ಮೈಸೂರು ನಗರದಲ್ಲಿ 45 ದಿನ ಕಾಲ ಪ್ರತಿನಿತ್ಯ ರಾತ್ರಿ 11 ಗಂಟೆಯಿಂದ 12ಗಂಟೆಯವರೆಗೆ ನಗರದ ವಿವಿಧ ಭಾಗದಲ್ಲಿ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರಿಗೆ ಹೂದಿಕೆ ವಿತರಣಾ ಅಭಿಯಾನವನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ.
ಬೀದಿಬದಿಯಲ್ಲಿ ಜೀವನಸಾಗಿಸುವ, ರಾತ್ರಿಹೊತ್ತು ರಸ್ತೆಯಲ್ಲಿ ಮಲಗುವ ನಿರ್ಗತಿಕರು, ಬೀದಿಬದಿವ್ಯಾಪಾರಸ್ಥರು, ಮುಂಜಾನೆಯೇ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ಹಾಗೂ ಬಡವರ್ಗದವರಿಗೆ ಚಳಿಗಾಲ ಹಾಗೂ ವಿಪರೀತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇಂತವರಿಗೆ ಹೊದಿಕೆ ವಿತರಿಸಲು ಟ್ರಸ್ಟ್ ಮುಂದಾಗಿದೆ.
ಅಸಹಾಯಕರಿಗೆ ಹೂದಿಕೆ ವಿತರಣಾ ಅಭಿಯಾನವನ್ನು ಕೆ.ಆರ್. ಆಸ್ಪತ್ರೆ ಸುತ್ತಮುತ್ತ ಮಲಗಿರುವ ಸಾರ್ವಜನಿಕರಿಗೆ ಹೊದಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ನಂತರ ಅಭಿಯಾನವನ್ನು ಉದ್ದೇಶಿಸಿ ಶಾಂತವೇರಿ ಗೋಪಾಲ್ ಗೌಡ ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ. ಶುಶ್ರುತ ಗೌಡ ಮಾತನಾಡಿದರು.
ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದು ಹೇಳಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸ್ನೇಹಿತರ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ ಸ್ನೇಹಿತರೊಡನೆ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ. ಜೊತೆಗೆ ಕೆಲವೊಂದು ಹಾಡಿಗಳಿಗೆ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ ಹೂದಿಕೆಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಅಹಿಂದ ಮುಖಂಡ ನಜರ್ಬಾದ್ ನಟರಾಜ್, ಕಡಕೋಳ ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ರುದ್ರಮೂರ್ತಿ, ಬೈರತಿ ಲಿಂಗರಾಜು, ಸೇರಿದಂತೆ ಇನ್ನಿತರ ಟ್ರಸ್ಟ್ ಸದಸ್ಯರುಗಳು ಭಾಗಿಯಾಗಿದ್ದರು.