ಕುರ್ಚಿಗಾಗಿ ಯುಪಿಎ ಸರ್ಕಾರ ಮಂಡಿಸಿದ ತೆರಿಗೆ ವಿಕೇಂದ್ರೀಕರಣಕ್ಕೆ ಜೈ ಎಂದಿದ್ದ ಸಿದ್ದರಾಮಯ್ಯ: ಬಿಜೆಪಿ ಟೀಕೆ

Date:

Advertisements

2013ರಲ್ಲಿ ರಾಹುಲ್ ಗಾಂಧಿಯವರ ಅತ್ಯಾಪ್ತ ರಘುರಾಂ ರಾಜನ್ ನೇತೃತ್ವದಲ್ಲಿ “ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವ ಸಮಿತಿ”ಯ ಶಿಫಾರಸ್ಸಿನ ಮೇಲೆ ಕರ್ನಾಟಕದ ತೆರಿಗೆ ಹಂಚಿಕೆ ಪ್ರಮಾಣವನ್ನು 4.13% ನಿಂದ 3.73% ಕ್ಕೆ ಇಳಿಸಿ, ಕಾಂಗ್ರೆಸ್ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಿತ್ತು ಎಂದು ಬಿಜೆಪಿ ಆರೋಪಿಸಿದೆ.

ಮೋದಿ ಕುರಿತು ಸಿಎಂ ಸಿದ್ದರಾಮಯ್ಯ ಅವರ ಸರಣಿ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡಿರುವ ರಾಜ್ಯ ಬಿಜೆಪಿ, “ಸರಣಿ ಸುಳ್ಳುಗಾರ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಎಷ್ಟೇ ಅನ್ಯಾಯವಾದರೂ, ತಮ್ಮ ಕುರ್ಚಿ ಉಳಿದರೆ ಸಾಕು ಎಂಬ ಸ್ವಾರ್ಥದ ಕಾರಣಕ್ಕೆ ತೆರಿಗೆ ವಿಕೇಂದ್ರೀಕರಣದ ಕುರಿತು ಅಂದಿನ ಯುಪಿಎ ಸರ್ಕಾರ ಮಂಡಿಸಿದ ಒಪ್ಪಂದಕ್ಕೆ “ಜೈ” ಎಂದಿದ್ದರು” ಎಂದು ಟೀಕಿಸಿದೆ.

“ಸಹಜವಾಗಿ ಅಂದು ಯುಪಿಎ ಸರ್ಕಾರ ನೀಡಿದ ವರದಿಯ ಶಿಫಾರಸುಗಳ ಮೇಲೆ ಹಣಕಾಸು ಆಯೋಗ ಕಾರ್ಯನಿರ್ವಹಿಸಿತು. ಕರ್ನಾಟಕಕ್ಕೆ ಯು.ಪಿ.ಎ ಸಮಯದಲ್ಲಾದ ಅನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕದ ತೆರಿಗೆ ಆದಾಯದ ಪಾಲನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಹಾಗೂ ಅನುದಾನವನ್ನು ದ್ವಿಗುಣಗೊಳಿಸುವ ಮೂಲಕ, ಕರ್ನಾಟಕಕ್ಕೆ ನ್ಯಾಯ ಒದಗಿಸಿದೆ” ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದೆ.

Advertisements

“ಸಿಎಂ ಸಿದ್ದರಾಮಯ್ಯರವರೇ ನಿಮಗೆ ನಿಜಕ್ಕೂ ತಾಕತ್ತು, ದಮ್ಮು ಹಾಗೂ ನಿಮ್ಮ ಅಂತರಾಳದಲ್ಲಿ ನಿಜಕ್ಕೂ ಕನ್ನಡಿಗರ ಮೇಲೆ ಮಮತೆಯಿದ್ದರೆ, ಕರ್ನಾಟಕಕ್ಕೆ ಮಹಾದ್ರೋಹ ಮಾಡಿದ ದೆಹಲಿಯ ಎಐಸಿಸಿ ಕಚೇರಿ ಮುಂದೆ ಹಾಗೂ ರಾಹುಲ್ ಗಾಂಧಿಯವರ ಮನೆ ಮುಂದೆ ಪ್ರತಿಭಟಿಸಬೇಕು” ಎಂದು ತಿರುಗೇಟು ನೀಡಿದೆ.

“ನೆಹರು ಗಾಂಧಿ ಕುಟುಂಬದ ಮುಂದೆ ನಡು ಬಗ್ಗಿಸಿ ನಿಲ್ಲುವ ನಿಮಗೆ ಕನ್ನಡಿಗರ ಮೇಲೆ ಮಮತೆಯೂ ಇಲ್ಲ, ಕರ್ನಾಟಕದ ಬಗ್ಗೆ ಒಲವೂ ಇಲ್ಲ, ನಿಮ್ಮದೇನಿದ್ದರೂ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್ ಹೊರತು ಉಳಿದಿದ್ದೆಲ್ಲವೂ ಬರೀ ಬೊಗಳೆ” ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X