ಭಾರತದ ವಿಷಪೂರಿತ ಕೆಮ್ಮಿನ ಸಿರಪ್‌ ಮಾರುಕಟ್ಟೆಗೆ ಬರಲು ಲಂಚ ನೀಡಿಕೆ: ಉಜ್ಬೇಕಿಸ್ತಾನ್

Date:

Advertisements

ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಲಿಮಿಟೆಡ್ ಉತ್ಪಾದಿಸಿದ ವಿಷಪೂರಿತ ಕೆಮ್ಮಿನ ಸಿರಪ್‌ ವಿತರಕರು ಔಷಧಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಲಂಚ ನೀಡಿದ್ದಾರೆ ಎಂದು ಉಜ್ಬೇಕಿಸ್ತಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಕಡ್ಡಾಯ ಪರೀಕ್ಷೆಯನ್ನು ಕೈಗೊಳ್ಳದಿರಲು ಕೆಮ್ಮಿನ ಸಿರಪ್‌ ವಿತರಕರು 33,000 ಡಾಲರ್ ಲಂಚ ಪಾವತಿಸಿದ್ದಾರೆ ಎಂದು ಉಜ್ಬೇಕಿಸ್ತಾನ್ ಸ್ಟೇಟ್ ಪ್ರಾಸಿಕ್ಯೂಟರ್‌ಗಳು ವಿಚಾರಣೆಯ ಸಮಯದಲ್ಲಿ ಆರೋಪಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಮಧ್ಯ ಏಷ್ಯಾದ ದೇಶದಲ್ಲಿ ಭಾರತೀಯ ಮೂಲದ ಕಂಪನಿಯು ಉತ್ಪಾದಿಸಿದ ಕೆಮ್ಮು ಸಿರಪ್ (ಡಾಕ್ 1 ಮ್ಯಾಕ್ಸ್) ಸೇವಿಸಿದ ನಂತರ ಸಾವಿಗೀಡಾದ 65 ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದೆ.

Advertisements

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಮ್ಮು ಸಿರಪ್ ಸೇವಿಸಿದ ನಂತರ ನಮ್ಮ ದೇಶದಲ್ಲಿ 20 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್‌ ಸರ್ಕಾರ ಘೋಷಿಸಿತು. ಆದಾಗ್ಯೂ, ದೇಶದ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆಯನ್ನು65ಕ್ಕೆ ಹೆಚ್ಚಿಸಿತು. ಆದರೆ, 45 ಮಕ್ಕಳ ಸಾವುಗಳು ಹೇಗೆ ವರದಿಯಾಗದೆ ಉಳಿದಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.

ಮೇರಿಯನ್-ಬಯೋಟೆಕ್ ಲಿಮಿಟೆಡ್‌ನಿಂದ ಉತ್ಪಾದಿಸಲ್ಪಟ್ಟ ಔಷಧದಲ್ಲಿ ಮಾರಣಾಂತಿಕ ಸಂಯುಕ್ತ ಎಥಿಲೀನ್ ಗ್ಲೈಕೋಲ್ ಎಂಬ ವಿಷಪೂರಿತ ಅಂಶ ಒಳಗೊಂಡಿದೆ ಎಂಬ ವರದಿ ಬಂದ ನಂತರ ಭಾರತವು ಉತ್ಪಾದನಾ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಿದೆ.

ಈ ಸುದ್ದಿ ಓದಿದ್ದೀರಾ? ‘ಓವರ್‌ ಸ್ಮಾರ್ಟ್’ ವಿಚಾರಕ್ಕೆ ಬಿಜೆಪಿ ಸಂಸದೆಯೊಂದಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮಾತಿನ ಚಕಮಕಿ

ಆದಾಗ್ಯೂ, ತಪಾಸಣೆಯು ಉಜ್ಬೇಕಿಸ್ತಾನ್‌ನಲ್ಲಿ ಪರೀಕ್ಷೆಗಳನ್ನು ಒಳಗೊಂಡಿರಬೇಕೇ ಅಥವಾ ಭಾರತದಲ್ಲಿ ತಯಾರಕರು ಪರೀಕ್ಷೆಗಳನ್ನು ನಡೆಸಬೇಕೆ ಎಂದು ಅಸ್ಪಷ್ಟವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಏಷ್ಯಾದ ದೇಶವು ಒಬ್ಬ ಭಾರತೀಯ ಸೇರಿದಂತೆ 21 ಜನರನ್ನು ವಿಚಾರಣೆಗೆ ಒಳಪಡಿಸಿದೆ.

21 ಆರೋಪಿಗಳ ಪೈಕಿ ಏಳು ಆರೋಪಿಗಳು ತಮ್ಮ ವಿರುದ್ಧದ ಕೆಲವು ಆರೋಪಗಳಿಗೆ ತಪ್ಪೊಪ್ಪಿಕೊಂಡರು. ಇದರಲ್ಲಿ ತೆರಿಗೆ ವಂಚನೆ, ಕಳಪೆ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ನಕಲಿ ಮತ್ತು ಲಂಚ ಆರೋಪಗಳು ಒಳಗೊಂಡಿವೆ.

ಒಂದು ವರ್ಷದ ಹಿಂದೆ, ಗ್ಯಾಂಬಿಯಾ ದೇಶವು ಭಾರತದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸಿದ ವಿಷಪೂರಿತ ಪ್ಯಾರಸಿಟಮಾಲ್ ಸಿರಪ್‌ಗಳನ್ನು ಆಮದು ಮಾಡಿಕೊಂಡ ನಂತರ ಆ ಸಿರಪ್‌ ಸೇವಿಸಿದ ನಂತರ 66 ಮಕ್ಕಳು ತೀವ್ರ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದರು.

ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನ ಮಕ್ಕಳು 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು 2022ರ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಮೃತಪಟ್ಟಿದ್ದಾರೆ.

ಈ ವರ್ಷದ ಫೆಬ್ರುವರಿಯಲ್ಲಿ, ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಭಾರತದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಐ ಡ್ರಾಪ್ ಅನ್ನು ಬಳಸದಂತೆ ಎಚ್ಚರಿಕೆ ನೀಡಿತು. ಇದು ಏಕಾಏಕಿ ಕನಿಷ್ಠ 55 ರೋಗಿಗಳಲ್ಲಿ ಸೋಂಕುಗಳು, ಕುರುಡುತನ ಮತ್ತು ಒಂದು ಸಾವು ಸೇರಿದಂತೆ ಪ್ರತಿಕೂಲ ಘಟನೆಗಳಿಗೆ ಕಾರಣವಾದ ನಂತರ ಬಳಸದಂತೆ ಆದೇಶಿಸಲಾಯಿತು.

ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಭಾರತೀಯ ಸಂಸ್ಥೆಗಳು ತಮ್ಮ ಔಷಧಿಗಳ ಗುಣಮಟ್ಟಕ್ಕಾಗಿ ಪರಿಶೀಲನೆಗೆ ಒಳಪಟ್ಟಿವೆ. ತಜ್ಞರು ಈ ಔಷಧಿಗಳನ್ನು ತಯಾರಿಸಲು ಬಳಸುವ ಉತ್ಪಾದನಾ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X