ಧಾರವಾಡ | ಎಲ್ಲೆಂದರಲ್ಲಿ ನೆಲಕ್ಕೆ ಬಿದ್ದಿರುವ ಕೇಬಲ್‌ಗಳು; ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಬೇಸರ

Date:

Advertisements

ಧಾರವಾಡದ ಹಲವೆಡೆ ಪಾದಚಾರಿ ಮಾರ್ಗದಲ್ಲಿ ಒಎಫ್‌ಸಿ, ಎಫ್‌ಟಿಟಿಎಚ್‌, ಫೋನ್‌, ಟಿ.ವಿ ಹೀಗೆ ವಿವಿಧ ಕೇಬಲ್‌ಗಳು ನೆಲಕ್ಕೆ ಬಿದ್ದಿವೆ. ಕೆಲವುಕಡೆ ತುಂಡಾಗಿವೆ, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಕೆಲವು ಕಡೆ ವಿದ್ಯುತ್‌ ಕಂಬಗಳು, ಬಡಾವಣೆಯ ರಸ್ತೆ ಫಲಕಗಳಲ್ಲಿ ಕೇಬಲ್‌ ಸಿಂಬೆಗಳು ಜೋತುಬಿದಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿವೆ.

ಡಿ.ಸಿ. ಕಂಪೌಂಡದಲ್ಲಿನ ನೀರಾವರಿ ಎಂಜಿನಿಯರ್‌ ಕಚೇರಿ ಬದಿ, ಎದುರಿನ ಕಚೇರಿಯ ಕಾಂಪೌಂಡ್‌ ಬದಿ, ಈ ಪ್ರದೇಶದಲ್ಲಿನ ಮರಗಳಲ್ಲಿ ಕೇಬಲ್‌ಗಳು ಬಿದ್ದಿವೆ. ಬಿಡಾಡಿ ದನಗಳು, ಪಾದಚಾರಿಗಳು ಕೇಬಲ್‌ ತುಳಿದು-ಎಡವಿ ಬಿದ್ದಿರುವ ನಿದರ್ಶನಗಳು ಇವೆ. ಕೆಲವು ಕಡೆ ರಸ್ತೆಯಲ್ಲಿ ಅಡ್ಡಲಾಗಿಯೂ ಕೇಬಲ್‌ ಅಳವಡಿಸಲಾಗಿದೆ.

ನಗರದ ಡಿ.ಸಿ ಕಂಪೌಂಡ್‌ ಸುತ್ತಮುತ್ತ, ಜಯನಗರ, ಸಪ್ತಾಪೂರ, ಸಹಿತ ಬಹಳಷ್ಟು ಕಡೆ ಪಾದಚಾರಿ ಮಾರ್ಗಗಳಲ್ಲಿ ಈ ಸಮಸ್ಯೆ ಇದೆ. ಬಿಆರ್‌ಟಿಎಸ್‌ ವಿಭಜಕದಲ್ಲಿ ಅಳವಡಿಸಿರುವ ಬೇಲಿಯಲ್ಲೂ ಕೇಬಲ್‌ಗಳು ಸಿಕ್ಕಿಹಾಕಿಕೊಂಡಿವೆ.

Advertisements

ಮಳೆ, ಗಾಳಿ ಸಂದರ್ಭದಲ್ಲಿ ಯಾವ ವಾಹನ, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತವೆಯೋ ಹೇಳಲಾಗದು. ಹೆಸ್ಕಾಂ ಮತ್ತು ಮಹಾನಗರ ಪಾಲಿಕೆ ಈ ಕೇಬಲ್‌ಗಳವಿಷಯದಲ್ಲಿ ಜಾಣ ಕುರುಡರಾಗಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಕೇಬಲ್‌ಗಳ ಸಮಸ್ಯೆ ಗೊತ್ತಿದ್ದರೂ ಅದನ್ನು ನಿವಾರಿಸಲು ಕ್ರಮ ವಹಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಹೆಚ್ಚು ಕೇಬಲ್‌ ಹಾಕಿರುವ, ಕೇಬಲ್‌ ಸಿಂಬೆ ಜೋತು ಹಾಕಿರುವ ವಿದ್ಯುತ್‌ ಕಂಬಗಳು ಕೆಲವುಕಡೆ ವಾಲಿವೆ. ಶಿಥಿಲವಾಗಿರುವ ಕಂಬಗಳಲ್ಲಿನ ಸಿಂಬೆಗಳು ಮಳೆ ರಭಸವಾಗಿ ಬಂದರೆ, ಜೋರು ಗಾಳಿ ಸಂದರ್ಭದಲ್ಲಿ ತೂಗಾಡುತ್ತವೆ ಇದರಿಂದ ರಸ್ತೆಗಳಲ್ಲಿ ಓಡಾಡುವವರು ಅಪಾಯದ ಪಕ್ಕದಲ್ಲೇ ಸುಳಿದಾಡುವಂತಾಗಿದೆ.

ರಸ್ತೆ ಬದಿ ಪಾದಚಾರಿ ಮಾರ್ಗದ ವೃಕ್ಷಗಳು, ಕಟ್ಟಡಗಳ ಕಾಪೌಂಡ್‌ಗಳು ಸಹಿತ ಎಲ್ಲೆಂದರಲ್ಲಿ ಕೇಬಲ್‌ ಅಳವಡಿಸಬಾರದು. ಅವಾಂತರಗಳಿಗೆ ಪಾಲಿಕೆ ಮತ್ತು ಹೆಸ್ಕಾಂನವರ ಬೇಜವಾಬ್ದಾರಿತನ ಕಾರಣ. ಈ ಬಗ್ಗೆ ಹಲವು ಬಾರಿ ಪಾಲಿಕೆಯವರಿಗೆ ದೂರು ನೀಡಿದರೂ ಸರಿಯಾಗಿ ಕ್ರಮ ವಹಿಸಿಲ್ಲ. ನಿಯಮಿತವಾಗಿ ಮಾರ್ಗ ನಿರ್ವಹಣೆ ಮಾಡಬೇಕು. ಅನಧಿಕೃತ ಕೇಬಲ್‌ ತೆರವಿಗೆ ಸಂಸ್ಥೆಗಳು ಕ್ರಮ ವಹಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ನಗರದ ಜನತೆ ಒತ್ತಾಯಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X