ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡಿದ್ದ ಮಹಿಳೆ, ಈಗ ಅದೇ ಪಾಲಿಕೆಯಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಸದಸ್ಯೆಯಾಗಿದ್ದ ಸವಿತಾ ಕಾಂಬಳೆ ಅವರು ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಪಾಲಿಕೆಯ ಅಧಿಕಾರದ ಗದ್ದುಗೆಯನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಬಿಜೆಪಿಯ ಸವಿತಾ ಕಾಂಬಳೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ, ಮರಾಠ ಸಮುದಾಯದ ಆನಂದ್ ಚವ್ಹಾಣ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕನ್ನಡತಿಗೆ ಮೇಯರ್, ಮರಾಠಿಗನನ್ನು ಉಪಮೇಯರ್ ಆಗಿ ಆಯ್ಕೆ ಮಾಡಿರುವ ಬಿಜೆಪಿ, ಎರಡೂ ಭಾಷಿಗರ ಓಲೈಕೆಯನ್ನೂ ಮಾಡಿದೆ ಎಂದು ಹೇಳಲಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಸಂವಿತಾ ಕಾಂಬಳೆ ಅವರು ಬೆಳಗಾವಿ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದರು. 2021ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಪಾಲಿಕೆ ಸದಸ್ಯಯಾಗಿ ಆಯ್ಕೆಯಾಗಿದ್ದರು. ಈಗ, ಮೇಯರ್ ಆಗಿಯೂ ಅಧಿಕಾರ ಪಡೆದಿದ್ದಾರೆ.
ಈ ಲೇಖನ ಓದಿದ್ದೀರಾ?: ʼನಾವೇ ಮೂಲ ಅಹಿಂದರುʼ ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಬೇಕಿದೆ
2023ರ ಫೆಬ್ರವರಿಯಿಂದ 2024ರ ಫೆಬ್ರವರಿವರೆಗೆ ಬಿಜೆಪಿಯ ಶೋಭಾ ಸೋಮನಾಚೆ ಮೇಯರ್ ಆಗಿದ್ದರು. ರೇಷ್ಮಾ ಪಾಟೀಲ ಉಪಮೇಯರ್ ಆಗಿದ್ದರು. ಅವರ ಅಧಿಕಾರಾವಧಿ ಮುಗಿದ್ದರಿಂದ ಗುರುವಾರ ಮೇಯರ್-ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿದೆ.