ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ತೆಗೆದುಕೊಳ್ಳುವ ಸ್ವಯಂ ಗೀಳು ಪ್ರಚಾರಕ್ಕೆ ರೈಲು ನಿಲ್ಧಾಣಗಳಲ್ಲಿ ಸೆಲ್ಫಿ ಬೂತ್‌ಗಳನ್ನು ನಿರ್ಮಿಸಿಕೊಳ್ಳುತ್ತಿರುವುದು ತೆರಿಗೆದಾರರ ಹಣವನ್ನು ನಿರ್ಲಜ್ಜವಾಗಿ ಹಾಳು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ರಾಜ್ಯಗಳು ಮನರೇಗ ನಿಧಿ ಹಂಚಿಕೆಗೆ ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ಮೋದಿಯವರು ಮಿತಿಯಿಲ್ಲದೆ ಸೆಲ್ಫಿ ಬೂತ್‌ಗಳನ್ನು ನಿರ್ಮಿಸಿಕೊಳ್ಳುವ ಸ್ವಯಂ ಗೀಳು ಪ್ರಚಾರ ಕೈಗೊಳ್ಳುತ್ತಿದ್ದಾರೆ. ರೈಲು ನಿಲ್ದಾಣಗಳಲ್ಲಿ 3ಡಿ ಸೆಲ್ಫಿ ಕೇಂದ್ರಗಳನ್ನು ಅಳವಡಿಸಿಕೊಳ್ಳುವುದು ಖಂಡಿತಾವಾಗಿಯು ಭಾರತದ ತೆರಿಗೆದಾರರ ಹಣವನ್ನು ಹಾಳು ಮಾಡುತ್ತಿರುವುದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಮೊದಲು ನಮ್ಮ ವೀರ ಯೋಧರ ತ್ಯಾಗ ಬಲಿದಾನವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸೇನಾ ಕೇಂದ್ರಗಳಲ್ಲಿ ಇದೇ ರೀತಿಯ 822 ಸೆಲ್ಫಿ ಕೇಂದ್ರಗಳನ್ನು ಮೋದಿಯವರ ಆದೇಶದಿಂದ ಅಳವಡಿಸಲಾಗಿತ್ತು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
“ನರೇಂದ್ರ ಮೋದಿ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ರಾಜ್ಯಗಳಿಗೆ ಪರಿಹಾರ ವಿತರಿಸಿಲ್ಲ. ವಿಪಕ್ಷಗಳ ಆಳ್ವಿಕೆಯ ರಾಜ್ಯಗಳಿಗೆ ಮನರೇಗ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ. ಆದರೆ ತಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಸಾರ್ವಜನಿಕರ ಹಣವನ್ನು ಉದಾರವಾಗಿ ಖರ್ಚು ಮಾಡಲಾಗುತ್ತಿದೆ” ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ 3ಡಿ ಸೆಲ್ಫಿ ಕೇಂದ್ರಗಳನ್ನು ಅಳವಡಿಸಿಕೊಳ್ಳಲು ದೇಶದ ವಿವಿಧೆಡೆ ಟೆಂಡರ್‌ಗಳನ್ನು ಆಹ್ವಾನಿಸಿರುವ ಅಧಿಸೂಚನೆಯ ಭಾವಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪಡೆಯಲಾಗಿದೆ.
ಆರ್‌ಟಿಐ ಉತ್ತರದ ಪ್ರಕಾರ, ‘ಎ’ ವರ್ಗದ ಕೇಂದ್ರಗಳಿಗೆ ತಾತ್ಕಾಲಿಕ ಸೆಲ್ಫಿ ಬೂತ್‌ಗಳಿಗೆ ಅನುಮೋದಿತ ವೆಚ್ಚ ತಲಾ ರೂ 1.25 ಲಕ್ಷ, ಆದರೆ ‘ಸಿ’ ವರ್ಗದ ಕೇಂದ್ರಗಳ ಶಾಶ್ವತ ಸೆಲ್ಫಿ ಬೂತ್‌ಗಳ ಸ್ಥಾಪನೆಗೆ ತಲಾ 6.25 ಲಕ್ಷ ರೂ ವೆಚ್ಚವನ್ನು ಹೊಂದಿವೆ.