ಮಧ್ಯ ಪ್ರದೇಶದ ಬೆತುಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಲಂಚ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಬಜರಂಗದಳದ ಕಾರ್ಯಕರ್ತರು ಲಂಚ ನೀಡಲು ನಿರಾಕರಿಸಿದ್ದಕ್ಕೆ ಟೀ ಮಾರಾಟ ಮಾಡುವ ಬುಡಕಟ್ಟು ಸಮುದಾಯದ ಯುವಕನೊಬ್ಬನ ಮೇಲೆ ತಲೆ ಕೆಳಗೆ ಮಾಡಿ ನೇತುಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2023ರ ನವೆಂಬರ್‌ನಲ್ಲಿ ಬುಡಕಟ್ಟು ಸಮುದಾಯದ ಯುವಕ ಅಶೀಸ್ ಪಾತ್ರೆ ಎಂಬುವವರ ಮೇಲೆ ಅಮಾನುಷ ಹಲ್ಲೆ ನಡೆದಿದ್ದು, ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಹಲ್ಲೆಯ ಸಂಪೂರ್ಣ ವಿಡಿಯೋ ಫೆ.13ರಂದು ವೈರಲ್ ಆಗಿದೆ.
ಚಹದ ಅಂಗಡಿ ನಡೆಸಲು ಲಂಚ ಕೇಳಿದ ಬಜರಂಗದಳದ ಇಬ್ಬರು ಕಾರ್ಯಕರ್ತರು ಅಶೀಸ್ ಪಾತ್ರೆ ಎಂಬುವವರನ್ನು ಮೊದಲು ವಿವಸ್ತ್ರಗೊಳಿಸಿ ತಲೆ ಕೆಳಗೆ ಮಾಡಿ ನೇತು ಹಾಕಿದ್ದಾರೆ. ನಂತರ ದೊಣ್ಣೆ ಹಾಗೂ ಬೆಲ್ಟ್ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಅಶೀಶ್ ಪಾತ್ರೆ ತಮ್ಮ ತಂದೆಯೊಂದಿಗೆ ಚಹದ ಅಂಗಡಿ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
ಪೊಲೀಸರಿಗೆ ಪಾತ್ರೆ ಅವರು ದೂರು ನೀಡಿರುವ ಪ್ರಕಾರ ದಾಳಿ ನಡೆಸಿದವರಲ್ಲಿ ಒಬ್ಬಾತ ಬಂದೂಕನ್ನು ಹೊಂದಿದ್ದ ಈ ಹಿಂದೆ ತಾನು ಕೊಲೆ ಮಾಡಿರುವ ಬಗ್ಗೆ ಮತ್ತೊಬ್ಬ ದಾಳಿಕೋರನಿಗೆ ತಿಳಿಸಿದ್ದಾನೆ. ಈ ಕಾರಣದಿಂದ ಸಂತ್ರಸ್ತ ಯಾರಿಗೂ ಹೇಳಿರಲಿಲ್ಲ.
ವಿಡಿಯೋ ವೈರಲ್ ಆದ ನಂತರ ಫೆ.13ರಂದು ತನ್ನ ಅಣ್ಣನಿಗೆ ಸಂತ್ರಸ್ತ ಪಾತ್ರೆ ತಿಳಿಸಿದ್ದಾರೆ. ನಂತರ ವಿಸ್ತಾರವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ಸಂಬಂಧ ಎಸ್ಸಿ/ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಬಜರಂಗದಳದ ನಾಯಕ ಚಂಚಲ್ ರಜಪೂತ್ ಹಾಗೂ ದೂರು ದಾಖಲಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟವಾರಿ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ದಲಿತರು ಮತ್ತು ಬುಡಕಟ್ಟು ಸಮುದಾಯದ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ 2022ರಲ್ಲಿ ದಲಿತರ ಮೇಲೆ 11,384 ದೌರ್ಜನ್ಯ ಪ್ರಕರಣಗಳು ನಡೆದಿದ್ದರೆ, 2023ರಲ್ಲಿ 11,171 ಪ್ರಕರಣಗಳು ವರದಿಯಾಗಿವೆ.