ವಿಶ್ವದಾದ್ಯಂತ ಸಾಮಾಜಿಕ ಮಾಧ್ಯಮದ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮಿರುವ ವಾಟ್ಸಾಪ್‌ನಲ್ಲಿ ಆಗಾಗ ನೂತನ ಆಯ್ಕೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಬಳಕೆದಾರರಿಗೆ ಸಂವಹನಕ್ಕೆ ಮತ್ತಷ್ಟು ಸುಲಭವಾಗಲು ಬಗೆಬಗೆಯ ಫೀಚರ್‌ಗಳನ್ನು ಮಾತೃಸಂಸ್ಥೆ ಮೆಟಾ ಅಳವಡಿಸುತ್ತದೆ. ಅವುಗಳಲ್ಲಿ ಕೆಲವುಗಳ ಬಗ್ಗೆ ತಿಳಿದುಕೊಳ್ಳೋಣ.
ಇಂಟರ್ನೆಟ್ ಇಲ್ಲದೆ ಮೊಬೈಲ್‌ನಲ್ಲಿ ಯುಪಿಐ ಪೇಮೆಂಟ್ ಮಾಡುವ ಆಯ್ಕೆ
ಯುಪಿಐ ವಹಿವಾಟುಗಳನ್ನು ಆಫ್‌ಲೈನ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಪ್ರಕ್ರಿಯೆಗೊಳಿಸಲು ಎನ್‌ಪಿಸಿಐ ಯುಎಸ್‌ಎಸ್‌ಡಿ ಕೋಡ್‌ಅನ್ನು ಈಗಾಗಲೇ ಆರಂಭಿಸಲಾಗಿದೆ. ಕೀಪ್ಯಾಡ್ ರೀತಿಯ ಫೀಚರ್ ಫೋನ್ ಬಳಕೆದಾರರು ‘*99# ಸೇವೆ’ ಅನ್ನು ಡಯಲ್ ಮಾಡುವ ಮೂಲಕ ಹಣವನ್ನು ಕಳುಹಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಯುಪಿಐ ಸೇವೆಯನ್ನು ಆಫ್‌ಲೈನ್‌ನಲ್ಲಿ ಪ್ರಾರಂಭಿಸಬಹುದು. ನೆಟ್‌ವರ್ಕ್ ಇಲ್ಲದ ಸಮಯದಲ್ಲಿ ಅಥವಾ ಇಂಟರ್ನೆಟ್ ಸಂಪರ್ಕ ಅಸ್ತಿತ್ವದಲ್ಲಿಲ್ಲದ / ತುಂಬಾ ನಿಧಾನವಾಗಿರುವ ಸ್ಥಳದಲ್ಲಿದ್ದರೆ ಯುಪಿಐ ಬೆಂಬಲಿಸುವ ಯಾವುದೇ ಯುಪಿಐ ಅಪ್ಲಿಕೇಶನ್‌ಗಳಲ್ಲದೆ ನೇರ ಮೊಬೈಲ್ ಮೂಲಕ ನೀವು ಯಾವುದೇ ವಹಿವಾಟುಗಳನ್ನು ಮಾಡಬಹುದು. ಆಂಡ್ರಾಯ್ಡ್ ಅಥವಾ ಆಪಲ್ ಫೋನ್‌ಗಳಲ್ಲಿ ಇಂಟರ್‌ನೆಟ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರೆ ತಮ್ಮ ಬಳಿಯಿರುವ ಹಳೆಯ ಫೀಚರ್ ಫೋನ್‌ಗೆ ಸದ್ಯದ ಮಟ್ಟಿಗೆ ಸಿಮ್ ಬದಲಿಸಿ ಹಣವನ್ನು ಪಾವತಿಸಬಹುದು. ಇಂಟರ್ನೆಟ್ ಇಲ್ಲದಿದ್ದಲ್ಲಿ ಅವರು ಬಳಸಬಹುದಾದ ತುರ್ತು ವಿಶೇಷ ಆಯ್ಕೆ ಇದಾಗಿದೆ. ಫೀಚರ್ ಫೋನ್ ಬಳಕೆದಾರರಿಗೆ ಅವರು ಯಾವುದೇ ಯುಪಿಐ ಸೌಲಭ್ಯಗಳನ್ನು ಬಳಸಬಹುದಾದ ಏಕೈಕ ಮಾರ್ಗವಾಗಿದೆ.
