ಕೋಲಾರ | ಹಾಸ್ಟೆಲ್‌ಗೆ ಅನಾಮಿಕ ಯುವಕನ ಪ್ರವೇಶ; ಪೋಕ್ಸೋ ಪ್ರಕರಣ ದಾಖಲು

Date:

ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ಅನಾಮಿಕ ಯುವಕನೊಬ್ಬ ಪ್ರವೇಶ ಕೊಟ್ಟಿದ್ದು, ಬಾಲಕಿಯರು ಭಯದಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದ್ದ ಘಟನೆ ಗುರುವಾರ ರಾತ್ರಿ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ನಡೆದಿದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಈ ಹಾಸ್ಟೆಲ್‌ನಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ಬರುವ ಹೆಣ್ಣು ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ.

ಬಡಮಕ್ಕಳೇ ಇರುವ ಹಾಸ್ಟೆಲ್‌ನಲ್ಲಿ ವಾರ್ಡನ್‌, ಅಡುಗೆಯವರು ಸೇರಿದಂತೆ ಇತರ ಸಿಬ್ಬಂದಿಗಳೂ ಇದ್ದಾರೆ. ಇವರೆಲ್ಲರ ಕಣ್ಣುತಪ್ಪಿಸಿ ಒಬ್ಬ ಯುವಕ ಹಾಸ್ಟೆಲ್‌ ಪ್ರವೇಶ ಮಾಡಿದ್ದಾನೆ. ಹಾಸ್ಟೆಲ್‌ಗೆ ಬಂದಿದ್ದು ಮಾತ್ರವಲ್ಲದೆ, ಹೆಣ್ಮಕ್ಕಳು ವಿಶ್ರಾಂತಿ ಪಡೆಯುವ ಕೋಣೆಯೊಳಗೆ ನೇರ ಪ್ರವೇಶ ಮಾಡಿದ್ದಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ಕೋಣೆಯೊಳಗೆ ಪ್ರವೇಶ ಮಾಡಿದ ಆತ ಅಲ್ಲಿ ಏನನ್ನೋ ಹುಡುಕುವಂತೆ ನಟಿಸಿದ್ದಾನೆ. ಯಾರು ನೀನು ಎಂದು ಕೇಳಿದ್ದಕ್ಕೆ ಏನನ್ನೂ ಹೇಳದೆ ಅವರನ್ನು ಹೆದರಿಸುವಂತೆ ನೋಡಿ ಹೊರ ಹೋಗಿದ್ದಾನೆ. ಈ ನಡುವೆ, ಒಬ್ಬ ಬಾಲಕಿ ಸ್ನಾನದ ಮನೆಯಲ್ಲಿದ್ದಾಗ ಹೊರಗಿನಿಂದ ಚಿಲಕವನ್ನು ಅತ್ತಿತ್ತ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದರಿಂದ ಪಕ್ಕದ ಮನೆಗಳವರು ಓಡಿ ಬಂದಿದ್ದಾರೆ. ಅವರಲ್ಲಿ ವಿಷಯವನ್ನು ತಿಳಿಸಿದ್ದು, ಅವರೆಲ್ಲ ಆತನಿಗಾಗಿ ಹುಡುಕಾಡಿದ್ದಾರೆ. ಇದಾದ ಬಳಿಕ ಕೆಲವು ಮಕ್ಕಳು ಹಾಸ್ಟೆಲ್‌ನಲ್ಲಿ ಉಳಿಯಲು ಭಯಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಪಕ್ಕದ ಕೆಲವು ಮನೆಗಳಲ್ಲಿ ಆಶ್ರಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹಳೆ ಕಟ್ಟಡದಲ್ಲಿರುವ ಹಾಸ್ಟೆಲ್‌ ಇದಾಗಿದ್ದು, ಹೆಣ್ಣುಮಕ್ಕಳ ವಸತಿ ನಿಲಯವಾದರೂ ಭದ್ರತೆಯೇ ಇಲ್ಲದಂತಾಗಿದೆ. ಇಲ್ಲಿನ ಬಾಗಿಲುಗಳು ಗಟ್ಟಿ ಇಲ್ಲ, ಸರಿಯಾದ ಭದ್ರತಾ ಸಿಬ್ಬಂದಿಯೂ ಇಲ್ಲ. ಈ ಕಟ್ಟಡಕ್ಕೆ ಅಕ್ಕ ಪಕ್ಕದ ಕಟ್ಟಡ ಮತ್ತು ಇತರ ಭಾಗಗಳಿಂದ ನುಗ್ಗಬಹುದಾದಷ್ಟು ಮುಕ್ತವಾಗಿರುವುದು ಕಂಡುಬಂದಿದೆ.

