ಮಹಾರಾಷ್ಟ್ರ | ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನೀಡಿದ ಚುನಾವಣಾ ಆಯೋಗ

Date:

ಮಹಾರಾಷ್ಟ್ರದ ‘ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ’ ಎಂದು ನಿನ್ನೆ ಚುನಾವಣಾ ಆಯೋಗವು ತಿಳಿಸಿದ ಬಳಿಕ ಶರದ್ ಪವಾರ್ ಬಣಕ್ಕೆ ಚುನಾವಣಾ ಆಯೋಗವು ಹೊಸ ಹೆಸರು ನೀಡಿರುವುದಾಗಿ ವರದಿಯಾಗಿದೆ.

ನೂತನ ಹೆಸರಾಗಿ ‘ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್’ ಎಂದು ಶರದ್ ಪವಾರ್ ಅವರ ಬಣಕ್ಕೆ ನೀಡಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ತಾವೇ ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರನ್ನು ಕಳೆದುಕೊಂಡಿದ್ದ ಹಿರಿಯ ರಾಜಕಾರಣಿ ಶರದ್ ಪವಾರ್, ಈಗ ‘ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರತ್‌ಚಂದ್ರ ಪವಾರ್’ ಎಂಬ ಹೆಸರಿನ ಪಕ್ಷಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಚುನಾವಣಾ ಆಯೋಗವು ನಿನ್ನೆ ಶರದ್ ಪವಾರ್ ಅವರನ್ನು ಕೇಳಿದ್ದು, ಆ ಹೆಸರುಗಳನ್ನು ಬುಧವಾರ ಮಧ್ಯಾಹ್ನ 3 ಗಂಟೆಯೊಳಗೆ ಆಯೋಗಕ್ಕೆ ತಿಳಿಸಬೇಕು ಎಂದು ಸೂಚಿಸಿತ್ತು.

ಚುನಾವಣಾ ಆಯೋಗವು, ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರದ್‌ ಚಂದ್ರ ಪವಾರ್, ‘ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರದ್ ರಾವ್ ಪವಾರ್, ‘ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರದ್ ಪವಾರ್’ ಎಂಬ ಮೂರು ಹೆಸರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ತಿಳಿಸಿತ್ತು. ಈ ಮೂರು ಹೆಸರುಗಳ ಪೈಕಿ ‘ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಎಂದು ವರದಿಯಾಗಿದೆ.

ಮತ್ತೊಂದೆಡೆ, ಶರದ್ ಪವಾರ್ ಉದಯ ಸೂರ್ಯನ ಚಿಹ್ನೆಯನ್ನು ಚುನಾವಣಾ ಚಿಹ್ನೆಯಾಗಿ ಪರಿಗಣಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಆದರೆ ಅದು ಇನ್ನೂ ಅಧಿಕೃತವಾಗಿಲ್ಲ ಎಂದು ತಿಳಿದುಬಂದಿದೆ.

ಎನ್‌ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶರದ್‌ ಪವಾರ್‌ ಅವರು ತಾವೇ ಕಟ್ಟಿ ಬೆಳೆಸಿದ್ದ ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರನ್ನು ಕಳೆದುಕೊಂಡಿದ್ದರು.

ಇದನ್ನು ಓದಿದ್ದೀರಾ? ‘ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ’ ಎಂದ ಚುನಾವಣಾ ಆಯೋಗ: ‘ಗಡಿಯಾರ’ ಕಳಕೊಂಡ ಶರದ್ ಪವಾರ್

2023ರ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ನೇತೃತ್ವದ ಒಂದು ವಿಭಾಗವು ಆಗಿನ ಪಕ್ಷದ ವರಿಷ್ಠ ಶರದ್ ಪವಾರ್ ಜೊತೆಗಿನ ಸಂಬಂಧ ಮುರಿದು ಬಿಜೆಪಿ-ಶಿವಸೇನಾ (ಏಕನಾಥ್ ಶಿಂಧೆ) ಮೈತ್ರಿಯೊಂದಿಗೆ ಕೈಜೋಡಿಸಿದ ನಂತರ ಎನ್‌ಸಿಪಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದಿಡೀರ್ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಗೌರವದೊಂದಿಗೆ ನೆರವೇರಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅಂತಿಮ ಸಂಸ್ಕಾರ: ಸಿಎಂ ಭಾಗಿ

ನಿನ್ನೆ(ಫೆ.25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ...

ಜೈಲು ಸೇರಿದ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಲವ್ ಜಿಹಾದ್​ ಪ್ರಕರಣದಲ್ಲಿ ​ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ...

ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೀತಿದೆ ಎಂದ ಬಿಎಸ್‌ವೈ; ಬಾಸ್ ಈಸ್ ಆಲ್ವೇಸ್ ರೈಟ್ ಎಂದ ಸಿ ಟಿ ರವಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿಲ್ಲ. ಈ ಬಗ್ಗೆ ಈಗಾಗಲೇ...

ಶೇಖ್ ಶಹಜಹಾನ್ ಬಂಧಿಸಿ ಎಂದ ಹೈಕೋರ್ಟ್; ವಾರದಲ್ಲಿ ಬಂಧಿಸುತ್ತೇವೆ ಎಂದ ಟಿಎಂಸಿ

ಸಂದೇಶ್ ಖಾಲಿಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ತೃಣಮೂಲ...