ಯುಪಿಐ ಪಾವತಿಸುವ ಬಗೆ
- ಮೊದಲಿಗೆ ನೀವು ‘ಯುಪಿಐ’ನೊಂದಿಗೆ ನೋಂದಾಯಿಸಿರುವ ಫೋನ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ನಂತರ ಅದೇ ಫೋನಿನಿಂದ ಇಂಟರ್‌ನೆಟ್ ಇಲ್ಲದೆ ಯುಪಿಐ ಪಾವತಿ ಮಾಡುವ ಸೇವೆಯನ್ನು ಬಳಸಲು ಆರಂಭಿಸಿ.
- ನಂತರ ಫೋನ್‌ನಲ್ಲಿ ಕೀಪ್ಯಾಡ್ ತೆರೆದು *99# ಎಂದು ಟೈಪಿಸಿ ‘ಕರೆ’ ಬಟನ್ ಮೇಲೆ ಟ್ಯಾಪ್ ಮಾಡಿ.
- ಹಣವನ್ನು ಕಳುಹಿಸಲು ‘1’ ಒಳಗೊಂಡಂತೆ ಬಹಳಷ್ಟು ಆಯ್ಕೆಗಳೊಂದಿಗೆ ಪಾಪ್ ಅಪ್ ಮೆನು ತೆರೆದುಕೊಳ್ಳುತ್ತದೆ. ಇದರಲ್ಲಿ ‘1’ ಅನ್ನು ಟ್ಯಾಪ್ ಮಾಡಿ ಮತ್ತು ನಂತರ ‘ಸೆಂಡ್’ ಮೇಲೆ ಟ್ಯಾಪ್ ಮಾಡುವುದರೊಂದಿಗೆ ಹಣ ಕಳುಹಿಸುವ ಆಯ್ಕೆಯನ್ನು ಆಯ್ಕೆಮಾಡಿ.
- ಆನಂತರ ಪಾವತಿ ಸ್ವೀಕರಿಸುವ ವ್ಯಕ್ತಿಯಿಂದ ನೀವು ಹೊಂದಿರುವ ಮಾಹಿತಿಯನ್ನು ಆಯ್ಕೆ ಮಾಡಿ. ಅವರ ಮೊಬೈಲ್ ಸಂಖ್ಯೆಯನ್ನು ಟೈಪಿಸಿದ ನಂತರ ‘ಸೆಂಡ್’ ಅನ್ನು ಟ್ಯಾಪ್ ಮಾಡಿ.
- ನೀವು ಕಳುಹಿಸುವ ವ್ಯಕ್ತಿಯ ಯುಪಿಐ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಮಾತ್ರ ನಮೂದಿಸಿ ಮತ್ತು ‘ಸೆಂಡ್’ ಅನ್ನು ಟ್ಯಾಪ್ ಮಾಡಿ.
- ಮೊಬೈಲ್ ಸಂಖ್ಯೆ ಸರಿಯಾಗಿದ್ದಾರೆ ‘5’ ಅನ್ನು ಟೈಪಿಸಿ ಖಚಿತಪಡಿಸಿಕೊಳ್ಳಿ. ನೀವು ಕಳುಹಿಸಲು ಬಯಸುವ ಹಣದ ಮೊತ್ತವನ್ನು ನಮೂದಿಸಿ ನಂತರ ‘ಸೆಂಡ್’ ಮೇಲೆ ಒತ್ತಿರಿ.
- ಪಾಪ್‌ಅಪ್ ಮೆನುವಿನಲ್ಲಿ ಪಾವತಿಯ ಟಿಪ್ಪಣಿ ಅಂದರೆ ಯಾರಿಗೆ, ಏಕೆ ಎಂಬ ಒಂದಿಷ್ಟು ವಿವರಗಳು ಬೇಕಿದ್ದರೆ ನೀಡಿ ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ ಯುಪಿಐ ಪಿನ್ ಅನ್ನು ಟೈಪಿಸಿ.
ಈ ಸುದ್ದಿ ಓದಿದ್ದೀರಾ? ಭೂಮಿಯತ್ತ ಧಾವಿಸುತ್ತಿರುವ ಬೃಹತ್ ಗಾತ್ರದ ಕ್ಷುದ್ರಗ್ರಹಗಳು; ಪೃಥ್ವಿಗೆ ಕಾದಿದೆಯಾ ಗಂಡಾಂತರ?
