ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-2’ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ವನಿಗದಿಯಂತೆ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಅಜಯ್ ದೇವಗನ್ ಅವರ ‘ಸಿಂಗಮ್ ಎಗೈನ್’ ಸಿನಿಮಾ ಕೂಡ ಆಗಸ್ಟ್ 15ರಂದೇ ಬಿಡುಗಡೆಯಾಗಲಿದೆ. ಹೀಗಾಗಿ, ‘ಪುಷ್ಪ-2’ ರಿಲೀಸ್ ದಿನಾಂಕ ಬದಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ವದಂತಿಗಳನ್ನು ಚಿತ್ರತಂಡ ತಳ್ಳಿ ಹಾಕಿದ್ದು, ಆಗಸ್ಟ್ 15ರಂದೇ ‘ಪುಷ್ಪ-2’ ಬಿಡುಗಡೆ ಆಗುತ್ತದೆ ಎಂದು ಹೇಳಿದೆ.
‘ಪುಷ್ಪ-2’ ಬಿಡುಗಡೆ ಬಗ್ಗೆ ಸಿನಿಮಾ ಸಿರ್ದೇಶಕ ಸುಕುಮಾರ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಪುಷ್ಪ-2’ ಆಗಸ್ಟ್ 15ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.
ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಕೂಡ ಟ್ವೀಟ್ ಮಾಡಿದ್ದು, “ಪುಷ್ಪ-2 ಬಿಡುಗಡೆ ಮುಂದೂಡುವುದಿಲ್ಲ. ಖಂಡಿತವಾಗಿಯೂ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ. ವದಂತಿಗಳನ್ನು ನಂಬಬೇಡಿ” ಎಂದು ಹೇಳಿದ್ದಾರೆ.
NO POSTPONEMENT… ‘PUSHPA 2’ ON INDEPENDENCE DAY 2024… Don’t trust the rumours… #Pushpa2 is certainly arriving on [Thursday] 15 Aug 2024 [#IndependenceDay].
The CLASH with #SinghamAgain is very much on.#AjayDevgn vs #AlluArjun #Pushpa2TheRule pic.twitter.com/vArtZZPGbc
— taran adarsh (@taran_adarsh) January 11, 2024
‘ಪುಷ್ಪ-1’ ಸಿನಿಮಾ ಅಲ್ಲು ಅರ್ಜುನ್ ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್‌ಆಗಿ ಹೊರಹೊಮ್ಮುವಂತೆ ಮಾಡಿತು. ಆಸ್ಕರ್ ಸ್ಥಾನಮಾನವೂ ದೊರೆಯಿತು. ಅಲ್ಲದೆ, ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಇದರೊಂದಿಗೆ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದೀಗ, ‘ಪುಷ್ಪ-2’ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.