ನೋಟು ಅಮಾನ್ಯೀಕರಣ ಯಶಸ್ವಿಯಾಗಿದ್ದರೆ ಅಕ್ರಮ ಹಣ ವರ್ಗಾವಣೆ ಇನ್ನು ಏಕೆ ಚಾಲ್ತಿಯಲ್ಲಿದೆ? ಸುಪ್ರಿಯಾ ಸುಳೆ ಪ್ರಶ್ನೆ

Date:

ನೋಟು ಅಮಾನ್ಯೀಕರಣದ ಇಷ್ಟು ವರ್ಷಗಳ ನಂತರ ಪೇಟಿಎಂ ಮೂಲಕ ಹಣ ವಂಚನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿ ಎಂದರೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಬುಧವಾರ ಲೋಕಸಭೆಯಲ್ಲಿ ಸರಕಾರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರ ತನಿಖಾ ಅನೇಕ ದಾಳಿಗಳಲ್ಲಿ ವಶಪಡಿಸಿಕೊಳ್ಳುತ್ತಿರುವ ನಗದು ಮೂಲದ ಬಗ್ಗೆಯೂ ಅವರು ಸರ್ಕಾರವನ್ನು ಸುಪ್ರಿಯಾ ಪ್ರಶ್ನಿಸಿದರು.

“ನೋಟು ರದ್ದತಿ ಸಂಭವಿಸಿದಾಗ, ಪೇಟಿಎಂನ ದೊಡ್ಡ ಜಾಹೀರಾತುಗಳನ್ನು ಪ್ರದರ್ಶಿಸಲಾಯಿತು. ಇಂದು ಪೇಟಿಎಂ ವಿರುದ್ಧ ಗರಿಷ್ಠ ಹೋರಾಟ ನಡೆಸುತ್ತಿರುವವರು ಯಾರು? ಪೇಟಿಎಂ ಮೂಲಕ ಗರಿಷ್ಠ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಸರ್ಕಾರವೇ ಹೇಳುತ್ತಿದೆ. ಇವೆಲ್ಲ ನಡೆಯುವಾಗ ಸರ್ಕಾರ ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿತ್ತು. ಹಾಗಾದರೆ ನೋಟು ರದ್ದತಿ ಮಾಡಿರುವುದು ತಪ್ಪೇ ಅಥವಾ ಪೇಟಿಎಂನ ತಪ್ಪೇ ಅಥವಾ ತಂತ್ರಜ್ಞಾನ ತಪ್ಪಾಗಿದೆಯೆ? ಎಂದು ಕೆಂದ್ರವನ್ನು ಸುಪ್ರಿಯಾ ತರಾಟೆಗೆ ತೆಗೆದುಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ

“ಅಷ್ಟೊಂದು ನಗದು ವಸೂಲಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಲಾವಣೆಯಲ್ಲಿರುವ ಈ ನಗದು ಎಲ್ಲಿಂದ ಬಂತು? ನೋಟು ಅಮಾನ್ಯೀಕರಣ ಮಾಡಿದ್ದರೆ, ನೀವು ವಶಪಡಿಸಿಕೊಂಡ ಹಣ ಎಲ್ಲಿಂದ ಬಂತು? ಇವೆಲ್ಲವುಗಳಿಗೂ ಸರ್ಕಾರವೇ ಉತ್ತರಿಸಬೇಕಾಗಿದೆ” ಎಂದು ಸುಳೆ ಹೇಳಿದರು.

ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಆರ್‌ಬಿಐ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಿದೆ. ಫೆ.29ರ ನಂತರ ಪೇಟಿಎಂ ಪೇಮೆಂಟ್‌ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ಆರ್‌ಬಿಐ ನಿಷೇಧಿಸಿದ ನಂತರ ಪೇಟಿಎಂ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸದ ಜಾರಿ ನಿರ್ದೇಶನಾಲಯದ ವಿಶ್ವಾಸಾರ್ಹತೆಯ ಬಗ್ಗೆ ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೆಎನ್‌ಯು ವಿವಿಯಲ್ಲಿ ಎಡ ಪಂಥೀಯ – ಎಬಿವಿಪಿ ವಿದ್ಯಾರ್ಥಿಗಳ ನಡುವೆ ಗಲಭೆ: ಹಲವರಿಗೆ ಗಾಯ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ಬೆಂಬಲಿತ...

ನ್ಯೂಸ್‌ ಚಾನೆಲ್‌ಗಳಲ್ಲಿ ಕೋಮು ದ್ವೇಷ ಪ್ರಸಾರ: ಟೈಮ್ಸ್‌ ನೌ, ನ್ಯೂಸ್‌18ಗೆ ದಂಡ; ಆಜ್ ತಕ್‌ಗೆ ಎಚ್ಚರಿಕೆ

ದ್ವೇಷ ಮತ್ತು ಕೋಮು ಸೌಹಾರ್ದತೆ ಕದಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಟೈಮ್ಸ್‌...

ಪೆಟ್ರೋಲಿಯಂ ಮೇಲಿನ ವಿಂಡ್‌ಫಾಲ್ ತೆರಿಗೆ ಹೆಚ್ಚಳ

ಶುಕ್ರವಾರದಿಂದ ಜಾರಿಗೆ ಬರುವಂತೆ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್...

ಗುಜರಾತ್‌ | 2 ವರ್ಷದಿಂದ 3.8 ಲಕ್ಷ ಅರ್ಹ ಶಿಕ್ಷಕರು ನಿರುದ್ಯೋಗಿಗಳಾಗಿದ್ದಾರೆ

ಗುಜರಾತ್‌ನಲ್ಲಿ 2.75 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಿದ್ದಾರೆ....