ಕೊಪ್ಪಳ | ಮೇ ಸಾಹಿತ್ಯ ಮೇಳದ 10ನೇ ಆವೃತ್ತಿ ಕುರಿತು ಸಭೆ

Date:

Advertisements

ಕೊಪ್ಪಳದಲ್ಲಿ 10 ನೇ ಮೇ ಸಾಹಿತ್ಯ ಮೇಳ ನಡೆಯಬೇಕೆಂದು 40ಕ್ಕೂ ಹೆಚ್ಚು ಮಂದಿ ತಿಳಿಸಿದ್ದು, ಅಗತ್ಯವಿರುವ ಸಹಕಾರ ಕೊಟ್ಟು ವಹಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ಹೇಳಿದ್ದಾರೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.

ಕೊಪ್ಪಳ ನಗರದ ಐಬಿಯಲ್ಲಿ ಹಮ್ಮಿಕೊಂಡಿದ್ದ ಮೇ ಸಾಹಿತ್ಯ ಮೇಳದ 10ನೇ ಆವೃತ್ತಿಯನ್ನು ನಗರದಲ್ಲಿಯೇ ಸಂಘಟಿಸುವ ಕುರಿತು ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿ, 10ನೇ ಮೇ ಸಾಹಿತ್ಯ ಮೇಳವನ್ನು ಮೇ 25 ಮತ್ತು 26ರಂದು ಸಂಘಟಿಸಲು ನಿರ್ಧರಿಸಿದರು.

ಅಜಮೀರ ನಂದಾಪುರ ಮಾತನಾಡಿ, “ಮೇ ಸಾಹಿತ್ಯ ಮೇಳವು ಜನರಲ್ಲಿ ಜಾಗೃತಿ ಮೂಡಿಸುವ, ಬಂಧುತ್ವ ಬೆಸೆಯುವ ಮತ್ತು ಜನ, ನಾಡಿನ ಹಿತ ರಕ್ಷಿಸಲು ಕೆಲಸ ಮಾಡುತ್ತಿದೆ. ಇಡೀ ಜಿಲ್ಲೆ ಅದರಲ್ಲೂ ವಿಶೇಷವಾಗಿ ಗಂಗಾವತಿ ಭಾಗವನ್ನು ಅಂಜನಾದ್ರಿ ಬೆಟ್ಟದ ನೆಪದಲ್ಲಿ ಕೋಮುವಾದಿಕರಣ ಮಾಡುವ ಕಾರ್ಯವನ್ನು ವಿಭಜಿಸುವ ಶಕ್ತಿಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಹೀಗಾಗಿ ಇಂಥ ವಿಭಜನಾ ಶಕ್ತಿಗಳಿಗೆ ಸರಿಯಾದ ಉತ್ತರ ಕೊಡುವ ಕೆಲಸವನ್ನು ಮೇ ಸಾಹಿತ್ಯ ಮೇಳ ಸಮರ್ಥವಾಗಿ ಮಾಡುತ್ತದೆ. ಆದ್ದರಿಂದ 10 ನೇ ಮೇ ಸಾಹಿತ್ಯ ಮೇಳ ಗಂಗಾವತಿಯಲ್ಲಾದರೆ ಉತ್ತಮ. ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವ ಜವಾಬ್ದಾರಿ ನಮಗಿರಲಿ” ಎಂದರು.

