ತೀವ್ರ ಹಣಾಹಣಿ ಮೂಡಿಸಿದ್ದ ಅಂಡರ್ 19 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ಪಾಕ್ ನೀಡಿದ 180 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 49.1 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಜಯಗಳಿಸಿತು.
ಆಸ್ಟ್ರೇಲಿಯಾ ಪರ ಹ್ಯಾರಿ ಡಿಕ್ಸನ್ 50, ಒಲಿವರ್ ಪಿಯೇಕ್ 49 ಹಾಗೂ ಕೊನೆಯಲ್ಲಿ ರಾಫ್ ಮಕ್ ಮಿಲನ್ 19 ರನ್ ಗಳಿಸಿ ಗೆಲುವಿನ ರೂವಾರಿಗಳಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 48.5 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಗಿತ್ತು. ಅಜಾನ್ ಅವೈಸ್ 52, ಅರ್ಫಾತ್ ಮಿನಾಸ್ 52 ರನ್ ಗಳಿಸಿದ್ದರು. ಆಸಿಸ್‌ನ ಟಾಮ್ ಸ್ಟಾರ್‌ಕರ್ 24/6 ವಿಕೆಟ್ ಕಬಳಿಸಿ ಪಾಕ್ ಪತನಕ್ಕೆ ಕಾರಣಕ್ಕೆ ಕಾರಣರಾದರು.
ಫೆ.11 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಸಿಗೆ ಬೇಗ ಬಂದಿದೆ; ಜೀವಜಲಕ್ಕೆ ತತ್ವಾರ ತಂದಿದೆ