ವಿಶಾಖಪಟ್ಟಣದ ಡಾ. ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಎಸೆದ ಅದ್ಭುತ ಯಾರ್ಕರ್ ಎಸೆತವೊಂದಕ್ಕೆ ಓಲಿ ಪೋಪ್ ಕ್ಲೀನ್‌ಬೌಲ್ಡ್ ಆಗಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್‌ಗಳಿಸಿ ಟೀಮ್ ಇಂಡಿಯಾ ಆಲೌಟಾದ ಬಳಿಕ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಬುಮ್ರಾ ಹಾಗೂ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮಾರಕ ದಾಳಿಗೆ ರನ್ ಗಳಿಸಲು ಪರದಾಡಿದ ಆಂಗ್ಲನ್ನರು, 239 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದೆ.
ಪ್ರಶಸ್ತಿಗೆ ಅರ್ಹವಾದ ಎಸೆತ ಎಂದ ನೆಟ್ಟಿಗರು
ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಓಲಿ ಪೋಪ್, ಜಸ್ಪ್ರೀತ್ ಬುಮ್ರಾ ಎಸೆದ ಅದ್ಭುತ ಯಾರ್ಕರ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆಗಿರುವ ವಿಡಿಯೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
@mufaddal_vohra ಎಂಬ ಎಕ್ಸ್ ಬಳಕೆದಾರರೊಬ್ಬರು ಬಿಸಿಸಿಐ ಹಂಚಿಕೊಂಡಿರುವ ವಿಡಿಯೋವನ್ನು ತಮ್ಮ ವಾಲ್‌ನಲ್ಲಿ ಹಂಚಿಕೊಂಡು, “ಬುಮ್ರಾ ಈ ಮಾರಕ ಯಾರ್ಕರ್‌ಗಾಗಿ ಪ್ರತ್ಯೇಕ ಪ್ರಶಸ್ತಿಗೆ ಅರ್ಹರು” ಎಂದು ತಿಳಿಸಿದ್ದಾರೆ.
BUMRAH DESERVES A SEPRATE AWARD FOR THIS MENTAL YORKER…!!! 🤯🔥pic.twitter.com/mtkf3D5E6s
— Mufaddal Vohra (@mufaddal_vohra) February 3, 2024
14 ಮೀಟರ್ ಹಿಂದೆ ಓಡಿ ಹಿಡಿದ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್
ಅಕ್ಸರ್ ಪಟೇಲ್ ಅವರು ಇಂಗ್ಲೆಂಡ್ ಆರಂಭಿಕ ಆಟಗಾರ ಜಾಕ್ ಕ್ರಾಲಿಯನ್ನು ತಮ್ಮ ಸ್ಪಿನ್ ಬೌಲಿಂಗ್‌ನ ಬಲೆಗೆ ಬೀಳಿಸಿದರು. ಅಕ್ಷರ್ ಪಟೇಲ್ ಅವರ ಈ ವಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ಇದೆ. ಸುಮಾರು 14 ಮೀಟರ್ ಹಿಂದಕ್ಕೆ ಓಡಿ ಬಂದ ಅಯ್ಯರ್ ಡೈವ್ ಮಾಡಿ ಕ್ಯಾಚ್‌ನ್ನು ಹಿಡಿದರು.
𝙄. 𝘾. 𝙔. 𝙈. 𝙄
That was a ripper of a catch! ⚡️ ⚡️
Follow the match ▶️ https://t.co/X85JZGt0EV #TeamIndia | #INDvENG | @ShreyasIyer15 | @IDFCFIRSTBank pic.twitter.com/JSAHGek6nK
— BCCI (@BCCI) February 3, 2024
ಸಂಘಟಿತ ದಾಳಿ ನಡೆಸಿದ ಟೀಮ್ ಇಂಡಿಯಾ
ಇಂಗ್ಲೆಂಡ್ ಉತ್ತಮ ಆರಂಭವಾಗಿತ್ತು. ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ 59 ರನ್‌ಗಳ ಉತ್ತಮ ಜೊತೆಯಾಟ ನೀಡುತ್ತಾ ಮುಂದುವರಿಯುತ್ತಿದ್ದಾಗ ಬೆನ್ ಡಕೆಟ್(21 ರನ್) ಅವರನ್ನು ಔಟ್ ಮಾಡುವ ಕುಲ್‌ದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್‌ಗೆ ಅರ್ಧಶತಕ ದಾಖಲಿಸಿ ಮುಂದುವರಿಯುತ್ತಿದ್ದ ಜಾಕ್ ಕ್ರಾಲಿ(76 ರನ್) ಬಲಿಯಾದರು. ಬಳಿಕ ಓಲಿ ಪೋಪ್(23 ರನ್) ಬುಮ್ರಾ ಮಾರಕ ಯಾರ್ಕರ್‌ಗೆ ಬಲಿಯಾದರು. ಜೋ ರೂಟ್(5 ರನ್) ಮತ್ತೆ ವಿಫಲರಾದರು. ಉಳಿದಂತೆ ಅರ್ಧ ಶತಕದತ್ತ ಮುಂದುವರಿಯುತ್ತಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (47) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಜಾನಿ ಬೈರ್‌ಸ್ಟೋವ್ (25 ರನ್), ಬೆನ್ ಫೋಕ್ಸ್ (6 ರನ್), ರೆಹಾನ್ ಅಹ್ಮದ್ 6 ರನ್ ಗಳಿಸಿ ಔಟಾದರು.
