ಲಾರಿ ಮತ್ತು ಜೀಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಐದು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿರುವ ದುರ್ಘಟನೆ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರದಲ್ಲಿ ನಡೆದಿದೆ.
ಅಫ್ಜಲ್‌ಪುರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಮಾಡ್ಯಾಳ ಗ್ರಾಮದ ಸಂತೋಷ ಹೂವಣ್ಣ ಗೌಡಗಾಂವ (40), ಶಂಕರ ದೇವಪ್ಪ ಜಳಕಿ (55), ಸಿದ್ದಮ್ಮ ಶಂಕರ ಜಳಕಿ ಹಾಗೂ ಮಗು ಹುಚ್ಚಪ್ಪ ಮಹಾಂತೇಶ ಜಳಕಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಮಗುವಿನ ತಾಯಿ ಪೂಜಾ ಮಹಾಂತೇಶರಿ ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಅಫ್ಜಲ್‌ಪುರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.