12ನೇ ಶತಮಾನದ ವಚನಕಾರರಲ್ಲಿ ಮಡಿವಾಳ ಮಾಚಿದೇವರು ಒಬ್ಬರು, ವಚನಕಾರರಲ್ಲಿ ಶ್ರೇಷ್ಠವಚನಕಾರ. ಮಡಿಯನ್ನು ತೊಳೆಯುವುದರ ಜೊತೆ ಜನರ ಮನಸ್ಸಿನ ಮೈಲಿಗೆ ತೊಳಿಯುವ ಕೆಲಸ ತಮ್ಮ ವಚನಗಳ ಮೂಲಕ ಮಾಡಿದ್ದಾರೆ ಎಂದು ಮಡಿವಾಳ ಸಮಾಜದ ಮುಖಂಡ ಅಪ್ಪಸಾಬ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ಆಡಳಿತದಿಂದ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಡಿವಾಳ ಮಾಚಿದೇವ ಅವರು ಮಹಾಶರಣರ ಇದರಿಂದ ಸಮಾಜದಲ್ಲಿ ಹಲವಾರು ಅಂಕುಡೊಂಕುಗಳನ್ನ ತಿದ್ದುವಲ್ಲಿ ಪ್ರಯತ್ನ ಮಾಡಿದ 12ನೇ ಶತಮಾನದ ಶರಣರಲ್ಲಿ ಇವರು ಒಬ್ಬರು ಎಂದರು.
ಇಂದಿನ ಪ್ರಸ್ತುತ ದಿನಗಳಲ್ಲೂ ಕೂಡ ಅವರ ವಚನಗಳು ವಾಸ್ತವವಾಗಿವೆ. ಮನುಷ್ಯನ ಮನಸ್ಸಿನ ಮೈಲಿಗೆ ತೊಳಿಯುವವರೆಗೂ ಸಮಾನತೆ ಆಗುವುದಿಲ್ಲ. ಜಾತಿ, ಧರ್ಮವೆನ್ನದೆ ಶರಣರ ವಚನಗಳಂತೆ ನಮ್ಮ ಬದುಕು ಸಾಗಿಸಿ ನಮ್ಮ ಬದುಕು ಹಸನಾಗಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕ ಉಪದಂಡಾಧಿಕಾರಿ ಪ್ರಸನ್ನ ಕುಮಾರ್ ಮೊಘೇಕರ್, ಶಂಭುಲಿಂಗ ದೇಸಾಯಿ, ಶೋಭಾ ಸಜನ್, ಮೋನಮ್ಮ ಸುತಾರ್, ಸಾಯಿಬಣ್ಣ ಕಲ್ಯಾಣಕರ್, ಬಸಣ್ಣ ಸರ್ಕಾರ, ದೇವೇಂದ್ರಪ್ಪ, ಧರ್ಮರಾಯ ಮಡಿವಾಳ, ನಾಗರಾಜ್ ಮಲ್ಲಣ್ಣ, ಬಸವರಾಜ್, ತಾಯಮ್ಮ, ಮಾಂತೇಶ್, ಷಣ್ಮುಖ, ಅಖಂಡು, ಮರೆಪ್ಪ, ಮಲ್ಲೇಶ್ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.