ಕಾಂಗ್ರೆಸ್ ಸರ್ಕಾರ 5,8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿಗಳಿಗೂ ಉತ್ತರ ಪತ್ರಿಕೆ ನೀವೇ ತನ್ನಿ ಎನ್ನುವಷ್ಟು ಬಿಕಾರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಅವರು, “50 ರೂಪಾಯಿ ಪರೀಕ್ಷಾ ಶುಲ್ಕ ವಸೂಲಿ ಮಾಡಿದ ನಂತರವೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆಗಳನ್ನ ಸರಬರಾಜು ಮಾಡಲಾಗದ ಈ ದರಿದ್ರ ಸರ್ಕಾರ ಈಗ 5, 8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿಗಳಿಗೂ
ಉತ್ತರ ಪತ್ರಿಕೆ ನೀವೇ ತನ್ನಿ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ಪದೇ ಪದೇ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿರುವ ನಿಮ್ಮ ನಾಲಾಯಕ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸಚಿವ ಸಂಪುಟದಿಂದ ತಕ್ಷಣ ವಜಾ ಮಾಡಿ. ನಿಮ್ಮ ಪಕ್ಷದಲ್ಲಿ ಶಿಕ್ಷಣ ಖಾತೆಯನ್ನು ನಿಭಾಯಿಸುವ ಸಮರ್ಥ ಶಾಸಕರು ಯಾರೂ ಇಲ್ಲವಾದರೆ ನೀವೂ ರಾಜೀನಾಮೆ ಕೊಟ್ಟು ತೊಲಗಿ” ಎಂದಿದ್ದಾರೆ.
50 ರೂಪಾಯಿ ಪರೀಕ್ಷಾ ಶುಲ್ಕ ವಸೂಲಿ ಮಾಡಿದ ನಂತರವೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆಗಳನ್ನ ಸರಬರಾಜು ಮಾಡಲಾಗದ ಈ ದರಿದ್ರ @INCKarnataka ಸರ್ಕಾರ, ಈಗ 5, 8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿಗಳಿಗೂ
ಉತ್ತರ ಪತ್ರಿಕೆ ನೀವೇ ತನ್ನಿ ಎನ್ನುವಷ್ಟು ಬಿಕಾರಿಯಾಗಿದೆ.ಸಿಎಂ @siddaramaiah ಅವರೇ, ಪದೇ… https://t.co/mlS2BGwPEK pic.twitter.com/n13IJ6riGF
— R. Ashoka (ಮೋದಿ ಅವರ ಕುಟುಂಬ) (@RAshokaBJP) March 6, 2024
