ಕಲಬುರಗಿ ಹೊರವಲಯದ ಉದನೂರು ಗ್ರಾಮದ ವಕೀಲ ಈರಣ್ಣಗೌಡ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಮತ್ತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ದಂಪತಿಗಳಾದ ನೀಲಕಂಠ ಪಾಟೀಲ್ ಹಾಗೂ ಸಿದ್ದಮ್ಮ ಪಾಟೀಲ್ ಬಂಧಿತ ಆರೋಪಿಗಳು. ಕೊಲೆ ಪ್ರಕರಣದ ಬಳಿಕ ಪ್ರಮುಖ ಆರೋಪಿ ನೀಲಕಂಠರಾವ್ ಪಾಟೀಲ್ ಪರಾರಿಯಾಗಿದ್ದನು. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ನಿಲಕಂಠರಾವ್ ಪತ್ನಿ ಸಿದ್ದಮ್ಮ ಪಾಟೀಲ್ ಅವಳನ್ನು ಬಂಧಿಸಿದ್ದಾರೆ.
ಡಿಸೆಂಬರ್ 7 ರಂದು ಕಲಬುರಗಿ ನಗರದ ಅರ್ಪಾಟಮೆಂಟ್ ಒಂದರಲ್ಲಿ ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮುನ್ನ ಮೂವರು ಪ್ರಮುಖ ಆರೋಪಿಗಳಾದ ಮಲ್ಲಿನಾಥ, ಬಸಣ್ಣಾ , ಅವಣಪ್ಪಾ ಅವರನ್ನು ಬಂಧಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮಹುವಾ ಉಚ್ಚಾಟನೆ; ಉಳಿಗಾಲವಿಲ್ಲವೇ ಅದಾನಿ ಎದುರು ಹಾಕಿಕೊಂಡರೆ?
ಆಸ್ತಿ ಸಂಬಂಧಿತ ವಿಚಾರವಾಗಿ ವಕೀಲ ಈರಣ್ಣಗೌಡ ಪಾಟೀಲ್ ಅವರ ಹತ್ಯೆ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.