ವಾಟ್ಸಾಪ್‌ನಲ್ಲಿ ಡಿಲೀಟ್ ಆದ ಸಂದೇಶ ಪುನಃ ಓದಲು ಮಾಡಬೇಕಾದ ವಿಧಾನಗಳು
ವಾಟ್ಸಾಪ್‌ನಲ್ಲಿ ನಿಮಗೆ ಬಂದ ಸಂದೇಶ ಓದುವ ಮುಂಚೆಯೆ ಆಕಸ್ಮಿಕವಾಗಿ ಡಿಲೀಟ್ ಆದರೆ ಚಿಂತಿಸಬೇಕಿಲ್ಲ. ಸಂದೇಶಗಳನ್ನು ನೀವು ನೋಡಲು ಸಾಧ್ಯವಾಗದಿದ್ದರೂ ಕಳುಹಿಸುವವರು ಚಾಟ್‌ನಿಂದ ಅಳಿಸಿರುವ ಸಂದೇಶಗಳನ್ನು ಪಡೆಯಲು ನೀವು ಹಲವಾರು ವಿಧಾನಗಳನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಸಂದೇಶಗಳನ್ನು ಹೇಗೆ ವೀಕ್ಷಿಸಬಹುದು ಎಂಬ ಆಯ್ಕೆಗಳು ಇಲ್ಲಿವೆ.
ಆಂಡ್ರಾಯ್ಡ್‌ನಲ್ಲಿ ಡಿಲೀಟ್ ಆದ ಸಂದೇಶಗಳನ್ನು ಓದುವ ಬಗೆ
- ಆಂಡ್ರಾಯ್ಡ್ 11 ಮೇಲ್ಪಟ್ಟ ಫೋನ್ ಬಳಕೆದಾರರಿಗೆ ಈ ಆಯ್ಕೆ ಸುಲಭವಾಗಿ ಲಭ್ಯವಿದೆ. ನೋಟಿಫಿಕೇಶನ್ ಪರಿಶೀಲಿಸುವ ಮೂಲಕ ನೀವು ಡಿಲೀಟ್ ಆದ ವಾಟ್ಸಾಪ್ ಸಂದೇಶಗಳನ್ನು ಓದಬಹುದು.
- ಮೊದಲು ನಿಮ್ಮ ಫೋನ್ ವಾಟ್ಸಾಪ್ ಅಪ್ಡೇಟ್ ಮಾಡಿ ತೆರೆಯಿರಿ
- ನಂತರ ‘ಸೆಟ್ಟಿಂಗ್’ ಆಯ್ಕೆಗೆ ಹೋಗಿ ಅಪ್ಲಿಕೇಶನ್‌ಗಳು ಮತ್ತು ನೋಟಿಫಿಕೇಶನ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ
- ಅನಂತರ ನೋಟಿಫಿಕೇಶನ್ ಆಯ್ಕೆಮಾಡಿ ‘ನೋಟಿಫಿಕೇಶನ್ ಹಿಸ್ಟರಿ’ ಟ್ಯಾಪ್ ಮಾಡಿ
- ಇದನ್ನು ಆನ್ ಮಾಡಲು ‘ನೋಟಿಫಿಕೇಶನ್ ಹಿಸ್ಟರಿ ಬಳಸಿ’ ಪಕ್ಕದಲ್ಲಿರುವ ಬಟನ್ ಅನ್ನು ಟಾಗಲ್ ಮಾಡಿ
- ನೋಟಿಫಿಕೇಶನ್ ಹಿಸ್ಟರಿ ಆನ್ ಆದ ನಂತರ ವಾಟ್ಸಾಪ್ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ್ದರೂ ನೋಟಿಫಿಕೇಶನ್‌ಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
ಡಿಲೀಟ್ ಆದ ವಾಟ್ಸಾಪ್ ಚಾಟ್‌ಗಳನ್ನು ಮರುಪಡೆಯುವುದು
- ಚಾಟ್‌ಗಳನ್ನು ಡಿಲೀಟ್ ಆಗುವ ಮೊದಲು ನೀವು ವಾಟ್ಸಾಪ್ ಬ್ಯಾಕ್-ಅಪ್ ಅನ್ನು ಸಕ್ರಿಯಗೊಳಿಸಿದ್ದರೆ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಮರುಪಡೆಯುವುದು ಸುಲಭವಾಗುತ್ತದೆ. ನೀವು ಬ್ಯಾಕಪ್ ಮಾಡಿದ ವಾಟ್ಸಾಪ್ ಡೇಟಾವನ್ನು ವಾಟ್ಸಾಪ್ ಅಪ್ಲಿಕೇಶನ್‌ಗೆ ವಾಪಸ್ ಪಡೆದು ಡಿಲೀಟ್ ಆದ ವಾಟ್ಸಾಪ್ ಸಂದೇಶಗಳನ್ನು ಮರುಪಡೆಯಲಾಗುತ್ತದೆ.
