ಉಕ್ರೇನ್ ಯುದ್ಧ ಕೈದಿಗಳನ್ನು ಕರೆತರುತ್ತಿದ್ದ ರಷ್ಯಾ ಮಿಲಿಟರಿ ವಿಮಾನ ಪತನಗೊಂಡು ವಿಮಾನದಲ್ಲಿದ್ದ ಎಲ್ಲ 74 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ಕಾಲಮಾನ 11 ಗಂಟೆ ವೇಳೆ ಬೆಲ್ಗೊರೋಡ್ ಪ್ರಾಂತ್ಯದಿಂದ ಯುದ್ಧ ಕೈದಿಗಳನ್ನು ವಾಪಸ್ ಕರೆತರುತ್ತಿದ್ದ ವೇಳೆ ಪತನವಾಗಿದೆ. ಅಪಘಾತಕ್ಕೆ ಕಾರಣವನ್ನು ಇನ್ನಷ್ಟೆ ತಿಳಿಯಬೇಕಿದೆ.
ಅಗ್ನಿಶಾಮಕಗಳು, ಆಂಬ್ಯುಲೆನ್ಸ್ಗಳು ಹಾಗೂ ಪೊಲೀಸರು ಘಟನಾ ಸ್ಥಳ ಕೊರೊಚನ್ಸೆ ಜಿಲ್ಲೆಯ ಬೆಲ್ಗೊರೋಡ್ಗೆ ತಲುಪಿದ್ದಾರೆ ಎಂದು ಸ್ಥಳೀಯ ತುರ್ತು ಸೇವಾ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಬೆಲ್ಗೊರೋಡ್ ಪ್ರಾಂತ್ಯವು ಉಕ್ರೇನ್ ಗಡಿಯಲ್ಲಿದ್ದು, ಡಿಸೆಂಬರ್ನಲ್ಲಿ ಕ್ಷಿಪಣಿ ದಾಳಿಯಿಂದ 25 ಮೃತಪಟ್ಟಿರುವುದು ಒಳಗೊಂಡು ಹಲವು ತಿಂಗಳಿನಿಂದ ಉಕ್ರೇನ್ ಕಡೆಯಿಂದ ದಾಳಿ ನಡೆಸಲಾಗುತ್ತಿದೆ. ವಿಮಾನ ಪತನವಾಗಿ ಸ್ಫೋಟವಾಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
“ಆರು ಸಿಬ್ಬಂದಿ, ಮೂವರು ಭದ್ರತಾ ಸಿಬ್ಬಂದಿಯೊಂದಿಗೆ ಉಕ್ರೇನಿನ 65 ಯುದ್ಧ ಕೈದಿಗಳನ್ನು ಸೆರೆ ಹಿಡಿದು ವಿನಿಮಯಕ್ಕಾಗಿ ಬೆಲಗೊರೋಡ್ ಪ್ರಾಂತ್ಯಕ್ಕೆ ಕರೆತರಲಾಗುತ್ತಿತ್ತು” ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ ಸೇನೆ ತನ್ನ ಸ್ವಂತ ಸೇನೆಯನ್ನೇ ಹೊಡೆದುರುಳಿಸಿದೆ. ನಮ್ಮ ಪೈಲಟ್ಗಳು ಮಾನವೀಯತೆಯ ಕಾರ್ಯಾಚರಣೆ ಮಾಡುತ್ತಿದ್ದ ನಮ್ಮ ಪೈಲಟ್ಗಳನ್ನು ಕೂಡ ಹೊಡೆದುರುಳಿಸಲಾಗಿದೆ” ಎಂದು ರಷ್ಯ ಸಂಸತ್ತಿನ ಕೆಳಮನೆಯ ಸ್ಪೀಕರ್ ಆರೋಪಿಸಿದ್ದಾರೆ.
ರಷ್ಯಾ ಕ್ಷಿಪಣಿ ದಾಳಿಯಿಂದ ನಮ್ಮ ವಾಯು ಪಡೆಯ 18 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.