ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದಲ್ಲಿರುವ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ (ಹಿಂದಿನ ಟ್ವಿಟರ್) ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ತಾಂತ್ರಿಕ ಕಾರಣದಿಂದಾಗಿ ವಿಶ್ವದಾದ್ಯಂತ ಬಳಕೆದಾರರರಿಗೆ ಕೈಕೊಟ್ಟ ಪ್ರಸಂಗ ನಡೆದಿದೆ.
‘ಎಕ್ಸ್’ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಕಡೆಗಳಲ್ಲೂ ಸಾಮಾನ್ಯ ಟ್ವೀಟ್‌ಗಳ ಬದಲಿಗೆ ‘ನಿಮ್ಮ ಟೈಮ್‌ಲೈನ್‌ಗೆ ಸ್ವಾಗತ(Welcome to your timeline)’ ಎಂದು ತೋರಿಸುತ್ತಿತ್ತು. ಈ ನಡುವೆ ಹಲವು ಬಳಕೆದಾರರು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ, ಟ್ವಿಟ್ಟರ್ ಕೈ ಕೊಟ್ಟಿದೆ. ಪರಿಶೀಲನೆ ನಡೆಸಲು ಇಲ್ಲಿ ಬಂದಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
Thought all my shit was deleted. Almost pulled up to them headquarters like this #TwitterDown pic.twitter.com/rbrGdPszpi
— D E V 🪐🧃🌎 (@StayLoyall) December 21, 2023
ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಸಾಧ್ಯವಾಗದಿರುವ ಬಗ್ಗೆ 70,000 ಕ್ಕೂ ಹೆಚ್ಚು ವರದಿಗಳು ಬಂದಿದೆ. ಈ ಸಮಸ್ಯೆಗೆ ಕಾರಣವೇನು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ‘ಡೌನ್‌ಡೆಕ್ಟರ್’ ವರದಿ ಮಾಡಿದೆ.
ಸ್ಥಗಿತದ ನಂತರ, ಹಲವಾರು ಟ್ವಿಟ್ಟರ್ ಬಳಕೆದಾರರು ತಮ್ಮ ಕಳವಳಗಳನ್ನು ಹಂಚಿಕೊಳ್ಳಲು ಫೇಸ್‌ಬುಕ್ ಮತ್ತು ಇತರ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಸಿಕೊಂಡಿದ್ದಾರೆ.
Elon after he found out he’s on the Epstein list #xdown #twitterdown pic.twitter.com/ErHbdQe97s
— Gonzy (@Gonzeeeeeee) December 21, 2023
ಎಕ್ಸ್ ಈ ರೀತಿಯ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಎಲಾನ್ ಮಸ್ಕ್ ಒಡೆತನಕ್ಕೆ ಬಂದ ಬಳಿಕ, ಈ ವರ್ಷದ ಮಾರ್ಚ್ ಮತ್ತು ಜುಲೈನಲ್ಲೂ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತ್ತು.
ಕೊನೆಗೂ ಸರಿಗೊಂಡ ಟ್ವಿಟ್ಟರ್
ವಿಶ್ವಾದ್ಯಂತ ಬಳಕೆದಾರರ ದೂರಿನ ನಡುವೆಯೇ ಸುಮಾರು ಅರ್ಧಗಂಟೆಗಳ ಬಳಿಕ ಕೊನೆಗೂ ಟ್ವಿಟ್ಟರ್ ಸರಿಯಾಗಿದೆ. ಟ್ವಿಟ್ಟರ್ ಸರಿಯಾದ ಬಳಿಕ #Twitterdown ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ. ಅಲ್ಲದೇ, ಹಲವಾರು ಮೀಮ್ಸ್‌ಗಳು ಕೂಡ ಹರಿದಾಡುತ್ತಿದೆ.
The reason why Twitter went down. #TwitterDown pic.twitter.com/WZb4vifQc0
— Sagar (@sagarcasm) December 21, 2023