ಉಕ್ರೇನ್ ಯುದ್ಧ ಕೈದಿಗಳನ್ನು ಕರೆತರುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಪತನ: 74 ಸಾವಿನ ಶಂಕೆ!

Date:

ಉಕ್ರೇನ್ ಯುದ್ಧ ಕೈದಿಗಳನ್ನು ಕರೆತರುತ್ತಿದ್ದ ರಷ್ಯಾ ಮಿಲಿಟರಿ ವಿಮಾನ ಪತನಗೊಂಡು ವಿಮಾನದಲ್ಲಿದ್ದ ಎಲ್ಲ 74 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯ ಕಾಲಮಾನ 11 ಗಂಟೆ ವೇಳೆ ಬೆಲ್‌ಗೊರೋಡ್‌ ಪ್ರಾಂತ್ಯದಿಂದ ಯುದ್ಧ ಕೈದಿಗಳನ್ನು ವಾಪಸ್‌ ಕರೆತರುತ್ತಿದ್ದ ವೇಳೆ ಪತನವಾಗಿದೆ. ಅಪಘಾತಕ್ಕೆ ಕಾರಣವನ್ನು ಇನ್ನಷ್ಟೆ ತಿಳಿಯಬೇಕಿದೆ.

ಅಗ್ನಿಶಾಮಕಗಳು, ಆಂಬ್ಯುಲೆನ್ಸ್‌ಗಳು ಹಾಗೂ ಪೊಲೀಸರು ಘಟನಾ ಸ್ಥಳ ಕೊರೊಚನ್ಸೆ ಜಿಲ್ಲೆಯ ಬೆಲ್‌ಗೊರೋಡ್‌ಗೆ ತಲುಪಿದ್ದಾರೆ ಎಂದು ಸ್ಥಳೀಯ ತುರ್ತು ಸೇವಾ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಲ್‌ಗೊರೋಡ್‌ ಪ್ರಾಂತ್ಯವು ಉಕ್ರೇನ್ ಗಡಿಯಲ್ಲಿದ್ದು, ಡಿಸೆಂಬರ್‌ನಲ್ಲಿ ಕ್ಷಿಪಣಿ ದಾಳಿಯಿಂದ 25 ಮೃತಪಟ್ಟಿರುವುದು ಒಳಗೊಂಡು ಹಲವು ತಿಂಗಳಿನಿಂದ ಉಕ್ರೇನ್ ಕಡೆಯಿಂದ ದಾಳಿ ನಡೆಸಲಾಗುತ್ತಿದೆ. ವಿಮಾನ ಪತನವಾಗಿ ಸ್ಫೋಟವಾಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ

“ಆರು ಸಿಬ್ಬಂದಿ, ಮೂವರು ಭದ್ರತಾ ಸಿಬ್ಬಂದಿಯೊಂದಿಗೆ ಉಕ್ರೇನಿನ 65 ಯುದ್ಧ ಕೈದಿಗಳನ್ನು ಸೆರೆ ಹಿಡಿದು ವಿನಿಮಯಕ್ಕಾಗಿ ಬೆಲಗೊರೋಡ್ ಪ್ರಾಂತ್ಯಕ್ಕೆ ಕರೆತರಲಾಗುತ್ತಿತ್ತು” ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಉಕ್ರೇನ್ ಸೇನೆ ತನ್ನ ಸ್ವಂತ ಸೇನೆಯನ್ನೇ ಹೊಡೆದುರುಳಿಸಿದೆ. ನಮ್ಮ ಪೈಲಟ್‌ಗಳು ಮಾನವೀಯತೆಯ ಕಾರ್ಯಾಚರಣೆ ಮಾಡುತ್ತಿದ್ದ ನಮ್ಮ ಪೈಲಟ್‌ಗಳನ್ನು ಕೂಡ ಹೊಡೆದುರುಳಿಸಲಾಗಿದೆ” ಎಂದು ರಷ್ಯ ಸಂಸತ್ತಿನ ಕೆಳಮನೆಯ ಸ್ಪೀಕರ್ ಆರೋಪಿಸಿದ್ದಾರೆ.

ರಷ್ಯಾ ಕ್ಷಿಪಣಿ ದಾಳಿಯಿಂದ ನಮ್ಮ ವಾಯು ಪಡೆಯ 18 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹೇರ್‌ ಸ್ಟೈಲ್’ ಕಾರಣಕ್ಕೆ ಶಾಲೆಯಲ್ಲಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಶಿಕ್ಷೆ; ಶಾಲೆಯ ನಡೆ ಎತ್ತಿಹಿಡಿದ ಕೋರ್ಟ್‌

ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ...

ಯುಎಇ | ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ...

ಅಮೆರಿಕ | ಭಾರತ ಮೂಲದ ದಂಪತಿ, ಇಬ್ಬರು ಅವಳಿ ಮಕ್ಕಳು ಅನುಮಾನಾಸ್ಪದ ಸಾವು

ಭಾರತೀಯ ಮೂಲದ ಕೇರಳದಿಂದ ವಲಸೆ ಹೋಗಿದ್ದ ದಂಪತಿ ಹಾಗೂ ಅವರ ಇಬ್ಬರು...

12 ದಿನಗಳ ಹಿಂದೆ ಸಹಾಯಕ್ಕಾಗಿ ಕರೆ ಮಾಡಿದ್ದ ಬಾಲಕಿ ಶವವಾಗಿ ಪತ್ತೆ

12 ದಿನಗಳ ಹಿಂದೆ 'ನನಗೆ ತುಂಬಾ ಭಯವಾಗಿದೆ, ದಯವಿಟ್ಟು ಬನ್ನಿ' ಎಂದು...