ಜಾಗತಿಕ ಪ್ರಬಲ ಪಾಸ್‌ಪೋರ್ಟ್ ನಿಯಮದಲ್ಲಿ 2024ನೇ ಸಾಲಿನಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಹಾಗೂ ಸ್ಪೇನ್ ದೇಶಗಳು ಮೊದಲ ಸ್ಥಾನ ಪಡೆದಿದೆ. ಈ ದೇಶಗಳು ಪ್ರಬಲ ಪಾಸ್‌ಪೋರ್ಟ್ ನಿಯಮ ಹೊಂದಿದ್ದರೂ ವಿಶ್ವದ 194 ಸ್ಥಳಗಳಿಗೆ ವಿಸಾ ಮುಕ್ತ ಪ್ರವೇಶವನ್ನು ನೀಡುತ್ತವೆ ಎಂದು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಷಿಯೇಷನ್(ಐಎಟಿಎ) ಅಂಕಿಅಂಶಗಳು ತಿಳಿಸಿವೆ.
ಕಳೆದ ಐದು ವರ್ಷ ಸತತವಾಗಿ ಜಪಾನ್ ಹಾಗೂ ಸಿಂಗಾಪುರ ಪ್ರಬಲ ಪಾಸ್‌ಪೋರ್ಟ್ ನಿಯಮದಲ್ಲಿ ಮೊದಲ ಸ್ಥಾನ ಹೊಂದಿದ್ದವು. ಆದರೆ ಈ ವರ್ಷ ಯುರೋಪ್ ರಾಷ್ಟ್ರಗಳು ಮೊದಲ ಸ್ಥಾನಕ್ಕೆ ಏರಿವೆ. ಫಿನ್‌ಲ್ಯಾಂಡ್, ಸ್ವೀಡನ್, ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ. ಈ ದೇಶಗಳು 193 ಸ್ಥಳಗಳಿಗೆ ವಿಸಾ ಮುಕ್ತ ಪ್ರವೇಶವನ್ನು ನೀಡುತ್ತವೆ. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಹಾಗೂ ನದರ್‌ಲ್ಯಾಂಡ್ ಮೂರನೇ ಸ್ಥಾನದಲ್ಲಿದ್ದು, 192 ಸ್ಥಳಗಳಿಗೆ ವಿಸಾ ಮುಕ್ತ ಪ್ರವೇಶ ನೀಡುತ್ತವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನ ಅಂಧಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ
ಭಾರತವು ಪ್ರಬಲ ಪಾಸ್‌ಪೋರ್ಟ್ ನಿಯಮದಲ್ಲಿಉಜ್ಬೇಕಿಸ್ತಾನದಿಂದಿಗೆ 80ನೇ ಸ್ಥಾನದಲ್ಲಿದ್ದು, ಪ್ರಖ್ಯಾತ ಪ್ರವಾಸೋದ್ಯಮ ಸ್ಥಳಗಳಾದ ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಥೈಲ್ಯಾಂಡ್ ಸೇರಿ 62 ಸ್ಥಳಗಳಿಗೆ ವಿಸಾ ಮುಕ್ತ ಪ್ರವೇಶ ನೀಡುತ್ತವೆ. ನೆರೆಯ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ.
ಕೊನೆಯ ಮೂರು ಸ್ಥಾನಗಳಲ್ಲಿ ಅಫ್ಘಾನಿಸ್ತಾನ, ಸಿರಿಯಾ ಹಾಗೂ ಇರಾಕ್ ದೇಶಗಳಿವೆ. ಜಾಗತಿಕವಾಗಿ 2006ರಲ್ಲಿ 58 ಸ್ಥಳಗಳಿದ್ದ ವಿಸಾ ಮುಕ್ತ ಪ್ರವೇಶ 2024ಕ್ಕೆ 111 ಸ್ಥಾನಗಳಿಗೆ ಏರಿಕೆಯಾಗಿದೆ.