ಕಲಬುರಗಿ | ಹೊರಗುತ್ತಿಗೆ ಕಾರ್ಮಿಕರಿಗೆ ಸೌಲಭ್ಯ ವಂಚನೆ ಖಂಡಿಸಿ ಭಾರತ್ ಏಕತಾ ಮಿಷನ್ ಪ್ರತಿಭಟನೆ

Date:

Advertisements

ಅಲ್ಟ್ರಾಟೆಕ್ (ರಾಜೇಶ್ರೀ ) ಸಿಮೆಂಟ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಹಾಗೂ ಇತರ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದನ್ನು ಖಂಡಿಸಿ ಭಾರತ್ ಏಕತಾ ಮಿಷನ್ ಜಿಲ್ಲಾ ಸಮಿತಿ ಪ್ರತಿಭಟನೆ ಮಾಡಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಸೂರ್ಯಕಾಂತ ನಿಂಬಳಕರ್ ಮಾತನಾಡಿ, ಸೇಡಂ ತಾಲೂಕಿನ ಮಳಖೇಡ  ಗ್ರಾಮದಲ್ಲಿನ ರಾಜೇಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರಿಗೆ ಪಿಎಫ್, ಇಎಸ್ಐ ಮತ್ತು ಇತರ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದು ಖಂಡನೀಯ.

ಸುಮಾರು 300ಜನರು 17ವರ್ಷಗಳಿಂದ ಸದರಿ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುವ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ. ಸಮಯದಲ್ಲಿ ಇತಿ ಮಿತಿ ಇಲ್ಲದೆ ಕಾಲಿಂಗ್ ಡ್ಯೂಟಿ ಪದ್ದತಿಯಿಂದ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಆರೋಗ್ಯದಲ್ಲಿ ಉಸಿರಾಟ ತೋಂದರೆ, ನಿದ್ರಾಹಿನತೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಕಾರ್ಮಿಕ ಕಾಯ್ದೆಯಂತೆ ಸದರಿ ಕಾರ್ಖಾನೆಯಲ್ಲಿ ಫ್ಯಾಕರ್ಸ್ ವಿಭಾಗಲ್ಲಿ ಸೇವೆಗೆ ಹಾಜರಾಗುವ ಮುನ್ನು ಸೇವೆಯಿಂದ ಹೊರಗಡೆ ವಾಪಸ ಮುನ್ನ ಸಮಯ ನೀಗದಿ ಪಡಿಸುವುದಕ್ಕಾಗಿ ಪಂಜಿಕರಣ ಇಲ್ಲದಿರುವ ಕಾರಣ ಕಾರ್ಮಿಕರಿಗೆ ಬೇಕಾ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ.

Advertisements

ಪ್ಯಾಕರ್ಸ್ ಮತ್ತು ಲೋಡರ್ಸ್ ವಿಭಾಗದಲ್ಲಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೀಡಾದಾಗ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರಿಗೆ ಫ್ಯಾಕ್ಸಿಯಲ್ಲಿ ಆಸ್ಪತ್ರೆಗೆ ದಾಖಲಿಸದೇ ಹೊರಗಡೆ ಚಿಕತ್ಸೆ ಪಡೆಯುಲು ತಿಳಿಸುತ್ತಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದಿಲ್ಲ. ಸಧ್ಯ (ಬೋರ್ಡ್ ಆಫ್ ವೆಜೆಸ್) ನಿಯಮದಂತೆ ಪ್ರತಿ ಕಾರ್ಮಿಕರಿಗೆ 1,565 ರೂಪಾಯಿಗಳು ಪ್ರತಿ ದಿನಕ್ಕೆ ನೀಡಬೇಕು. ಆದರೆ, ಕೇವಲ 800ರೂ. ಗಳು ಮಾತ್ರ ನೀಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಸದರಿ ಕಾರ್ಖಾನೆಯಲ್ಲಿ ಪ್ಯಾಕರ್ಸ್ ಮತ್ತು ಲೋಡರ್ಸ್ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗಿರುತ್ತದೆ. ಸದರಿ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಅನ್ಯಾಯ ನಡೆಯುತ್ತಿದ್ದು, ರಾಜ್ಯ ಮತ್ತು ಕೇಂದ್ರ ಕಾರ್ಮಿಕ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಈ ಅನ್ಯಾಯ, ಅವವ್ಯಹಾರ ತಡೆಯಲು ಮುಂದಾಗುತ್ತಿಲ್ಲ.

