ಭಾರತ – ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಆಂಗ್ಲ ಪಡೆ ಭೋಜನ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದೆ. ಚೊಚ್ಚಲ ಪಂದ್ಯದಲ್ಲಿಯೇ ವೇಗಿ ಆಕಾಶ್ ದೀಪ್ ಆಂಗ್ಲ ಪಡೆಯ ಮೊದಲ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿ ನಡುಕ ಹುಟ್ಟಿಸಿದರು.
ಅತಿಥೇಯ ಟಿಂ ಇಂಡಿಯಾ ಬೌಲಿಂಗ್ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, 44 ಓವರ್‌ಗಳಲ್ಲಿ 165 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಆಕಾಶ್ ದೀಪ್ ಬೌಲಿಂಗ್ ದಾಳಿಗೆ ಜಾಕ್ ಕ್ರಾಲಿ(42), ಬೆನ್ ಡೆಕೆಟ್ (11) ಹಾಗೂ ಓಲಿ ಪೋಪ್ (0) ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಜಾನಿ ಬೈರ್‌ಸ್ಟೋ (38) ಅವರನ್ನು ಅಶ್ವಿನ್ ಔಟ್ ಮಾಡಿದರೆ, ನಾಯಕ ಬೆನ್ ಸ್ಟೋಕ್ಸ್(3) ಅವರನ್ನು ರವೀಂದ್ರ ಜಡೇಜಾ ಪೆವಿಲಿಯನ್‌ಗೆ ಅಟ್ಟಿದ್ದರು.
ಪಾನೀಯ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ ಜೋರೂಟ್ (47), ವಿಕೆಟ್ ಕೀಪರ್ ಬೆನ್ ಫೋಕ್ಸ್ (18) ಬ್ಯಾಟಿಂಗ್ ಆಡುತ್ತಿದ್ದಾರೆ.
ಟೀಂ ಇಂಡಿಯಾ ಪರ ಆಕಾಶ್ ದೀಪ್ 38/3, ಆರ್ ಅಶ್ವಿನ್ 34/1 ಹಾಗೂ ರವೀಂದ್ರ ಜಡೇಜಾ 36/1 ವಿಕೆಟ್ ಕಬಳಿಸಿದ್ದಾರೆ.
