ದಾವಣಗೆರೆ | ನರಹಂತಕ ಕಾಡಾನೆ ಸೆರೆಗೆ ಕೂಂಬಿಂಗ್‌ ಕಾರ್ಯಾಚರಣೆ ಆರಂಭ

Date:

  • ಸಕ್ರೆಬೈಲು ಶಿಬಿರದಿಂದ ಮೂರು ಸಾಕಾನೆಗಳಿಂದ ಕಾರ್ಯಾಚರಣೆ
  • ಶನಿವಾರ ಯುವತಿಯನ್ನು ತುಳಿದು ಸಾಯಿಸಿದ್ದ ಕಾಡಾನೆ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಶನಿವಾರ ಯುವತಿಯನ್ನು ತುಳಿದು ಸಾಯಿಸಿದ್ದ ಕಾಡಾನೆಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಶನಿವಾರ ಬೆಳಿಗ್ಗೆ ಯುವತಿ ಕವನಾ ಮತ್ತು ಅವರ ತಾಯಿ ಮೇಲೆ ದಾಳಿ ಮಾಡಿದ ನಂತರ ಆನೆಯು ಸೂಳೆಕೆರೆ ಹಿನ್ನೀರಿನಲ್ಲಿ ಗೋಚರಿಸಿತ್ತು. ಸ್ಥಳಕ್ಕೆ ಧಾವಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅದರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು.

ಕಾಡಾನೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಸಾಗರ, ಬಲಭೀಮ ಹಾಗೂ ಬಹದ್ಧೂರ್‌ ಎಂಬ ಮೂರು ಆನೆಗಳನ್ನು ಸೂಳೆಕೆರೆಗೆ ಕರೆತಂದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಭಾನುವಾರ ಬೆಳಿಗ್ಗೆಯಿಂದ ಆನೆಗಾಗಿ ಹುಡುಕಾಟ ನಡೆಸಿದ್ದರು. ಸಂಜೆಯ ವೇಳೆಗೆ ಡ್ರೋಣ್‌ ಕ್ಯಾಮೆರಾದಲ್ಲಿ ಆನೆ ಗೋಚರಿಸಿತ್ತು.

ಆನೆಯು ಸೂಳೆಕೆರೆಯಿಂದ, ಅರಿಶಿನ ಘಟ್ಟ, ಗುಡ್ಡದ ಕೊಮಾರನಹಳ್ಳಿ, ಗುಡ್ಡದ ಬೆನಕನಹಳ್ಳಿ, ಮಧುರನಾಯಕನ ಹಳ್ಳಿ, ಯಲೋದಹಳ್ಳಿ ಮೂಲಕ ಶೃಂಗಾರ ಭಾಗ್ ಅರಣ್ಯ ಪ್ರದೇಶಕ್ಕೆ ಬಂದಿರಬಹುದು. ಸಿಬ್ಬಂದಿ, ಪಶುವೈದ್ಯರು, ಅರವಳಿಕ ತಜ್ಞರು ಹಾಗೂ ಮಾವುತರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಸಕ್ರೇಬೈಲು ಆನೆ ಶಿಬಿರದಿಂದ ಕರೆತರಲಾದ ಮೂರು ಆನೆಗಳನ್ನು ಅರಸನಗಟ್ಟ ಮಠದಲ್ಲಿ ಇರಿಸಲಾಗಿದೆ. ಅವುಗಳ ನೆರವಿನೊಂದಿಗೆ  ಸಫಾರಿ ಮೂಲಕ ತೆರಳಿ ಕಾಡಿನಲ್ಲಿ ಓಡಾಡುತ್ತಿರುವ ಆನೆಗೆ ಅರವಳಿಕೆ ಮದ್ದು ನೀಡುವ ಮೂಲಕ ಸೆರೆ ಹಿಡಿಯಲಾಗುವುದು. ಮನೆ ಬಿಟ್ಟು ಹೊರಗೆ ಬಾರದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮೇಲ | ಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಸಾಹಿತ್ಯ ಕನಕದಾಸರದ್ದು: ಹಾವಣ್ಣ

'ತಮ್ಮದೇ ಆದಂತ ಸಾಹಿತ್ಯದ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದಭಾವವನ್ನು...

ದಾವಣಗೆರೆ | ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆ ಹಾಕಿದವರ ಬಂಧಿಸುವಂತೆ ಒತ್ತಾಯ

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ...

ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ...

ಗದಗ | ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ

ಶಿಕ್ಷಣದ ಹಕ್ಕಿಗಾಗಿ, ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿನಿಯರಿಗೆ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ...