ಚಿತ್ರದುರ್ಗ | ವಿದ್ಯಾರ್ಥಿಗಳಿಂದ ವಾರದ ಸಂತೆ, ಚೌಕಾಸಿ ಮಾಡಿ ಖರೀದಿಸಿದ ಗ್ರಾಹಕರು

Date:

Advertisements

ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ (ಫೆಬ್ರವರಿ 7) ಎಸ್‌ಆರ್‌ಎಸ್‌ ಹೆರಿಟೇಜ್‌ ಶಾಲೆಯ ಪುಟಾಣಿಗಳು ‘ವಾರದ ಸಂತೆ ನಮ್ಮ ಜೊತೆ’ ಎನ್ನುವ ವಿಶೇಷ ತರಕಾರಿ ಸಂತೆ ನಡೆಸಿದರು.

ನಗರಸಭೆ ಪೌರಾಯುಕ್ತೆ ಎಂ ರೇಣುಕಾ ತರಕಾರಿ ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಶಾಲೆಯ 5ನೇ ತರಗತಿಯ 150 ಮಂದಿ ವಿದ್ಯಾರ್ಥಿಗಳು ಹಿರಿಯರು ನಾಚುವಂತೆ ಸಂತೆ ನಡೆಸಿದರು.

ಮಾತ್ರವಲ್ಲದೆ, ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಹೀರೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಬೀನ್ಸ್‌, ಆಲೂಗಡ್ಡೆ, ಸೌತೆಕಾಯಿ, ಎಲೆಕೋಸು, ಮೂಲಂಗಿ, ಬಟಾಣಿ, ಜವಳಿಕಾಯಿ, ಮೆಣಸಿನಕಾಯಿ, ಸೊಪ್ಪು- ಮೆಂತ್ಯ, ಪುದೀನ, ಕೊತ್ತುಂಬರಿ, ಸಬ್ಸಿಗೆ, ಅರಿವೆ, ಕರಿಬೇವು, ಪಾಲಕ್‌, ನಿಂಬೆಹಣ್ಣು ಹೀಗೆ ಬಗೆ ಬಗೆಯ ಮತ್ತು ತಾಜಾ ತರಕಾರಿಗಳನ್ನು ಮಾರಾಟ ಮಾಡಿದರು.

Advertisements

ಈ ಮೇಳದಲ್ಲಿ ಪೋಷಕರು ಶಿಕ್ಷಕರು, ಸಾರ್ವಜನಿಕರು, ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ತರಕಾರಿಗಳನ್ನು ವಿದ್ಯಾರ್ಥಿಗಳೊಂದಿಗೆ ಚೌಕಾಸಿ ಮಾಡಿ ಖರೀದಿಸಿದರು.

ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಉಪಚುನಾವಣೆ; ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟ

ಎಸ್‌ಆರ್‌ಎಸ್‌ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಬಿ ಎ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ ಎಲ್‌ ಅಮೋಘ, ಸಂಸ್ಥೆ ಆಡಳಿತಾಧಿಕಾರಿ ಡಾ ಟಿ ಎಸ್‌ ರವಿ, ಶೈಕ್ಷಣಿಕ ಸಂಯೋಜಕ ಡಿ ಎಂ ಜಗದೀಶ್‌, ಸಹ ಪಠ್ಯೇತರ ವಿಭಾಗ ಸಂಯೋಜಕ ಸುನೀಲ್‌ ಭಟ್‌, ಪ್ರಾಂಶುಪಾಲ ಎಂ ಎಸ್‌ ಪ್ರಭಾಕರ್‌ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X