ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಶಾಸಕ ಮತ್ತಿಮಡು ಹಾಗೂ ಕಾರಿನಲ್ಲಿದ್ದ ಮುಖಂಡರಿಗೆ ಗಾಯಗಳಾಗಿವೆ.
ಬೆಳಿಗ್ಗೆ ಕಲಬುರಗಿಯಿಂದ ಪಾಳಾ ಗ್ರಾಮಕ್ಕೆ ತೆರಳಿದ್ದರು, ಅಲ್ಲಿಂದ ಶಹಾಬಾದ್ ನಗರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿಯಾಗಿದೆ.
ಗಾಯಗೊಂಡ ಶಾಸಕರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮಾಹಿತಿ ಪಡೆದ ಅವರ ಪತ್ನಿ ಹಾಗೂ ಪುತ್ರ ಆಸ್ಪತ್ರೆಗೆ ಧಾವಿಸಿದರು.