ನೋಟು ಅಮಾನ್ಯೀಕರಣದ ಇಷ್ಟು ವರ್ಷಗಳ ನಂತರ ಪೇಟಿಎಂ ಮೂಲಕ ಹಣ ವಂಚನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿ ಎಂದರೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಬುಧವಾರ ಲೋಕಸಭೆಯಲ್ಲಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ತನಿಖಾ ಅನೇಕ ದಾಳಿಗಳಲ್ಲಿ ವಶಪಡಿಸಿಕೊಳ್ಳುತ್ತಿರುವ ನಗದು ಮೂಲದ ಬಗ್ಗೆಯೂ ಅವರು ಸರ್ಕಾರವನ್ನು ಸುಪ್ರಿಯಾ ಪ್ರಶ್ನಿಸಿದರು.
“ನೋಟು ರದ್ದತಿ ಸಂಭವಿಸಿದಾಗ, ಪೇಟಿಎಂನ ದೊಡ್ಡ ಜಾಹೀರಾತುಗಳನ್ನು ಪ್ರದರ್ಶಿಸಲಾಯಿತು. ಇಂದು ಪೇಟಿಎಂ ವಿರುದ್ಧ ಗರಿಷ್ಠ ಹೋರಾಟ ನಡೆಸುತ್ತಿರುವವರು ಯಾರು? ಪೇಟಿಎಂ ಮೂಲಕ ಗರಿಷ್ಠ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಸರ್ಕಾರವೇ ಹೇಳುತ್ತಿದೆ. ಇವೆಲ್ಲ ನಡೆಯುವಾಗ ಸರ್ಕಾರ ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿತ್ತು. ಹಾಗಾದರೆ ನೋಟು ರದ್ದತಿ ಮಾಡಿರುವುದು ತಪ್ಪೇ ಅಥವಾ ಪೇಟಿಎಂನ ತಪ್ಪೇ ಅಥವಾ ತಂತ್ರಜ್ಞಾನ ತಪ್ಪಾಗಿದೆಯೆ? ಎಂದು ಕೆಂದ್ರವನ್ನು ಸುಪ್ರಿಯಾ ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
“ಅಷ್ಟೊಂದು ನಗದು ವಸೂಲಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಲಾವಣೆಯಲ್ಲಿರುವ ಈ ನಗದು ಎಲ್ಲಿಂದ ಬಂತು? ನೋಟು ಅಮಾನ್ಯೀಕರಣ ಮಾಡಿದ್ದರೆ, ನೀವು ವಶಪಡಿಸಿಕೊಂಡ ಹಣ ಎಲ್ಲಿಂದ ಬಂತು? ಇವೆಲ್ಲವುಗಳಿಗೂ ಸರ್ಕಾರವೇ ಉತ್ತರಿಸಬೇಕಾಗಿದೆ” ಎಂದು ಸುಳೆ ಹೇಳಿದರು.
ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಆರ್‌ಬಿಐ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ. ಫೆ.29ರ ನಂತರ ಪೇಟಿಎಂ ಪೇಮೆಂಟ್ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಆರ್‌ಬಿಐ ನಿಷೇಧಿಸಿದ ನಂತರ ಪೇಟಿಎಂ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸದ ಜಾರಿ ನಿರ್ದೇಶನಾಲಯದ ವಿಶ್ವಾಸಾರ್ಹತೆಯ ಬಗ್ಗೆ ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ.