ಮೈಸೂರಿನ ಸಮತಾ ಅಧ್ಯಯನ ಕೇಂದ್ರವು ಡಾ. ವಿಜಯ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ ವಿದ್ಯಾರ್ಥಿ ಮತ್ತು ಯುವಜನರಿಗೆ ರಾಜ್ಯಮಟ್ಟದ ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಕೇಂದ್ರವು ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ರಾಜ್ಯಮಟ್ಟದ ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಕವನ ಸ್ಪರ್ಧಿಸಬಯಸುವವರು ಎರಡು ಕವನಗಳನ್ನು ಕಳಿಸಬೇಕು. ಲಲಿತ ಪ್ರಬಂಧ ಸ್ಪರ್ಧೆಗೆ ಒಂದು ಪ್ರಬಂಧವನ್ನು ಕಳಿಸಬೇಕು ಎಂದು ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.
ಅಭ್ಯರ್ಥಿಗಳು ಕಳುಹಿಸುವ ಕವನ ಹಾಗೂ ಪ್ರಬಂಧಗಳು ಈ ಮೊದಲು ಎಲ್ಲಿಯೂ ಪ್ರಸಾರ ಅಥವಾ ಪ್ರಕಟ ಆಗಿರಬಾರದು. ಪ್ರಬಂಧಕ್ಕೆ ಗರಿಷ್ಟ ಪದ ಮಿತಿ 2000 ಪದಗಳು. ವಯಸ್ಸಿನ ಖಚಿತತೆಗೆ ಎಸ್ಎಸ್ಎಲ್‌ಸಿ ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್ ಲಗತಿಸಬೇಕು. ಕವನ ಪ್ರಬಂಧಗಳನ್ನು ಹಾಳೆಯ ಒಂದು ಮಗ್ಗಲಲ್ಲಿ ಸ್ಪಷ್ಟವಾಗಿ ಬರೆದು ಅಥವಾ ವಾಟ್ಸಪ್ ಮಾಡಿ. ಪ್ರತ್ಯೇಕ ಹಾಳಿಯಲ್ಲಿ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿವರ ನಮೂದಿಸಿ ಜ. 29, 2024ರ ಒಳಗೆ, ಶ್ರೀಮತಿ ವಿಜಯ ರಾವ್. ಮನೆ ನಂಬರ್ 861, 14ನೇ ಮೇನ್ ವಿಜಯನಗರ ಮೊದಲನೇ ಹಂತ, ಮೈಸೂರು. ಪಿನ್ 570017 ಈ ವಿಳಾಸಕ್ಕೆ ಕಳುಹಿಸಬೇಕು.
ಎರಡು ಸ್ಪರ್ಧೆಗಳಿಗೆ ಒಂದೇ ಮೊತ್ತದ ಪ್ರಥಮ 5,000 ರೂ, ದ್ವಿತೀಯ 3000 ರೂ, ತೃತೀಯ ರೂಪಾಯಿ 2000 ರೂ, ಪ್ರತ್ಯೇಕ ಬಹುಮಾನವಿರುತ್ತದೆ. ವಿಜೇತರು ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆಯುವ ತಲಾ ಹತ್ತು ಸ್ಪರ್ಧಿಗಳಿಗೆ ಮೇ ತಿಂಗಳ ಕೊನೆಯ ವಾರದಲ್ಲಿ ಒಂದಿನ ಸಾಹಿತ್ಯ ಕಮ್ಮಟ ಆಯೋಜಿಸಲಾಗುವುದು ಎಂದು ಸಮತಾ ಅಧ್ಯಯನ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.