ಸೇಡಂ ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳ ಮೂರು ತಿಂಗಳ ಆಹಾರ ಸಾಮಾಗ್ರಿ ಮತ್ತು ಅಡುಗೆ ಅನಿಲದ ವರದಿ ನೀಡುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮನವಿ ಪತ್ರ ಸಲ್ಲಿಸಿದೆ.
“ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಕೇಂದ್ರದ ಸಿಬ್ಬಂದಿಯು ಮೂರು ತಿಂಗಳಿಂದ ಸರಿಯಾಗಿ ನಮಗೆ ಆಹಾರ ಸಾಮಾಗ್ರಿ ಮತ್ತು ಅಡಿಗೆ ಅನೀಲವನ್ನು ನೀಡುತ್ತಿಲ್ಲ ಎಂದು ಭಯದಿಂದ ತಿಳಿಸಿದರು. ತದನಂತರ ನಾವು ಸುತ್ತಲಿನ ಗ್ರಾಮಸ್ತರಿಗೆ ವಿಚಾರಿಸಿದಾಗ, ಪ್ರತಿ ತಿಂಗಳು ಆಹಾರ ಸರಬರಾಜು ವಾಹನನ್ನು ಕೇಂದ್ರಕ್ಕೆ ನೀಡಬೇಕಾಗಿದ್ದ ಪದಾರ್ಥನ್ನು ನೀಡದೆ, ಅಲ್ಪ ಪದಾರ್ಥ ನೀಡಿ ಪೂನಃ ಅದೆ ವಾಹನದ ಮುಖಾಂತರ ಮಾರಾಟವಾಗುತ್ತದೆ” ಎಂದು ಬಿಎಸ್‌ಪಿ ಮುಖಂಡರು ತಿಳಿಸಿದ್ದಾರೆ.
ಈ ದಂಧೆಯು ಅಧಿಕಾರಿಗಳ ಮಖಾಂತರವೇ ನಡೆಯುತ್ತಿದೆ ಎಂದು ಕೆಲವು ಮೂಲಗಳಿಂದ ಕಂಡುಬಂದಿರುತ್ತದೆ. ಅಡಿಗೆ ಅನೀಲವನ್ನು ಪ್ರತಿ ತಿಂಗಳು ನೀಡದೆ ಬೋಕಾಸು ಬಿಲ್ಲುಗಳು ಪಡೆದಿರುತ್ತಾರೆ. ಅಂಗನವಾಡಿ ಸಿಬ್ಬಂದಿಗಳ ಸಂಬಳಕ್ಕೆ ಪ್ರತಿ ತಿಂಗಳಿಗೆ ರೂ.200ನ್ನು ಮೇಲ್ವವಿಚಾರಕರು ಲಂಚವನ್ನು ಪಡೆಯುತ್ತಿದ್ದರೆ.
ಅದ್ದರಿಂದ ಬಡ ಮಕ್ಕಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗೆ ಕನ್ನ ಹಾಕಿ ಬಡವರ ಹೊಟ್ಟೆಯ ಮೇಲೆ ಹೊಡೆದು ನೀವು ಸಂಪಾದಿಸುತ್ತಿರುವುದನ್ನು ಬಹುಜನ ಸಮಾಜ ಪಕ್ಷವು ಸಹಿಸುವುದಿಲ್ಲ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ.
ಶೀಘ್ರವಾಗಿ ತಾವೂ ಇದನ್ನು ಸರಿಪಡಿಸಿ ಕೇಂದ್ರಗಳಿಗೆ ನೀಡಬೇಕಿದ್ದ ಆಹಾರ ಸಾಮಾಗ್ರಿಗಳು ನೀಡದಿದ್ದಲ್ಲಿ ತಮ್ಮ ವಿರುದ್ಧ ಬಹುಜನ ಸಮಾಜ ಪಕ್ಷವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಈ ವೇಳೆ ರೇವಣಸಿದ್ಧಪ್ಪ ಎಸ್. ಸಿಂಧೆ, ಸುನಿಲ್ ಹಳ್ಳಿ ಉಪಸ್ಥಿತರಿದ್ದರು.