ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ಸಾಲುಸಾಲಾಗಿ ವಿಕೆಟ್ ಒಪ್ಪಿಸಿದ ಭಾರತ ತಂಡ, ಇನಿಂಗ್ಸ್ ಹಾಗೂ 32 ರನ್‌ಗಳ ಅಂತರದಲ್ಲಿ ಹಿನಾಯವಾಗಿ ಸೋತಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಬಾಕ್ಸಿಂಗ್ ಡೇ ಟೆಸ್ಟ್ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸಂಚೂರಿಯನ್‌ನ ಸೂಪರ್‌ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಮೂರೇ ದಿನದಲ್ಲಿ 20 ಓವರ್ ಬಾಕಿಯಿರುವಂತೆಯೇ ಮುಕ್ತಾಯವಾಯಿತು. ದಕ್ಷಿಣ ಅಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 108.4 ಓವರ್‌ಗಳಲ್ಲಿ 408 ರನ್ ಕಲೆ ಹಾಕಿ 162 ರನ್ ಮುನ್ನಡೆ ಪಡೆದಿತ್ತು.
ಎರಡನೇ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿ 34.1 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಕೊನೆಯವರೆಗೂ ಆಡಿದ ವಿರಾಟ್ ಕೊಹ್ಲಿ (76) ಹಾಗೂ ಶುಭಮನ್ ಗಿಲ್ (26) ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರ್ಯಾರು 10 ರ ಗಡಿ ದಾಟಲಿಲ್ಲ.
ದಕ್ಷಿಣ ಆಫ್ರಿಕಾ ಬೌಲರ್‌ಗಳಾದ ನಾಂದ್ರೆ ಬರ್ಗರ್ 33/4, ಮ್ಯಾಕ್ರೊ ಜಾನ್ಸನ್ 36/3 ಹಾಗೂ ಕಗಿಸೋ ರಬಾಡ 32/2 ವಿಕೆಟ್ ಪಡೆದು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆಲಿಯನ್‌ಗೆ ಅಟ್ಟಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
ದ್ವಿಶತಕ ವಂಚಿತ ಡೀನ್ ಎಲ್ಗರ್
256/5 ವಿಕೆಟ್‌ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಡೀನ್ ಎಲ್ಗರ್ ಹಾಗೂ ಮ್ಯಾಕ್ರೋ ಜಾನ್ಸನ್ 6ನೇ ವಿಕೆಟ್ ಜೊತೆಯಾಟಕ್ಕೆ 111 ರನ್ ಪೇರಿಸಿದರು. 185 ರನ್ ಗಳಿಸಿದ್ದ ಡೀನ್ ಎಲ್ಗರ್ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್‌ಗೆ ಕ್ಯಾಚಿತ್ತು 15 ರನ್‌ಗಳಿಂದ ದ್ವಿಶತಕ ವಂಚಿತರಾದರು. ಅವರ 287 ಚೆಂಡುಗಳ ಸೊಗಸಾದ ಇನಿಂಗ್ಸ್‌ನಲ್ಲಿ 28 ಬೌಂಡರಿಗಳಿದ್ದವು
ಎಲ್ಗರ್ ನಂತರ ಮ್ಯಾಕ್ರೊ ಜಾನ್ಸ್‌ನ್ ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಆಟವಾಡಲಿಲ್ಲ. ಕೊನೆಯವರೆಗೂ ಅಜೇಯರಾಗಿ ಉಳಿದ ಮ್ಯಾಕ್ರೊ ಜಾನ್ಸ್‌ನ್ 11 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 84 ರನ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದು ತಂಡದ ಮೊತ್ತವನ್ನು 408ರ ಗಡಿ ತಲುಪಲು ಕಾರಣರಾದರು
ಭಾರತದ ಪರ ಬುಮ್ರಾ 4, ಸಿರಾಜ್ 2 ಹಾಗೂ ಅಶ್ವಿನ್, ಶಾರ್ದೂಲ್, ಪ್ರಸಿದ್ಧ ತಲಾ ಒಂದೊಂದು ವಿಕೆಟ್ ಪಡೆದರು. 185 ರನ್ ಗಳಿಸಿದ ಡೀನ್ ಎಲ್ಗರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
A complete performance from the fast bowlers helps the hosts go 1-0 up in the #SAvIND Test series 🎉#WTC25 📝: https://t.co/Rma4l5S0RO pic.twitter.com/BggeNhDkSp
— ICC (@ICC) December 28, 2023