- ನೀತಿ ಸಂಹಿತೆ ಹಿನ್ನೆಲೆಯಲ್ಲಿ 13 ಕೋಟಿ ರೂ. ಮೌಲ್ಯದ ಮದ್ಯ ವಶ
- ಜಪ್ತಿಗೆ ಸಂಬಂಧಿಸಿದಂತೆ 1,262 ಪ್ರಕರಣಗಳು ದಾಖಲು
ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ಮಾರ್ಚ್ 29ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೊಳಿಸಲಾಗಿದೆ. ಅಂದಿನಿಂದ ಕರ್ನಾಟಕದಲ್ಲಿ ನಗದು ಸೇರಿದಂತೆ ಸುಮಾರು 150 ಕೋಟಿ ರೂ. ಮೌಲ್ಯದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.
61 ಕೋಟಿ ನಗದು, 33 ಕೋಟಿ ಮೌಲ್ಯದ ಮದ್ಯ, 24 ಕೋಟಿ ಬೆಲೆಬಾಳುವ ಲೋಹಗಳು, 31 ಕೋಟಿ ರೂ. ಬೆಲೆ ಬಾಳುವ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕಡೂರು ಜೆಡಿಎಸ್ ಅಭ್ಯರ್ಥಿ ವೈ ಎಸ್ ವಿ ದತ್ತಗೆ ಎದುರಾದ ಬಂಧನ ಭೀತಿ
ಜಪ್ತಿಗೆ ಸಂಬಂಧಿಸಿದಂತೆ 1,262 ಪ್ರಕರಣಗಳನ್ನು ದಾಖಲಿಸಲಾಗಿದೆ. ಮೇ 10ರ ವಿಧಾನಸಭಾ ಚುನಾವಣೆ ಘೋಷಣೆಗೆ ಮುಂಚಿತವಾಗಿ (ಮಾರ್ಚ್ 9 ರಿಂದ ಮಾರ್ಚ್ 27ರ ಅವಧಿ) 58 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.