2014ರಲ್ಲಿ ರಚನೆಯಾದ ತೆಲಂಗಾಣ ರಾಜ್ಯದ ಮೂರನೇ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ಕಾಂಗ್ರೆಸ್, ಬಿಜೆಪಿ ಹಾಗೂ ಎಐಎಂಎಐ ಚುನಾವಣಾ ಕಣದಲ್ಲಿವೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ನೇರ ಸ್ಪರ್ಧೆ ಇದ್ದು, ಕಾಂಗ್ರೆಸ್ 119 ಸ್ಥಾನಗಳ ಪೈಕಿ 64ರಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಬಿಆರ್‌ಎಸ್ 42 ಸ್ಥಾನ ಗೆಲ್ಲುವಲ್ಲಿ ಹಿಂದುಳಿದಿದ್ದರೇ, ಬಿಜೆಪಿ 7 ಸ್ಥಾನಗಳಿಗೆ ಕುಸಿದಿದೆ.
ಬಿಆರ್‌ಎಸ್ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ತಮ್ಮ ಪಕ್ಷವು ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಡೆದಿತ್ತು. ಕೋಟ್ಯಂತರ ಜನರು ಮತದಾನದ ಹಕ್ಕನ್ನು ಚಲಾಯಿಸಿದರು. ಭಾನುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ.
119 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಂಡಿದ್ದು, ರಾಜ್ಯಾದ್ಯಂತ ಒಟ್ಟು 1 ಲಕ್ಷ 80 ಸಾವಿರ ಅಂಚೆ ಮತಗಳು ಚಲಾವಣೆಯಾಗಿವೆ. ತೆಲಂಗಾಣದಲ್ಲಿ ಒಟ್ಟು ಮತಗಳ ಸಂಖ್ಯೆ 3,26,02,793 ಆಗಿದ್ದರೆ, 2,32,59,256 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತೆಲಂಗಾಣದ 79 ಕ್ಷೇತ್ರಗಳಲ್ಲಿ ಶೇ.75ರಷ್ಟು ಮತದಾನವಾಗಿದೆ.
71.34 ರಷ್ಟು ಮತದಾನ ತೆಲಂಗಾಣದಾದ್ಯಂತ ದಾಖಲಾಗಿದೆ. ತೆಲಂಗಾಣದಲ್ಲಿ ಮುನುಗೋಡು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.91.89 ರಷ್ಟು ಮತದಾನವಾಗಿದೆ. ಯಾಕುತ್ಪುರದಲ್ಲಿ ಅತಿ ಕಡಿಮೆ ಅಂದರೆ ಶೇ.39.64ರಷ್ಟು ಮತದಾನವಾಗಿದೆ.
- ಪಾಲಕುರ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎರ್ರಬೆಳ್ಳಿ ದಯಾಕರ್ ರಾವ್ ಮುಂದಿದ್ದಾರೆ
- ಕುತ್ಬುಳ್ಳಾಪುರದಲ್ಲಿ ಬಿಆರ್‌ಎಸ್ ಅಭ್ಯರ್ಥಿ ಮುನ್ನಡೆ
- ಸೆರಿಲಿಂಗಂಪಲ್ಲಿಯಲ್ಲಿ ಬಿಆರ್‌ಎಸ್ ಅಭ್ಯರ್ಥಿ ಅರಿಕೆಪುಡಿ ಗಾಂಧಿ ಮುಂದಿದ್ದಾರೆ
- ನಿಜಾಮಾಬಾದ್ ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೂಪತಿ ರೆಡ್ಡಿ 500 ಮತಗಳ ಅಂತರದಲ್ಲಿ ಮುನ್ನಡೆ
- ಸತ್ತುಪಲ್ಲಿ ಮೊದಲ ಸುತ್ತಿನಲ್ಲಿ ಬಿಆರ್‌ಎಸ್ ಅಭ್ಯರ್ಥಿ ಸಂಡ್ರಾ ವೆಂಕಟವೀರಯ್ಯ (226) ಮುನ್ನಡೆ.
- ಮೇಡಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೈನಂಪಲ್ಲಿ ರೋಹಿತ್ (1411) ಮುನ್ನಡೆ
- ನರಸಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಲು ರಾಜಿರೆಡ್ಡಿ (1205) ಮುನ್ನಡೆ
- ವೈರಾ ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮದಾಸ್ (3400) ಮುನ್ನಡೆ
- ನರಸಂಪೇಟೆಯಲ್ಲಿ ಬಿಆರ್ ಎಸ್ ಅಭ್ಯರ್ಥಿ ಪೆದ್ದಿ ಸುದರ್ಶನ ರೆಡ್ಡಿ (350) ಮುಂದಿದ್ದಾರೆ
- ಅಂಬರ್ ಪೇಟೆ ಬಿಆರ್ ಎಸ್ ಅಭ್ಯರ್ಥಿ ಕಾಳೇರು ವೆಂಕಟೇಶ್ (485) ಮುನ್ನಡೆ
- ಮುಶಿರಾಬಾದ್ ಬಿಆರ್ ಎಸ್ ಅಭ್ಯರ್ಥಿ ಮುತ್ತ ಗೋಪಾಲ್ (2261) ಮುಂದಿದ್ದಾರೆ
- ಕೊಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೂಪಲ್ಲಿ ಕೃಷ್ಣರಾವ್ (1011) ಮುನ್ನಡೆ
- ನಿಜಾಮಾಬಾದ್‌ನ ಆರ್ಮರ್ ಕ್ಷೇತ್ರದಲ್ಲಿ ಎರಡು ಸುತ್ತು ಸೇರಿ ಬಿಜೆಪಿ ಅಭ್ಯರ್ಥಿ ರಾಕೇಶ್ ರೆಡ್ಡಿ 1,856 ಮುನ್ನಡೆ ಸಾಧಿಸಿದ್ದಾರೆ
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಮತ ಎಣಿಕೆ | ಅಂಚೆ ಮತದಾನ: ಬಿಆರ್‌ಎಸ್ ಹಿಂದಿಕ್ಕಿದ ಕಾಂಗ್ರೆಸ್
ಇಂದು ತೆಲಂಗಾಣದಲ್ಲಿ 2,290 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲ 119 ಕ್ಷೇತ್ರಗಳಲ್ಲಿ ಬಿಆರ್‌ಎಸ್ ಅಭ್ಯರ್ಥಿಗಳು, 118 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಒಂದು ಸ್ಥಾನದಲ್ಲಿ ಸಿಪಿಐ, 111 ಕ್ಷೇತ್ರಗಳಲ್ಲಿ ಬಿಜೆಪಿ, 8 ಸ್ಥಾನಗಳಲ್ಲಿ ಜನಸೇನೆ, 108 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳು, 19 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಎಂ ಅಭ್ಯರ್ಥಿಗಳು, 9 ವಿಧಾನಸಭಾ ಕ್ಷೇತ್ರಗಳಲ್ಲಿ ಎಂಐಎಂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಜೈ ಕಾಂಗ್ರೆಸ್ 💪 ಜೈ ಭಾರತ್ 🇮🇳 ಜೈ ರಾಹುಲ್ 🙏