“ನಾವು ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ತಡೀಲಿ ನೋಡೋಣ” ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲೆಸೆದಿದ್ದಾರೆ.
ಬಂಧಿತ ಶ್ರೀಕಾಂತ್ ಪೂಜಾರಿ ನಿವಾಸಕ್ಕೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಸರ್ಕಾರ ಏನು ಮಾಡುತ್ತದೋ ನಾವು ನೋಡಿಯೇ ತೀರುತ್ತೇವೆ. 2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ ನಂತರ ಭಾರತ ಹಿಂದೂ ರಾಷ್ಟ್ರ ಆಗುತ್ತದೆ. ಪಾಕಿಸ್ತಾನ ಮುಸ್ಲಿಮರ ದೇಶ ಆಗುವುದಾದರೆ, ಭಾರತ ಹಿಂದೂ ರಾಷ್ಟ್ರ ಯಾಕಾಗಬಾರದು” ಎಂದರು.
“ರಾಮಜನ್ಮಭೂಮಿ ಹೋರಾಟದಲ್ಲಿ ಶ್ರೀಕಾಂತ್ ಪೂಜಾರಿ ಭಾಗಿಯಾಗಿದ್ದರು. ಆದರೆ ಅವರ ಕುರಿತು ಇಲ್ಲಸಲದ ಆರೋಪ ಮಾಡುತ್ತಿದ್ದಾರೆ. ಶ್ರೀಕಾಂತ್ ವಿರುದ್ಧ ದೊಂಬಿ-ಗಲಭೆ ಪ್ರಕರಣ ದಾಖಲಾಗಿದ್ದವು ಎಂದು ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು. ರಾಮಭಕ್ತ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯಾಗಿ ಬಂಧನ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಅಬ್ಬಯ್ಯನೋ ಅಬ್ದುಲ್ಲಾನೋ ಗೊತ್ತಿಲ್ಲ
“ಶ್ರೀಕಾಂತ ದುಡಿಯುವವನು. ಬಿಡುಗಡೆ ಆಗುತ್ತೋ ಇಲ್ಲವೋ ಎಂದು ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಸಿಎಂ, ಗೃಹಮಂತ್ರಿ ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ಅಬ್ಬಯ್ಯನೋ ಅಬ್ದುಲ್ಲನೋ ಗೊತ್ತಿಲ್ಲ. ಅವರು ದಾರಿ ತಪ್ಪಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸು ಹಾಕಿ ಭ್ರಷ್ಟಾಚಾರ ಮಾಡುತ್ತಿದೆ. ಬೇರೆಯವರು ದುಡ್ಡು ಕೊಟ್ಟಿದ್ದಾರೆ, ಅದಕ್ಕೆ ಬಂಧನ ಮಾಡಿಲ್ಲ, ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಬಂಧನ ಮಾಡಿದ್ದಾರೆ. ದೊಂಬಿ ಪ್ರಕರಣ ಅಂತ ತಿಳಿಸಿದ್ದಾರೆ. 13 ಜನ ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಗೆ ಗುಡಿ ಕಟ್ಟುವ ಮುನ್ನ ದರಿದ್ರ ನಾರಾಯಣರತ್ತ ನೋಡುವರೇ ದೊರೆಗಳು?
“ಯಾವ ಆಧಾರದ ಮೇಲೆ ದೊಂಬಿ ಕೇಸ್ ಅಂತಾರೆ. ಇಡೀ ದೇಶ ರಾಮಮಯ ಆಗಿದೆ. ಅದಕ್ಕೆ ಕಾಂಗ್ರೆಸ್‌ನವರಿಗೆ ಹೊಟ್ಟೆಯುರಿ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಅವರ ಮೇಲೆ ರೌಡಿ ಶೀಟರ್ ಇಲ್ಲ ಮುಖ್ಯಮಂತ್ರಿಗಳೇ, ಆತ ಅಪರಾಧಿ ಅಲ್ಲ ಆರೋಪಿ. ಕೋರ್ಟ್ ಯಾವುದೇ ಕೇಸಿನಲ್ಲೂ ಅಪರಾಧಿ ಅಂದಿಲ್ಲ. ನಿಮ್ಮ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ” ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, “ಗೋಧ್ರಾ ಮಾದರಿಯಲ್ಲಿ ದಾಂಧಲೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ವಿಚಾರ ಏನು? ಗೋಧ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್‌ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡ್ತಿದ್ದಾರಾ? ಅಥವಾ ನೀವೇನಾದ್ರೂ ಗಲಭೆ ಎಬ್ಬಿಸಲು ಯೋಜನೆ ಹಾಕಿಕೊಂಡಿದ್ದೀರಾ” ಎಂದು ಪ್ರಶ್ನಿಸಿದರು.
ಮೂತ್ರಾಲಿಕ್ ಗೆ ಮರೆವು ಜಾಸ್ತಿ ಅನಿಸುತ್ತೆ,,ಉಡುಪಿ ಮಠದ ಸ್ವಾಮಿಗೋಳು,, ಪಬ್ಲಿಕ್ ಟಿವಿ ರಂಗಣ್ಣ ಮಾಡಿದ ಇಂಟರ್ವ್ಯೂ ನಲ್ಲಿ,,ಬ್ರಾಹ್ಮಣ್ಯ ಬೇರೆ ಹಿಂದುತ್ವ ಬೇರೆ ಬೇರೆ,,,, ಅಂದ್ರೆ ಬ್ರಾಹ್ಮಣರು ಹಿಂದೂಗಳಲ್ಲ ಸ್ಪಷ್ಟವಾಗಿ ಹೇಳಿದ್ದಾರೆ,, ನೀವು ಹಿಂದೂ ರಾಷ್ಟ್ರ ಮಾಡಿದರೆ ಸ್ವಾಮಿಗೋಳ ಭಕ್ತರು ಮತ್ತು ಅವರ ವರ್ಗದವರನ್ನು ಎಲ್ಲಿಗೆ ಕಳಿಸುವಿರಿ,,,
ಕೇವಲ ಅನ್ಯಧರ್ಮೀಯರ ಮೇಲೆ ದ್ವೇಷ ಕಾರಿಕೊಂಡು ಜೀವನ ಮಾಡುವ ಕಲೆ ಬೆಳೆಸಿಕೊಂಡ ಕೆಲವರಿಗೆ ಮೆದುಳಿಗಿಂತ ಜಾಸ್ತಿ ನಾಲಿಗೆ ಬಳಕೆ ಮಾಡುವರು,,,ಇವರ ಹುಚ್ಚಾಟಗಳಿಂದ ತಾವೇ ಹೇಳುವ ಹಿಂದೂಗಳಿರುವ ಸಮಾಜಕ್ಕೆ ಮತ್ತು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ,,,, ಕೊನೆಗೆ ಹಿಂದೂ ವಿಶಾಲ ಮನೋಭಾವ ಅರ್ಥವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಮಾಡುವರು ,,, ವೈದಿಕರ ಕೃಪಾಪೋಷಿತ ಸರಕಾರಗಳು ಅಧಿಕಾರದಲ್ಲಿ ಇಲ್ಲದಾಗ ಹೊಸಾ ಹೊಸಾ ಡೊಂಬರಾಟ ಆಡಲು ಸುರು ಮಾಡುವರು