🚨 Milestone Alert 🚨
1️⃣5️⃣0️⃣ wickets in Test cricket and counting for vice-Captain Jasprit Bumrah! 🙌 🙌
Follow the match ▶️ https://t.co/X85JZGt0EV #TeamIndia | #INDvENG | @IDFCFIRSTBank pic.twitter.com/AHDAEpCEF0
— BCCI (@BCCI) February 3, 2024
ಬುಮ್ರಾ 5 ವಿಕೆಟ್ ಪಡೆದರೆ, ಕುಲ್‌ದೀಪ್ 3 ವಿಕೆಟ್ ಪಡೆದಿದ್ದಾರೆ. ಅಕ್ಸರ್ ಪಟೇಲ್ ಒಂದು ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ.
ಬುಮ್ರಾ 150 ವಿಕೆಟ್ ಸಾಧನೆ
ಬುಮ್ರಾ ಈವರೆಗೆ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅದರೊಂದಿಗೆ 10ನೇ ಬಾರಿಗೆ ಐದು ವಿಕೆಟ್ ಗೊಂಚಲು ಪಡೆದುಕೊಂಡ ಸಾಧನೆ ಮಾಡಿದ್ದಾರೆ.
ಟೀಮ್ ಇಂಡಿಯಾ ಪರ ‘ಯಶಸ್ವಿ ಜೈಸ್ವಾಲ್’
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ 396 ರನ್‌ಗಳಿಗೆ ಆಲೌಟ್ ಆಗಿದೆ. ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾದರು. ಪರಿಣಾಮ ಟೀಮ್ ಇಂಡಿಯಾ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು.
ಎರಡನೇ ದಿನದಾಟವನ್ನು 6 ವಿಕೆಟ್‌ಗೆ 336 ರನ್‌ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ 396 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಅಶ್ವಿನ್ ಜೋಡಿ ಏಳನೇ ವಿಕೆಟ್‌ಗೆ 34 ರನ್ ಜೊತೆಯಾಟದ ಕಾಣಿಕೆ ನೀಡಿದರು.
Innings Break! #TeamIndia posted 396 runs on the board, with @ybj_19 scoring a mighty 209.
Scorecard ▶️ https://t.co/X85JZGt0EV#INDvENG | @IDFCFIRSTBank pic.twitter.com/OVaIuHKbfE
— BCCI (@BCCI) February 3, 2024
ಯಶಸ್ವಿ ಜೈಸ್ವಾಲ್ ಮನಮೋಹಕ ಬ್ಯಾಟಿಂಗ್ ಎರಡನೇ ದಿನದ ಮೊದಲಾವಧಿಯಲ್ಲೂ ಮುಂದುವರೆಸಿದರು.ಯಶಸ್ವಿ ಜೈಸ್ವಾಲ್ ಸುಮಾರು 423 ನಿಮಿಷ ಬ್ಯಾಟಿಂಗ್ ಮಾಡಿ 290 ಎಸೆತಗಳನ್ನು ಎದುರಿಸಿ 209 ರನ್ ಸಿಡಿಸಿದರು. ಇದರಲ್ಲಿ 19 ಬೌಂಡರಿ, 7 ಸಿಕ್ಸರ್ ಸೇರಿವೆ. ಇವರು ಅನುಭವಿ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ಔಟ್ ಆದರು.
ಟೀಮ್ ಇಂಡಿಯಾ ಎರಡನೇ ದಿನದಾಟದಲ್ಲಿ 60 ರನ್ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ 25 ಓವರ್ ಬೌಲಿಂಗ್ ಮಾಡಿ 47 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಪದಾರ್ಪಣೆ ಪಂದ್ಯವನ್ನು ಆಡುತ್ತಿರುವ ಶೋಯಿಬ್ ಬಶೀರ್ ಹಾಗೂ ರೇಹನ್ ಅಹ್ಮದ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.