- ಇದಲ್ಲದೆ ನೀವು ಗೂಗಲ್ ಡ್ರೈವ್ ಮೂಲಕವೂ ವಾಟ್ಸಾಪ್ ಸಂದೇಶಗಳನ್ನು ಮರು ಪಡೆಯಬಹುದು. ವಾಟ್ಸಾಪ್ ಡೇಟಾ ಸೇರಿದಂತೆ ಎಲ್ಲ ಫೈಲ್‌ಗಳನ್ನು ಬ್ಯಾಕಪ್ ಮಾಡಿ ಪಡೆಯಲು ಗೂಗಲ್ ಡ್ರೈವ್ ಸುರಕ್ಷಿತ ಆಯ್ಕೆಯಾಗಿದೆ.
‘ಸರ್ಚ್ ಬೈ ಡೇಟ್’ ಮೂಲಕ ಹಳೆಯ ಸಂದೇಶಗಳನ್ನು ಸುಲಭವಾಗಿ ಹುಡುಕಬಹುದು
ನಿಮ್ಮ ಹಳೆಯ ಸಂದೇಶಗಳನ್ನು ವಾಟ್ಸಾಪ್ ಗ್ರೂಪ್ ಅಥವಾ ವೈಯಕ್ತಿಕ ಸಂಖ್ಯೆಯಲ್ಲಿ ‘ಸರ್ಚ್ ಬೈ ಡೇಟ್'(Search by Date) ಎಂಬ ಆಯ್ಕೆಯೊಂದಿಗೆ ಕ್ಷಣಾರ್ಧದಲ್ಲಿ ನಿಮಗೆ ಬೀಕಿರುವ ಹಳೆಯ ಸಂದೇಶಗಳನ್ನು ಹುಡುಕಿ ಪಡೆಯಬಹುದು. ಹಳೆಯ ಚಾಟ್ ಮೆಸೇಜ್‌ಗಳನ್ನು ನೇರವಾಗಿ ದಿನಾಂಕದ ಆಧಾರದ ಮೇರೆಗೆ ಹುಡುಕಲು ‘ಸರ್ಚ್ ಬೈ ಡೇಟ್’ ಅನುಮತಿಸುತ್ತದೆ. ಇದು ಆಪಲ್, ಆಂಡ್ರಾಯ್ಡ್, ಮ್ಯಾಕ್, ಡೆಸ್ಕ್‌ಟಾಪ್ ಮತ್ತು ವಾಟ್ಸಾಪ್ ವೆಬ್‌ನಂತಹ ಇತರ ವೇದಿಕೆಗಳಲ್ಲೂ ಈ ಹೊಸ ಫೀಚರ್ ಲಭ್ಯವಿದೆ.
- ಮೊದಲು ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿ ತೆರೆಯಿರಿ
- ವೈಯಕ್ತಿಕ ಚಾಟ್ ಅಥವಾ ಗ್ರೂಪ್ ಚಾಟ್ ಅನ್ನು ಕ್ಲಿಕ್ ಮಾಡಿ
- ಬಲ ತುದಿಯ ಮೇಲೆ ಮೂರು ಚುಕ್ಕೆಗಳಿರುವ ಆಯ್ಕೆಯನ್ನು ಕ್ಲಿಕ್ ಮಾಡಿ
- ಈ ಆಯ್ಕೆಯಲ್ಲಿ ಸರ್ಚ್(Search) ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸರ್ಚ್ ಬಾರ್ ಕೊನೆಯಲ್ಲಿ ನಿಮಗೆ 📆 ಈ ಚಿಹ್ನೆ ಕಾಣಬಹುದು.
- 📆 ಇದರ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಕ್ಯಾಲೆಂಡರ್ ತೆರೆಯುತ್ತದೆ. ಈಗ ನಿಮಗಿಷ್ಟ ಬಂದ ದಿನವನ್ನು ಆಯ್ಕೆ ಮಾಡಿ ಯಾವ ಚಾಟ್ ಬೇಕೋ ಆ ಚಾಟ್ ಪಡೆಯಬಹುದು.