ಹಾಸ್ಟೆಲ್‌ ಒಳಭಾಗವೂ ವ್ಯವಸ್ಥಿತವಾಗಿಲ್ಲ. ಯಾರಾದರೂ ಬಂದು ಒಳಗೆ ಸೇರಿಕೊಂಡರೂ ಗೊತ್ತಾಗದಷ್ಟು ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಕೆಲವು ರೂಮ್‌ಗಳಲ್ಲಿ ಮಂಚಗಳನ್ನು, ಟೈಲರಿಂಗ್‌ ಮೆಷಿನ್‌ಗಳನ್ನು ಗುಡ್ಡೆ ಹಾಕಲಾಗಿದೆ. ಇವುಗಳು ಬಳಕೆಯಾಗದೆ ಧೂಳು ಹಿಡಿಯುತ್ತಿವೆ. ಹೀಗಾಗಿ ಅಲ್ಲೊಂದು ಭಯದ ವಾತಾವರಣವಿದೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಪೊಲೀಸ್‌ ಪೇದೆ ಮನೆ ಮೇಲೆ ಲೋಕಾಯುಕ್ತ ದಾಳಿ; ₹1.80 ಕೋಟಿ ಮೌಲ್ಯದ ಆಸ್ತಿ ಪತ್ತೆ

ಹಾಸ್ಟೆಲ್‌ ವಾರ್ಡನ್‌ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೇತಮಂಗಲ ನಿವಾಸಿ ಮುರಳಿ (25) ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಪ್ರಕರಣದಡಿ ಕೇಸು ದಾಖಲಿಸಿದ್ದಾರೆ. ಇದೀಗ ಆತನ ಉದ್ದೇಶದ ಬಗ್ಗೆ ತನಿಖೆಯಾಗಬೇಕಾಗಿದೆ.

ಹಾಸ್ಟೆಲ್‌ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸದ ಅಧಿಕಾರಿಗಳು ಮತ್ತು ವಾರ್ಡನ್‌ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಡೊನೇಷನ್ ಹಾವಳಿ ತಡೆಗಟ್ಟುವಂತೆ ಡಿವಿಪಿ ಆಗ್ರಹ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಅಂತಹ ಸಂಸ್ಥೆಗಳ ವಿರುದ್ಧ...

ದಾವಣಗೆರೆ | ಅಂಜಲಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹ

ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರಳನ್ನು ಮನೆಗೆ ನುಗ್ಗಿ ಕೊಲೆಮಾಡಿದ ಆರೋಪಿಗೆ ಗಲ್ಲು ಶಿಕ್ಷೆ...

ದಾವಣಗೆರೆ | ಸ್ಮಾರ್ಟ್‌ ಸಿಟಿ ರಿಂಗ್‌ ರೋಡ್‌; ಸ್ಥಳಾಂತರಗೊಂಡವರ ಬದುಕು ದುಸ್ತರ

ಸ್ಮಾರ್ಟ್‌ ಸಿಟಿ ರಿಂಗ್‌ ರೋಡ್‌ಗಾಗಿ ನಮ್ಮ ಮನೆಗಳನ್ನು ವಶಪಡಿಸಿಕೊಂಡು, ನಮ್ಮನ್ನು ಒಕ್ಕಲೆಬ್ಬಿಸಿದರು....

ಮೇ 26ರಂದು ‍ಬಂಗಾಳಕೊಲ್ಲಿಯಲ್ಲಿ ಉಂಟಾಗಲಿದೆ ‘ರೆಮಲ್ ಚಂಡ‌ಮಾರುತ’; ಭಾರೀ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಮೇ 26ರ ವೇಳೆಗೆ ತೀವ್ರ ಚಂಡಮಾರುತವಾಗಿ ಪಶ್ಚಿಮ...