Advertisements

ಈ ಮೊದಲ ಸಭೆಯಲ್ಲಿಯೇ ಸ್ವಯಂ ಪ್ರೇರಿತರಾಗಿ ಡಾ. ಸಿದ್ದಲಿಂಗಪ್ಪ ಕೊಟ್ನಿಕಲ್, ಡಾ. ಬಸವರಾಜ ಪೂಜಾರ, ಶೀಲಾ ಹಲಕುರ್ಕಿ, ಡಾ ವಿ ಬಿ ರಡ್ಡೇರ ಅವರು ತಾವು ಕನಿಷ್ಟ 6ರಿಂದ 8 ಜನಗಳಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಜತೆಗೆ ನಮ್ಮಲ್ಲಿ ಉಳಿಯುವವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ, ಮೇಳಕ್ಕಾಗಿ ವಹಿಸುವ ಎಲ್ಲ ತರಹದ ಜವಾಬ್ದಾರಿಯನ್ನೂ ವಹಿಸುವುದಾಗಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಲ್ಲಮ ಪ್ರಭು ಬೆಟ್ಟದೂರ ಮಾತನಾಡಿ, “ಈ ಸಂದಿಗ್ಧ ಸಂದರ್ಭದಲ್ಲಿ ನಾವೆಲ್ಲ ಸೇರಿ ಈ ಮೇ ಸಾಹಿತ್ಯ ಮೇಳವನ್ನು ಸಂಘಟಿಸೋಣ. ಕೋಮುವಾದಿ ರಾಜಕಾರಣ ವ್ಯಾಪಕವಾಗಿ ಬೆಳೆಯುತ್ತಿರುವಾಗ ಸೌಹಾರ್ದ ಬೆಸೆಯುವ ಇಂಥ ಮೇಳವು ಕೊಪ್ಪಳ ಜಿಲ್ಲೆಗೆ ಅಗತ್ಯವಾಗಿದೆ. ನಾನು ಮೇ ಸಾಹಿತ್ಯ ಮೇಳಕ್ಕೆ ಒಂದು ಸಾವಿರ ರೊಟ್ಪಿ ಕೊಡುವೆ. ಎಲ್ಲರೂ ಸ್ವಯಂ ಪ್ರೇರಿತವಾಗಿ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸೋಣ” ಎಂದರು.

ಬಿ ಶ್ರೀನಿವಾಸ 10ನೇ ಮೇ ಸಾಹಿತ್ಯ ಮೇಳ ಒಂದು ಮೈಲುಗಲ್ಲಾಗುವಂತೆ ಸಂಘಟಿಸಬೇಕಿದೆ ಎಂದರು. ಅನಿಲ ಹೊಸಮನಿ ಅವರು ಇದು ಜನರಿಗಾಗಿ, ಜನರೇ ನಿಂತು ಸಂಘಟಿಸುವ ರಾಜ್ಯದ ಏಕೈಕ ಸಾಹಿತ್ಯ ಮೇಳ ಇದಾಗಿದೆ ಎಂದರು.

ಡಾ. ಬಸವರಾಜ ಪೂಜಾರ ಅವರು ಎರಡು ದಿನದ ಕಾಳುಪಲ್ಲೆಗೆ ಬೇಕಾದ ಕಾಳು, ಮಹಾಂತೇಶ ಮಲ್ಲನಗೌಡರ ಎರಡು ದಿನಗಳಿಗೆ ಬೇಕಾದ ಕಾಯಿಪಲ್ಲೆ, ಅಜಮೀರ ನಂದಾಪುರ ಅವರು ಮೇ ಸಾಹಿತ್ಯ ಮೇಳಕ್ಕೆ ಬೇಕಾಗುವಷ್ಟು ಅಕ್ಕಿ, ಅಶೋಕ ಕಟ್ಟಿಮನಿ ಅವರು ಸಿಹಿ ವ್ಯವಸ್ಥೆ, ರತ್ನಾಕರ ಅವರು ನಾನ್ ವೆಜ್ ವ್ಯವಸ್ಥೆಗಾಗಿ ಬೇಕಾದ ಜವಾಬ್ದಾರಿ ವಹಿಸಿಕೊಂಡರು. ಮಹೇಶ ಬಳ್ಳಾರಿ ಮತ್ತು ರಮೇಶ ಬನ್ನಿಕೊಪ್ಪ ಸೇರಿ 25 ಜನಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುದಾಗಿ ಹೇಳಿದರು. ರವಿತೇಜ ಅಬ್ಬಿಗೇರಿ, ಮಹಾಂತೇಶ, ಡಾ ವಿ ಬಿ ರಡ್ಡೇರ, ಅಶೋಕ ಬರಗುಂಡಿ ಅವರು ಹೊಣೆಹೊತ್ತು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

