ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಕ್ರಿಕೆಟ್ ಪಂದ್ಯಗಳ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರಾಮದ ವೇಳೆಗೆ ಆರಂಭಿಕ ಮೇಲುಗೈ ಸಾಧಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್‌ಗೆ 12ನೇ ಓವರ್‌ನಲ್ಲಿ ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಆರಂಭಿಕ ಆಟಗಾರ ಝಾಕ್ ಕ್ರಾಲಿ(20) ಅವರನ್ನು ತಂಡದ ಮೊತ್ತ 55 ಇರುವಾಗ ಪೆವಿಲಿಯನ್‌ಗೆ ಕಳಿಸಿದರು. 15ನೇ ಓವರ್‌ನಲ್ಲಿ ಮೊದಲ ಕ್ರಮಾಂಕದ ಬ್ಯಾಟರ್ ಬೆನ್ ಡಕೆಟ್ (35) ಅವರನ್ನು ಎಲ್‌ಬಿ ಬಲೆಗೆ ಕೆಡುವುದರ ಮೂಲಕ ಎರಡನೇ ವಿಕೆಟ್ ಪಡೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
ಮತ್ತೊಬ್ಬ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ, ಒಲ್ಲಿ ಪೋಪ್ (1) ಅವರನ್ನು ಹೆಚ್ಚು ಹೊತ್ತು ನಿಲ್ಲಿಸದೆ ಔಟ್ ಮಾಡಿದರು. ಜೋ ರೂಟ್ ಅವರೊಂದಿಗೆ 61 ರನ್‌ಗಳ ಜೊತೆಯಾಟವಾಡುತ್ತಿದ್ದ ಬೈರ್‌ಸ್ಟೋ ಅವರನ್ನು(37) ಅಕ್ಸರ್ ಪಟೇಲ್ ಬೌಲ್ಡ್ ಮಾಡಿದರು. ಒಂದಷ್ಟು ಕಾಲ ಕ್ರೀಸ್‌ನಲ್ಲಿ ಆಟವಾಡುತ್ತಿದ್ದ ಜೋರೂಟ್(29) ರವೀಂದ್ರ ಜಡೇಜಾ ಪೆವಿಲಿಯನ್‌ಗೆ ಕಳಿಸಿದರು. ಬೆನ್ ಫೋಕ್ಸ್(2) ಕೂಡ ಅಕ್ಸರ್ ಪಟೇಲ್ ಬೌಲಿಂಗ್‌ನಲ್ಲಿ ಔಟಾದರು.
ಬೋಜನ ವಿರಾಮದ ನಂತರ ಇಂಗ್ಲೆಂಡ್ 39 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತ್ತು. ರಿಹಾನ್ ಅಹಮದ್ (0) ಹಾಗೂ ನಾಯಕ ಬೆನ್ ಸ್ಟೋಕ್ಸ್(8) ರನ್ ಗಳಿಸಿ ಆಡುತ್ತಿದ್ದರು.
ಭಾರತದ ಪರ ಅಶ್ವಿನ್ 22/2, ಅಕ್ಸರ್ ಪಟೇಲ್ 31/2 ಹಾಗೂ ರವೀಂದ್ರ ಜಡೇಜಾ 43/2 ವಿಕೆಟ್ ಕಬಳಿಸಿದರು.
ಆಟವಾಡುತ್ತಿರುವ ಉಭಯ ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್:
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.