ಧಾರವಾಡ | ನೂತನ ನಗರ ಸಾರಿಗೆ ಬಸ್ ನಿಲ್ದಾಣ ಕಾಮಗಾರಿ; ತಾತ್ಕಾಲಿಕ ಮಾರ್ಗ ಬದಲಾವಣೆ

Date:

Advertisements

ಧಾರವಾಡದ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಪ್ರಯುಕ್ತ ಫೆಬ್ರವರಿ 14, (ಬುಧವಾರ)ರಿಂದ ಸಿಬಿಟಯಿಂದ ಸಂಚರಿಸುವ ನಗರ ಸಾರಿಗೆ ಬಸ್ಸುಗಳನ್ನು ತಾತ್ಕಾಲಿಕವಾಗ ಎಲ್.ಇ.ಎ ಕ್ಯಾಂಟೀನ್ ಹಾಗೂ ಕಿಟೆಲ್ ಕಾಲೇಜು ಹಿಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ನಗರದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಈಗ ಇರುವ ಸಿಬಿಟಿ ಸ್ಥಳದಲ್ಲಿ ಸುಸಜ್ಜಿತ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಸಿಬಿಟಿಯನ್ನು ತೆರವುಗೊಳಿಸಬೇಕಾಗಿರುತ್ತದೆ. ಆದ್ದರಿಂದ ಸಿಬಿಟಿಯಿಂದ ಬಸ್ಸುಗಳ ಸಂಚಾರವನ್ನು ಬುಧವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಸಾರಿಗೆ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಸ್ಥಳ ಸಮೀಕ್ಷೆ ಮಾಡಿ ತಾತ್ಕಾಲಿಕ ಸ್ಥಳಗಳನ್ನು ಗುರುತಿಸಲಾಗಿದೆ. ಅದರಂತೆ ಪ್ರಸ್ತುತ ಸಿಬಿಟಿಯಿಂದ ಸಂಚರಿಸುವ ಬಸ್ಸುಗಳನ್ನು ಬುಧವಾರ ಬೆಳಿಗ್ಗೆಯಿಂದ ತಾತ್ಕಾಲಿಕವಾಗಿ ಎಲ್.ಇ.ಎ ಕ್ಯಾಂಟೀನ್ ಹತ್ತಿರ ಹಾಗೂ ಕಿಟೆಲ್ ಕಾಲೇಜು ಹಿಂಭಾಗದ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.

Advertisements

WhatsApp Image 2024 02 12 at 07.06.46

ಎಲ್.ಇ.ಎ. ಕ್ಯಾಂಟೀನ್‌ನಿಂದ ಹೊರಡುವ ಬಸ್ ಮಾರ್ಗ

ಎತ್ತಿನ ಗುಡ್ಡ, ಕೃಷಿ ವಿಶ್ವವಿದ್ಯಾಲಯ, ಪಾವಟೆ ನಗರ, ಬನಶ್ರೀ ನಗರ, ಕೆಂಗೇರಿ ಆಂಜನೇಯ ನಗರ, ಗುರು ನಗರ, ನ್ಯೂ ಬಾಯ್ಸ್ ಹಾಸ್ಟೆಲ್, ಚೈತನ್ಯ ನಗರ, ವಿನಾಯಕ ನಗರ, ಸಾಯಿ ನಗರ, ಶಿವಗಿರಿ, ಸಂಪಿಗೆ ನಗರ, ರಾಧಾಕೃಷ್ಣ ನಗರ, ಜೆ.ಎಸ್.ಎಸ್. ಸ್ಕೂಲ್, ಬೇಂದ್ರೆ ನಗರ, ಹೈಕೋರ್ಟ್, ಕಾಯಕ ನಗರ, ಶಿರಡಿ ನಗರ ಹಾಗೂ ಐ.ಐ.ಟಿ.

ಕಿಟೆಲ್ ಕಾಲೇಜು ಹಿಂಭಾಗದಿಂದ ಹೊರಡುವ ಬಸ್ ಮಾರ್ಗಗಳು

ಧಾರವಾಡ ರೈಲು ನಿಲ್ದಾಣ, ಜೋಗ ಯಲ್ಲಾಪುರ, ರಾಜೀವ ಗಾಂಧಿ ನಗರ, ಸಂಗೊಳ್ಳಿ ರಾಯಣ್ಣ ನಗರ, ಮಂಜುನಾಥ ಕಾಲೋನಿ, ಚಿನ್ಮಯ ಕಾಲೋನಿ, ಲೋಹಿಯ ನಗರ, ತೇಜಸ್ವಿನಿ ನಗರ, ಸರಸ್ವತಿ ಪುರ, ಸೋಮೇಶ್ವರ ದೇವಸ್ಥಾನ, ಶ್ರೀರಾಮನಗರ, ಕಲ್ಯಾಣನಗರ, ಹನುಮಂತ ನಗರ, ಜಾದವ ನಗರ, ಗಾಮನಗಟ್ಟಿ, ನವಲೂರು, ತಡಸಿನ ಕೊಪ್ಪ, ಉದಯಗಿರಿ, ವನಶ್ರೀ ನಗರ.

ಮದಿಹಾಳ, ಮಾಳಾಪುರ ಹಾಗೂ ಮೆಹಬೂಬ ನಗರ ಕಡೆಗೆ ಹೋಗುವ ಬಸ್ಸುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಮಾಸಿಕ ರಿಯಾಯಿತಿ ಪಾಸುಗಳು

ನಗರ ಸಾರಿಗೆ ಹಾಗೂ ಉಪನಗರ ಸಾರಿಗೆ ಬಸ್ಸುಗಳ ಮಾಸಿಕ ರಿಯಾಯಿತಿ ಪಾಸುಗಳ ವಿತರಣೆಗೆ ಧಾರವಾಡ ಹಳೆ ಬಸ್ ನಿಲ್ದಾಣದಲ್ಲಿರುವ ಪಾಸ್ ವಿತರಣೆ ಕೌಂಟರ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸುವಂತೆ ಹು-ಧಾ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X