ಮೇ ಸಾಹಿತ್ಯ ಮೇಳವೇ ಹೀಗೆ ಜನಗಳ ಸಹಭಾಗಿತ್ವದಲ್ಲಿ ನಡೆಯುವಂಥದ್ದು. ಯುವಜನ, ದುಡಿಯುವ ವರ್ಗ, ಮಹಿಳೆಯರನ್ನು ಒಳಗೊಳ್ಳಬೇಕು. ಮೇ ಸಾಹಿತ್ಯ ಮೇಳದ ಸಿದ್ಧಾಂತವಾದ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಎಲ್ಲವೂ ಇರಬೇಕು. ತಾಲೂಕು ಮಟ್ಟದಲ್ಲಿ ಇಂಥ ಸಭೆಗಳಾಗಬೇಕು ಎಂಬುದೂ ಸಭೆಯ ಒಟ್ಟು ಚರ್ಚೆಯ ಅಭಿಪ್ರಾಯವಾಗಿತ್ತು. ಉಳಿದದ್ದನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತಗೆದುಕೊಳ್ಳಲು ತೀರ್ಮಾನಿಸಿತು. ಈ ಸಭೆ ನಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿದ ಶಾಮಣ್ಣ ಅವರಿಗೆ ಸಭೆ ಶರಣು ಹೇಳಿತು.

ಮುಂದಿನ ಸಭೆ 25 ರಂದು ನಡೆಸಲು ಸಭೆ ತೀರ್ಮಾನ ಮಾಡಿತು. ಆ ಸಭೆಯಲ್ಲಿ ಸ್ಥಳ ಗುರುತಿಸುವುದು, 10ನೇ ಮೇ ಸಾಹಿತ್ಯ ಮೇಳ ಮುಖ್ಯ ಉದ್ದೇಶ ಏನಾಗಿರಬೇಕು, ಉದ್ಘಾಟನೆ ಸ್ವರೂಪ, ಮುಖ್ಯ ಭಾಷಣಾಕಾರರಾಗಿ ಯಾರನ್ನು ಕರೆಯಬೇಕು, ವಸತಿ ವ್ಯವಸ್ಥೆಗಾಗಿ ಏನೇನು ಸಾಧ್ಯತೆಗಳಿವೆ, ಆ ಎಲ್ಲ ಸಂಗತಿಗಳು ಮುಂದಿನ ಸಭೆಯ ಅಜೆಂಡಾ ಆಗಿರಲಿವೆ.

“ಮುಂದಿನ ಸಭೆಗೆ ನಾವು ಇನ್ನಷ್ಟು ವಿಸ್ತೃತವಾಗಿ ಸೇರೋಣ. ಮೇ ಸಾಹಿತ್ಯ ಮೇಳದ ಯಶಸ್ವಿಗಾಗಿ ಇಂದಿನಿಂದಲೇ ಕಾರ್ಯ ನಿರ್ವಹಿಸೋಣ. ಮೇ ಸಾಹಿತ್ಯ ಮೇಳವನ್ನು ಜನಗಳಿಗೆ ತಲುಪಿಸುವ ಕಾರ್ಯ ಮಾಡೋಣ” ಎಂದು ಸಭೆ ನಿರ್ಧರಿಸಿತು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಫೆ. 13ರಿಂದ ವಿಧಾನಸೌಧ ಚಲೋ; ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಸಭೆಯಲ್ಲಿ ಸಾಹಿತಿ ಬಸವರಾಜ ಸೂಳಿಬಾವಿ, ಡಾ ಪ್ರವೀಣ ಪೊಲೀಸ್ ಪಾಟೀಲ್, ವಿಮಲಾ ಇನಾಮದಾರ, ಡಾ. ಸಂಗಮೇಶ ತಮ್ಮನಗೌಡರ, ವೀರಣ್ಣ ಹುರಕಡ್ಲಿ, ಕುರುವತ್ತಿಗೌಡ ಪೊಲೀಸ್‌  ಪಾಟೀಲ್, ವಿದ್ಯಾ ನಲವಾರ, ಮೆಹಬೂಬ ಮಕಾನದಾರ, ಚನ್ನಪ್ಪ ಸಂಗಮೇಶ್ವರ, ಶಂಕರ ಸರಳ, ಶೀಲಾ ಹಲಕುರ್ಕಿ, ಮೆಹಬೂಬ ಮಠದ, ಗವಿಸಿದ್ಧಪ್ಪ ಬಾರಕೇರ, ಶಿವಾನಂದ ಎಸ್ ಹೊಸಮನಿ ಸೇರಿದಂತೆ ಬಹುತೇಕರು ಇದ್ದರು.

ವರದಿ: ಮುತ್ತು ಬಿಳಿಯಲಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X