ತುಘಲಕ್ ದರ್ಬಾರ್: ಬೆಂಗಳೂರಿನ ಯುಬಿ ಸಿಟಿ ಮಾಲ್‌ನಲ್ಲಿ ಪ್ರತಿ ಗಂಟೆಗೆ ₹1,000 ಪಾರ್ಕಿಂಗ್ ಶುಲ್ಕ

Date:

ಬೆಂಗಳೂರಿನ ಜನರು ಬಾಡಿಗೆ ದರ ಹೆಚ್ಚಳ, ನೀರಿನ ದರ ಹೆಚ್ಚಳ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದೀಗ, ಪಾರ್ಕಿಂಗ್‌ ಮಾಡುವ ಸ್ಥಳದ ದರಗಳೂ ಹೆಚ್ಚಳವಾಗುತ್ತಿವೆ. ಈ ನಡುವೆ, ವಿಜಯ್‌ ಮಲ್ಯ ಒಡೆತನದ ಯುಬಿ ಸಿಟಿಯ ಶಾಂಪಿಂಗ್‌ ಮಾಲ್‌ನಲ್ಲಿ ‘ಪ್ರೀಮಿಯಂ ಪಾರ್ಕಿಂಗ್’ಗೆ ಪ್ರತಿ ಗಂಟೆಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ.

- Advertisement -

ಇಶಾನ್ ವೈಶ್ ಎಂಬುವವರು ಪ್ರೀಮಿಯಂ ಪಾರ್ಕಿಂಗ್ ಶುಲ್ಕ ತೋರಿಸುವ ಸೈನ್ ಬೋರ್ಡ್ ಫೋಟೋ ಹಾಕಿ ‘ಇಂತಹವುಗಳು ಭಾರತದಲ್ಲಿವೆ!! ಮತ್ತು ಇದು ವಿಮಾನ ನಿಲ್ದಾಣವಲ್ಲ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್‌ ಆಗಿದ್ದು, ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ. ಶುಲ್ಕದ ಸಂಬಂಧ ಟ್ವಿಟರ್​ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕೆಲವರು ದರಗಳನ್ನು ಸಮರ್ಥಿಸಿಕೊಂಡರೆ ಇನ್ನು ಕೆಲವರು ಅದರ ಉದ್ದೇಶವನ್ನು ಪ್ರಶ್ನಿಸುತ್ತಿದ್ದಾರೆ ಹಾಗೂ ಬೆಂಗಳೂರನ್ನು ಇತರ ಜಾಗತಿಕ ನಗರಗಳಿಗೆ ಹೋಲಿಸುತ್ತ ಕಾಮೆಂಟ್‌ ಮಾಡುತ್ತಿದ್ದಾರೆ.

“ಬೆಂಗಳೂರು ಹತಾಶವಾಗಿ ಸ್ಯಾನ್ ಫ್ರಾನ್ಸಿಸ್ಕೋ ಆಗಲು ಪ್ರಯತ್ನಿಸುತ್ತಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಬೆಂಗಳೂರು ಸಿಂಗಾಪುರ, ಹಾಂಗ್‌ಕಾಂಗ್, ಲಂಡನ್, ದುಬೈ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

‘ಪ್ರೀಮಿಯಂ ಪಾರ್ಕಿಂಗ್’ ಎಂದರೆ ಏನು ಎಂದು ಹಲವರು ಆಶ್ಚರ್ಯಪಟ್ಟರೆ, ಇನ್ನು ಕೆಲವರು ಕಾರಿಗೆ ‘ಸ್ನಾನ’ ಅಥವಾ ‘ಡೈಮಂಡ್ ಫೇಶಿಯಲ್’ ಮಾಡಲು ಇಷ್ಟು ಹಣವಾ ಎಂದು ತಮಾಷೆ ಮಾಡಿದ್ದಾರೆ. ಕಾರಿಗೆ ‘ಬ್ಲೂ ಟಿಕ್’ ಸಿಗುತ್ತದೆಯೇ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

”ಪ್ರೀಮಿಯಂ ಪಾರ್ಕಿಂಗ್ ಎಂದರೇನು? ಕಾರ್ ಪಾರ್ಕಿಂಗ್ ಜತೆಗೆ 1 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವು ಸ್ಟಾಕ್ ಟಿಪ್ ಅನ್ನು ಪಡೆಯುತ್ತೀರಾ? ಹೌದು ಎಂದಾದರೆ, ವೆಚ್ಚವನ್ನು ಸಮರ್ಥಿಸಲಾಗುತ್ತದೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು 2012ರಿಂದಲೂ ಇದೆ ಮತ್ತು ಹೊಸದೇನಲ್ಲ ಎಂದು ಹೇಳಿಕೊಂಡಿದ್ದಾರೆ.

”ದಿನಕ್ಕೆ ಸರಾಸರಿ 10 ಗಂಟೆಗಳಿಗೆ ಗಂಟೆಗೆ ₹1000 ದಿನಕ್ಕೆ ₹10,000 ಆಗುತ್ತದೆ. ಅಂದರೆ, ತಿಂಗಳಿಗೆ ₹3 ಲಕ್ಷ ಅಥವಾ ವರ್ಷಕ್ಕೆ ₹36 ಲಕ್ಷ. ಹೂಡಿಕೆಯ ಮೇಲೆ ನಿರೀಕ್ಷಿತ ಆದಾಯವು ವರ್ಷಕ್ಕೆ 20% ಆಗಿದ್ದರೆ, ಆ ಭೂಮಿಯ ಬೆಲೆ ₹1.8 ಕೋಟಿ ಆಗಿರಬೇಕು” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? 7 ರಾಜ್ಯಗಳ 17 ಸ್ಥಳಗಳಲ್ಲಿ ಎನ್‌ಐಎ ಶೋಧ: ರಾಜ್ಯದ 3 ಜಿಲ್ಲೆಗಳಲ್ಲಿ 3 ಜನ ವಶಕ್ಕೆ

”ಏನು ದೊಡ್ಡ ವಿಷಯ, ಒಂದು ಪೋರ್ಶ್, ಜಗ್ವಾರ್, ಫೆರಾರಿ ಮಾಲೀಕರು ಗಂಟೆಗೆ ₹1000 ಪಾವತಿಸಿದರೆ, ಅವರು ನಿಭಾಯಿಸಬಲ್ಲರು. ಆಲ್ಟೋ, ಮಾರುತಿ 800, ವ್ಯಾಗನಾರ್ ಇತ್ಯಾದಿ ವಾಹನಗಳನ್ನು ಹೊಂದಿರುವವರು ಮನೆಯಲ್ಲಿ ನಿಲ್ಲಿಸಬೇಕು. ಮೆಟ್ರೋ, ಬಸ್‌ನಲ್ಲಿ ಬರಬೇಕು” ಎಂದು ಹೇಳಿದ್ದಾರೆ.

“1 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ಬೆಲೆಯಿರುವ ವಾಹನವನ್ನು ಹೊಂದಿರುವ ವ್ಯಕ್ತಿಗೆ ₹1,000 ಹೆಚ್ಚಿನ ಮೊತ್ತ ಎಂದು ಪರಿಗಣಿಸುವುದಿಲ್ಲ. ಬದಲಿಗೆ, ಅವನು ತನ್ನ ವಾಹನದ ಸುರಕ್ಷತೆ ನೋಡುತ್ತಾನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...