ಮಾರ್ಚ್ 8ರಂದು ಶಿವರಾತ್ರಿ ಇದ್ದ ಹಿನ್ನೆಲೆ, ನಗರದ ಜನರು ಸಂಭ್ರಮ, ಸಡಗರದಿಂದ ಹಬ್ಬ ಆಚರಣೆ ಮಾಡಿದರು. ಆದರೆ, ದೇವಸ್ಥಾನವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ದೇಹ ತಾಗಿತು ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ಯೋಗೇಶ್ (23) ಕೊಲೆಯಾದ ಯುವಕ. ಈತ ಬೈಕ್ ಸರ್ವೀಸ್ ಸೆಂಟರ್ನಲ್ಲಿ ವಾಷಿಂಗ್ ಕೆಲಸ ಮಾಡುತ್ತಿದ್ದನು.
ಬೆಂಗಳೂರಿನ ಗಿರಿನಗರ ದೇವಸ್ಥಾನದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಯೋಗೇಶ್ ದೇಹ ತಾಗಿತು ಎಂಬ ಕಾರಣಕ್ಕೆ ನಾಲ್ವರು ಯುವಕರು ಜಗಳ ಆರಂಭ ಮಾಡಿದ್ದಾರೆ. ಈ ಘಟನೆ ಬಳಿಕ, ಡ್ಯಾನ್ಸ್ ಮುಗಿಸಿ ಯೋಗೇಶ್ ಶ್ರೀನಗರದಲ್ಲಿರುವ ತನ್ನ ಮನೆಗೆ ಬೈಕ್‌ನಲ್ಲಿ ವಾಪಸ್ ಆಗುವಾಗ ನಾಲ್ವರು ಯುವಕರು ಹಿಂಬಾಲಿಸಿ, ಆತನ ಮೇಲೆ ದಾಳಿ ಮಾಡಿದ್ದಾರೆ. ಯೋಗೇಶ್‌ಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಶಂಕಿತನ ಪತ್ತೆಗಾಗಿ ನಾಲ್ಕು ಫೋಟೋ ಬಿಡುಗಡೆ ಮಾಡಿದ ಎನ್‌ಐಎ
ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.