ವೈಯಕ್ತಿಕ ವಾಟ್ಸಾಪ್ ಚಾಟ್‌ಗಳನ್ನು ಯಾರೂ ನೋಡದಂತೆ ಲಾಕ್ ಮಾಡುವ ವಿಧಾನ
ವಾಟ್ಸಾಪ್ ಈಗ ಬಳಕೆದಾರರಿಗೆ ಅವರ ವೈಯಕ್ತಿಕ ಚಾಟ್‌ಗಳನ್ನು ಯಾರೂ ನೋಡದಂತೆ ಲಾಕ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಬಳಕೆದಾರರಿಗೆ ಪಾಸ್‌ವರ್ಡ್ ಹೊಂದಿಸುವ ಮೂಲಕ ಅಥವಾ ಫೇಸ್ ಅನ್‌ಲಾಕ್ ಅಥವಾ ಫಿಂಗರ್‌ಪ್ರಿಂಟ್‌ನಂತಹ ಬಯೋಮೆಟ್ರಿಕ್ ದೃಢೀಕರಣ ವಿಧಾನಗಳನ್ನು ಬಳಸಿಕೊಂಡು ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ.
- ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಲಾಕ್ ಮಾಡಲು ಬಯಸುವ ಚಾಟ್ ಅನ್ನು ದೀರ್ಘವಾಗಿ ಒತ್ತಿರಿ.
- ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ಗೋಚರಿಸುವ ಮೂರು-ಡಾಟ್ ಮೆನುವನ್ನು ಒತ್ತಿ ಮತ್ತು ‘ಲಾಕ್ ಚಾಟ್’ ಅನ್ನು ಟ್ಯಾಪ್ ಮಾಡಿ.
- ‘ಮುಂದುವರಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಬಳಸಿ ದೃಢೀಕರಿಸಿದ ನಂತರ ನಿಮ್ಮ ಚಾಟ್ ಅನ್ನು ಲಾಕ್ ಮಾಡಲಾಗುತ್ತದೆ.
ಲಾಕ್ ಆಗಿರುವ ಚಾಟ್‌ಗಳಿಗಾಗಿ ‘ಸೀಕ್ರೇಟ್ ಕೋಡ್’ ಹೊಂದಿಸುವುದು
- ‘ಸೀಕ್ರೇಟ್ ಕೋಡ್’ ಆಯ್ಕೆಯನ್ನು ಬಳಸಲು ಈಗಾಗಲೇ ನೀವು ‘ಲಾಕ್ ಮಾಡಿರುವ ಚಾಟ್ಸ್’ ವಿಂಡೋಗೆ ಹೋಗಿ
- ನಂತರ ‘ಸೀಕ್ರೇಟ್ ಕೋಡ್’ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಸೀಕ್ರೇಟ್ ಕೋಡ್ ರಚಿಸಲು ವಾಟ್ಸಾಪ್ ನಿಮ್ಮನ್ನು ಕೇಳುತ್ತದೆ. ಇದು ಎಮೋಜಿ ಅಥವಾ ಕನಿಷ್ಠ 4 ಅಕ್ಷರಗಳನ್ನು ಹೊಂದಿರುವ ಪದವಾಗಿರಬಹುದು.
- ಈ ಸೀಕ್ರೇಟ್ ಕೋಡ್ ಅನ್ನು ಟೈಪಿಸಿ ‘ಸರಿ’ ಬಟನ್ ಅನ್ನು ಒತ್ತಿ.
- ಅನ್‌ಲಾಕ್ ಮಾಡಲು ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ನಿಮಗೆ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅನ್‌ಲಾಕ್ ಆಯ್ಕೆಗಳನ್ನು ಬಳಸಲು ಸಾಧ್ಯವಾಗದಿದ್ದಲ್ಲಿ ಲಾಕ್ ಮಾಡಿದ ಚಾಟ್‌ಗಳ ವಿಭಾಗವನ್ನು ಅನ್‌ಲಾಕ್ ಮಾಡಲು ನೀವು ಇದೀಗ ಹೊಂದಿಸಿರುವ ಸೀಕ್ರೇಟ್ ಕೋಡ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ವಾಟ್ಸಾಪ್ ನೀವು ಚಾಟ್ ಲಾಕ್ ಸೆಟ್ಟಿಂಗ್‌ಗಳಿಂದ ‘ಲಾಕ್ ಮಾಡಿದ ಚಾಟ್‌ಗಳನ್ನು ಮರೆಮಾಡಿ’ ಟಾಗಲ್ ಅನ್ನು ಆನ್ ಮಾಡಿದರೆ ಚಾಟ್ ಆಯ್ಕೆ ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ಅವುಗಳನ್ನು ನೋಡಲು ನೀವು ಸರ್ಚ್ ಬಾರ್‌ನಲ್ಲಿ ಹೊಂದಿಸಲಾದ ಸೀಕ್ರೇಟ್ ಕೋಡ್ ಅನ್ನು ಟೈಪ್ ಮಾಡಬೇಕಾಗುತ್ತದೆ.
