ರಾಷ್ಟ್ರೀಯ ಪಕ್ಷಗಳ ಸಾಲು ಸೇರಿದ ಆಪ್‌; ಆಮ್ ಆದ್ಮಿ ಪಾರ್ಟಿಗೆ ಸೀಮಿತವಾದ ಪೊರಕೆ ಚಿಹ್ನೆ

Date:

Advertisements
  • ಅಧಿಕೃತ ರಾಷ್ಟ್ರೀಯ ಪಕ್ಚವಾದ ಆಮ್ ಆದ್ಮಿ ಪಾರ್ಟಿ
  • ಪೊರಕೆ ಚಿಹ್ನೆ ಇನ್ನು ಆಪ್‌ನ ಅಧಿಕೃತ ಚುನಾವಣಾ ಗುರುತು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ.

ತಮಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡುವಂತೆ ಆಪ್ ಕೇಂದ್ರ ಚುನಾವಣಾ ಆಯೋಗವನ್ನು ಕೋರಿಕೊಂಡಿತ್ತು.

ಕರ್ನಾಟಕ ಹೈಕೋರ್ಟ್‌ನಲ್ಲೂ ಈ ವಿಚಾರ ಪರಿಶೀಲನೆಗೆ ಆಪ್ ರಾಜ್ಯ ನಾಯಕರು ರಿಟ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ನಿರ್ಧರಿಸಲು ಚುನಾವಣೆ ಆಯೋಗಕ್ಕೆ ಗಡುವು ನೀಡಿತ್ತು.

Advertisements

ಈ ಬೆಳವಣಿಗೆಗಳ ಬೆನ್ನಲ್ಲಿ ಪಕ್ಷದ ಮನವಿ ಪರಿಶೀಲಿಸಿದ ಆಯೋಗ ಈಗ ಆಪ್‌ಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ.

ಇದೇ ವೇಳೆ ತೃಣಮೂಲ ಕಾಂಗ್ರೆಸ್,ಭಾರತೀಯ ಕಮ್ಯುನಿಸ್ಟ್ ಪಕ್ಷ, ಎನ್‌ಸಿಪಿ, ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಆಯೋಗ ವಾಪಸ್‌ ಪಡೆದಿದೆ.

ಈ ಹಿನ್ನೆಲೆಯಲ್ಲಿ ಆಪ್ ಪಕ್ಷದ ʼಪೊರಕೆʼ ಚಿಹ್ನೆ ಪಕ್ಷದ ಅಧಿಕೃತ ಗುರುತಾಗಿ ದೇಶದಾದ್ಯಂತ ನಡೆಯುವ ಚುನಾವಣೆಯಲ್ಲಿ ಬಳಕೆಯಾಗಲಿದೆ. ಒಟ್ಟಾರೆ ಲೆಕ್ಕಾಚಾರಗಳ ಪ್ರಕಾರ ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಸ್ಥಾನಮಾನ ಪಡೆದ 9ನೇ ಪಕ್ಷವಾಗಿದೆ.

ಆಪ್ ಹಿನ್ನೆಲೆ :
2012 ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹೊರಹೊಮ್ಮಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಳಿಕ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಶಕೆ ಆರಂಭಿಸಿತ್ತು.

ಮೊದಲು ದೆಹಲಿ ಗದ್ದುಗೆ ಹಿಡಿದಿದ್ದ ಪಕ್ಷ ನಂತರ ಪಂಜಾಬ್ ನಲ್ಲೂ ಆಡಳಿತ ನಡೆಸಿ, ಗುಜರಾತ್ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ನೀಡಿತ್ತು.

ರಾಷ್ಟ್ರೀಯ ಪಕ್ಷದ ರಚನೆ ಹೇಗೆ?
ಭಾರತದ ಚುನಾವಣಾ ಆಯೋಗ ಕೆಲ ಮಾನದಂಡಗಳ ಮೇಲೆ ಚುನಾಯಿತ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡುತ್ತದೆ.

