್ರಟಾರ್ ಎಂಬುವವರು ಸೇರಿದ್ದಾರೆ. ಮರಿಯನ್ ಬಯೋಟೆಕ್ ತಯಾರಿಸಿದ ಸಿರಪ್‌ಅನ್ನು ಉಜ್ಬೇಕಿಸ್ತಾನದಲ್ಲಿ ಮಾರಾಟ ಮಾಡಿದ ಕಂಪನಿಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಕಳಪೆ ಔಷಧಿಯನ್ನು ಆಮದು ಮಾಡಿಕೊಳ್ಳಲು ಪರವಾನಗಿ ನೀಡಲು ಉಸ್ತುವಾರಿ ವಹಿಸಿದ್ದ ಹಿರಿಯ ಅಧಿಕಾರಿಗಳಿಗೆ ದೀರ್ಘಾವಧಿ ಶಿಕ್ಷೆ ವಿಧಿಸಲಾಗಿದೆ.
ಸಿರಪ್‌ನಿಂದ ಮೃತಪಟ್ಟ ಹಾಗೂ ಅಂಗವಿಕಲಗೊಂಡ 68 ಮಕ್ಕಳ ಕುಟುಂಬಗಳಿಗೆ 80 ಸಾವಿರ ಡಾಲರ್ ಪರಿಹಾರ ನೀಡಲು ಕೋರ್ಟ್ ನಿರ್ಧರಿಸಿದೆ.