ಆದ್ದರಿಂದ, ದಯಾಮಾಡಿ ಕಾರ್ಮಿಕರ ಹಿತಾಶಕ್ತಿ ಕಾಪಾಡಲು ಅಸಂಘಟಿತ ಕಾರ್ಮಿಕಾರದ ಪ್ಯಾಕರ್ಸ್ ಮತ್ತು ಲೋಡರ್ಸ್ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ಸೌಲಭ್ಯವನ್ನು ಕಾರ್ಮಿಕ ಇಲಾಖೆ ಕಾಯ್ದೆಯಂತೆ ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಕಾರ್ಮಿಕ ಅಧಿಕಾರಿಗಳು ಮತ್ತು ಫ್ಯಾಕ್ಟರೀಯ ಕಾರ್ಮಿಕರ ಕಲ್ಯಾಣ ಅಧಿಕಾರಿಗಳ ತಮ್ಮ ಅಧ್ಯಕ್ಷತೆಯಲ್ಲಿ ಜಂಟಿ ಸಭೆಯನ್ನು ನಡೆಸಲು ಜಿಲ್ಲಾ ಭೀಮ ಆರ್ಮಿ ಒತ್ತಾಯಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೂರ್ಯಕಾಂತ ಜಿಡಾಗ, ಸೋಮಶೇಖರ್ ಬಂಗರಗಿ, ಸೂರ್ಯಕಾಂತ ನಿಂಬಳಕರ, ಮೌಲಾ ಮುಲ್ಲಾ, ಸಿಪಿಐ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.

ಬೇಡಿಕೆಗಳು

1) (ಬೋರ್ಡ್ ಆಫ್ ವಜೆಸ್ ) ಪದ್ದತಿಯಂತೆ ಪ್ರತಿದಿನ 1565 ರೂ. ವೇತನ ಪಾವತಿ ಮಾಡಬೇಕು.

2) ಶಿಪ್‌ನಂತೆ ದಿನದಲ್ಲಿ 3 ಪಾಳಿಗಳಲ್ಲಿ ದುಡಿಸಿಕೊಳ್ಳಲು ಕ್ರಮವಹಿಸುವುದು.

3) ಕಾರ್ಮಿಕರು ತಮ್ಮ ವೇತನಕ್ಕಾಗಿ ಒತ್ತಾಯಿಸಿ ನಡೆಸಿರುವ ಹೋರಾಟದಲ್ಲಿ ಪಲ್ಗೊಂಡ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದವರನ್ನು ಪುನಃ ನೇಮಿಸಕೊಳ್ಳಬೇಕು.

4) ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಆರೋಗ್ಯ ಸರಿಯಿಲ್ಲದಾಗ ಅಥವಾ ಅಪಘಾತವಾದಾಗ ಆಸ್ಪತ್ರೆಯಲ್ಲಿ ಪೂರ್ಣ ಬಿಲ್ ಪಾವತಿಸುವ ಕ್ರಮ ಜರುಗಿಸಬೇಕು.‌

5) ಪ್ರತಿ ತಿಂಗಳು ವೇತನ ಮತ್ತು ಹಾಜರಾತಿ ಚೀಟಿ ನೀಡುವುದು.

6) ಪಿಎಫ್‌ ಮತ್ತು ಇಎಸ್‌ಐ ಕಡ್ಡಾಯವಾಗಿ ಜಾರಿ ಮಾಡಬೇಕು.

7) ಬೊನಸ್ ಪ್ರತಿವರ್ಷ ನೀಡಬೇಕು.

8) ರಜೆ ದಿನದಲ್ಲಿ ದುಡಿದ ಕಾರ್ಮಿಕರಿಗೆ ಡಬಲ್ ವೇತನ ನಿಯಮದಂತೆ ನೀಡಬೇಕು.

9) ಪ್ಯಾಕಿಂಗ್ ಮತ್ತು ಲೋಡಿಂಗ್ ವಿಭಾಗದಲ್ಲಿ ನಿಯಮದಂತೆ ಒಂದು ಬೆಲ್‌ಗೆ 8 ಜನರನ್ನು ಮಾತ್ರ ನೇಮಿಸಬೇಕು.

10) ಸದರಿ ದುಡಿಯುವ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಅಥವಾ ಅದರ ಬದಲಾಗಿ ಮನೆಯ ಬಾಡಿಗೆ ನೀಡಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X