ಆಯೋಗ ನೀಡುವ ಷರತ್ತಿನಲ್ಲಿ ಒಂದನ್ನು ಪೂರೈಸಿದರೂ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗುತ್ತದೆ.

ಆಯೋಗದ ಷರತ್ತಿನ ಪ್ರಕಾರ 3 ರಾಜ್ಯಗಳ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಶೇ.2 ಸ್ಥಾನ ಗೆಲ್ಲಬೇಕು.

ನಾಲ್ಕು ಲೋಕಸಭಾ ಸ್ಥಾನಗಳ ಜೊತೆಗೆ, ಪಕ್ಷವು ಲೋಕಸಭೆಯಲ್ಲಿ ಶೇ.6 ಮತಗಳನ್ನು ಅಥವಾ ಯಾವುದೇ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಶೇ.6ರಷ್ಟು ಮತಗಳನ್ನು ಗಳಿಸಬೇಕು. (ಆಪ್ ಈ ಶ್ರೇಣಿ ಮೂಲಕ ಅರ್ಹತೆ ಪಡೆದಿದೆ)

4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪಕ್ಷವು ಪ್ರಾದೇಶಿಕ ಪಕ್ಷವಾಗಿ ಗುರುತಿಸಲ್ಪಡುವುದು. ಇವೇ ಆಯೋಗ ವಿಧಿಸುವ ಪ್ರಮುಖ ನಿಯಮಗಳು.

ರಾಷ್ಟ್ರೀಯ ಪಕ್ಷವಾದರೆ ಏನು ಪ್ರಯೋಜನ?
ಭಾರತದಾದ್ಯಂತ ಬೇರಾವುದೇ ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಬಳಿಕ ಅದರ ಚಿಹ್ನೆಯನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ

ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಕಚೇರಿ ಸ್ಥಾಪಿಸಲು ಸರಕಾರದಿಂದ ಭೂಮಿ ಅಥವಾ ಕಟ್ಟಡವನ್ನು ಪಡೆಯಬಹುದು.

ರಾಷ್ಟ್ರೀಯ ಪಕ್ಷಗಳು ಗರಿಷ್ಠ 40 ಮಂದಿ ಸ್ಟಾರ್ ಪ್ರಚಾರಕರನ್ನು ಹೊಂದಬಹುದು. ಆದರೆ, ರಾಜ್ಯ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಈ ಅವಕಾಶ ಕೇವಲ 20ಕ್ಕೆ ಸೀಮಿತ.

ರಾಷ್ಟ್ರೀಯ ಮಾಧ್ಯಮಗಳಲ್ಲಿ ನಿರ್ದಿಷ್ಟ ಪ್ರಸಾರ ಪಡೆದು, ಪಕ್ಷದ ಸಂದೇಶಗಳನ್ನು ರವಾನಿಸಬಹುದು.

ಈ ಸುದ್ದಿ ಓದಿದ್ದೀರಾ? : ಅಮುಲ್-ನಂದಿನಿ ಬಗ್ಗೆ ಹೊಸ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ; ಆಪ್ ಸಲಹೆ

ಪ್ರತಿ 10 ವರ್ಷಕ್ಕೊಮ್ಮೆ ಪರಿಶೀಲನೆ:
ಪ್ರತಿ 10 ವರ್ಷಕ್ಕೊಮ್ಮೆ ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ವಿಮರ್ಶೆಗೊಳಪಡಿಸುತ್ತದೆ. ಈ ಹಿಂದೆ ಪ್ರತಿ 5 ವರ್ಷಕ್ಕೊಮ್ಮೆ ರಾಷ್ಟ್ರೀಯ ಪಕ್ಷದ ಮಾನ್ಯತಾ ವಿಮರ್ಶೆಯನ್ನು ಆಯೋಗ ಮಾಡುತ್ತಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X