ಬೆಂಗಳೂರಿನ ಜನರು ಬಾಡಿಗೆ ದರ ಹೆಚ್ಚಳ, ನೀರಿನ ದರ ಹೆಚ್ಚಳ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ, ಪಾರ್ಕಿಂಗ್ ಮಾಡುವ ಸ್ಥಳದ ದರಗಳೂ ಹೆಚ್ಚಳವಾಗುತ್ತಿವೆ. ಈ ನಡುವೆ, ವಿಜಯ್ ಮಲ್ಯ ಒಡೆತನದ ಯುಬಿ ಸಿಟಿಯ ಶಾಂಪಿಂಗ್ ಮಾಲ್‌ನಲ್ಲಿ ‘ಪ್ರೀಮಿಯಂ ಪಾರ್ಕಿಂಗ್’ಗೆ ಪ್ರತಿ ಗಂಟೆಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ.
ಇಶಾನ್ ವೈಶ್ ಎಂಬುವವರು ಪ್ರೀಮಿಯಂ ಪಾರ್ಕಿಂಗ್ ಶುಲ್ಕ ತೋರಿಸುವ ಸೈನ್ ಬೋರ್ಡ್ ಫೋಟೋ ಹಾಕಿ ‘ಇಂತಹವುಗಳು ಭಾರತದಲ್ಲಿವೆ!! ಮತ್ತು ಇದು ವಿಮಾನ ನಿಲ್ದಾಣವಲ್ಲ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದ್ದು, ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಶುಲ್ಕದ ಸಂಬಂಧ ಟ್ವಿಟರ್ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಕೆಲವರು ದರಗಳನ್ನು ಸಮರ್ಥಿಸಿಕೊಂಡರೆ ಇನ್ನು ಕೆಲವರು ಅದರ ಉದ್ದೇಶವನ್ನು ಪ್ರಶ್ನಿಸುತ್ತಿದ್ದಾರೆ ಹಾಗೂ ಬೆಂಗಳೂರನ್ನು ಇತರ ಜಾಗತಿಕ ನಗರಗಳಿಗೆ ಹೋಲಿಸುತ್ತ ಕಾಮೆಂಟ್ ಮಾಡುತ್ತಿದ್ದಾರೆ.
“ಬೆಂಗಳೂರು ಹತಾಶವಾಗಿ ಸ್ಯಾನ್ ಫ್ರಾನ್ಸಿಸ್ಕೋ ಆಗಲು ಪ್ರಯತ್ನಿಸುತ್ತಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಬೆಂಗಳೂರು ಸಿಂಗಾಪುರ, ಹಾಂಗ್‌ಕಾಂಗ್, ಲಂಡನ್, ದುಬೈ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
‘ಪ್ರೀಮಿಯಂ ಪಾರ್ಕಿಂಗ್’ ಎಂದರೆ ಏನು ಎಂದು ಹಲವರು ಆಶ್ಚರ್ಯಪಟ್ಟರೆ, ಇನ್ನು ಕೆಲವರು ಕಾರಿಗೆ ‘ಸ್ನಾನ’ ಅಥವಾ ‘ಡೈಮಂಡ್ ಫೇಶಿಯಲ್’ ಮಾಡಲು ಇಷ್ಟು ಹಣವಾ ಎಂದು ತಮಾಷೆ ಮಾಡಿದ್ದಾರೆ. ಕಾರಿಗೆ ‘ಬ್ಲೂ ಟಿಕ್’ ಸಿಗುತ್ತದೆಯೇ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
Such things exist in India!! And this ain’t the airport pic.twitter.com/YpWBWFpWjt
— Ishan Vaish (@thatishan) March 5, 2024
”ಪ್ರೀಮಿಯಂ ಪಾರ್ಕಿಂಗ್ ಎಂದರೇನು? ಕಾರ್ ಪಾರ್ಕಿಂಗ್ ಜತೆಗೆ 1 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು ಸ್ಟಾಕ್ ಟಿಪ್ ಅನ್ನು ಪಡೆಯುತ್ತೀರಾ? ಹೌದು ಎಂದಾದರೆ, ವೆಚ್ಚವನ್ನು ಸಮರ್ಥಿಸಲಾಗುತ್ತದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು 2012ರಿಂದಲೂ ಇದೆ ಮತ್ತು ಹೊಸದೇನಲ್ಲ ಎಂದು ಹೇಳಿಕೊಂಡಿದ್ದಾರೆ.
”ದಿನಕ್ಕೆ ಸರಾಸರಿ 10 ಗಂಟೆಗಳಿಗೆ ಗಂಟೆಗೆ ₹1000 ದಿನಕ್ಕೆ ₹10,000 ಆಗುತ್ತದೆ. ಅಂದರೆ, ತಿಂಗಳಿಗೆ ₹3 ಲಕ್ಷ ಅಥವಾ ವರ್ಷಕ್ಕೆ ₹36 ಲಕ್ಷ. ಹೂಡಿಕೆಯ ಮೇಲೆ ನಿರೀಕ್ಷಿತ ಆದಾಯವು ವರ್ಷಕ್ಕೆ 20% ಆಗಿದ್ದರೆ, ಆ ಭೂಮಿಯ ಬೆಲೆ ₹1.8 ಕೋಟಿ ಆಗಿರಬೇಕು” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? 7 ರಾಜ್ಯಗಳ 17 ಸ್ಥಳಗಳಲ್ಲಿ ಎನ್‌ಐಎ ಶೋಧ: ರಾಜ್ಯದ 3 ಜಿಲ್ಲೆಗಳಲ್ಲಿ 3 ಜನ ವಶಕ್ಕೆ
”ಏನು ದೊಡ್ಡ ವಿಷಯ, ಒಂದು ಪೋರ್ಶ್, ಜಗ್ವಾರ್, ಫೆರಾರಿ ಮಾಲೀಕರು ಗಂಟೆಗೆ ₹1000 ಪಾವತಿಸಿದರೆ, ಅವರು ನಿಭಾಯಿಸಬಲ್ಲರು. ಆಲ್ಟೋ, ಮಾರುತಿ 800, ವ್ಯಾಗನಾರ್ ಇತ್ಯಾದಿ ವಾಹನಗಳನ್ನು ಹೊಂದಿರುವವರು ಮನೆಯಲ್ಲಿ ನಿಲ್ಲಿಸಬೇಕು. ಮೆಟ್ರೋ, ಬಸ್‌ನಲ್ಲಿ ಬರಬೇಕು” ಎಂದು ಹೇಳಿದ್ದಾರೆ.
“1 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ಬೆಲೆಯಿರುವ ವಾಹನವನ್ನು ಹೊಂದಿರುವ ವ್ಯಕ್ತಿಗೆ ₹1,000 ಹೆಚ್ಚಿನ ಮೊತ್ತ ಎಂದು ಪರಿಗಣಿಸುವುದಿಲ್ಲ. ಬದಲಿಗೆ, ಅವನು ತನ್ನ ವಾಹನದ ಸುರಕ್ಷತೆ ನೋಡುತ್ತಾನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.