ಐತಿಹಾಸಿಕ ನಿರ್ಧಾರ ಕೈಗೊಂಡ ಬಿಸಿಸಿಐ: ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕೆ ವಿಶೇಷ ಯೋಜನೆ ಘೋಷಣೆ

Date:

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇಂದು(ಮಾ.9) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸಲು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ವೇತನದ ಜೊತೆಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಘೋಷಣೆಯನ್ನು ಮಾಡಿದೆ.

“ಟೆಸ್ಟ್ ಕ್ರಿಕೆಟ್ ಇನ್ಸೆಂಟಿವ್ ಸ್ಕೀಮ್” (Test Cricket Incentive Scheme) ಎಂಬ ಯೋಜನೆಯನ್ನು ಘೋಷಿಸಿದ್ದು, ಟೆಸ್ಟ್ ಪಂದ್ಯದಲ್ಲಿ ಆಟಗಾರರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬ ಆಧಾರದಲ್ಲಿ ಈ ಪ್ರೋತ್ಸಾಹಧನ ದೊರೆಯಲಿದೆ.

ಒಂದು ಟೆಸ್ಟ್ ಸರಣಿಯಲ್ಲಿ ಶೇಕಡ 75ಕ್ಕಿಂತ ಅಧಿಕ ಪಂದ್ಯಗಳಲ್ಲಿ ಆಡಿದವರು ವೇತನ ಹೊರತುಪಡಿಸಿ ಪ್ರತಿ ಪಂದ್ಯಕ್ಕೆ ಹೆಚ್ಚುವರಿ 45 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಇನ್ನು ವಿಶ್ವದಲ್ಲೇ ಅತೀ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಬಿಸಿಸಿಐ, ಪ್ರತಿ ಟೆಸ್ಟ್ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರೂಪಾಯಿ ನೀಡುತ್ತದೆ. ಈ ಯೋಜನೆಯು 2022-23ರಿಂದ ಜಾರಿಗೆ ಬರಲಿದ್ದು, ಈ ಯೋಜನೆಗಾಗಿಯೇ ಬಿಸಿಸಿಐ ಪ್ರತ್ಯೇಕವಾಗಿ 40 ಕೋಟಿ ರೂಪಾಯಿ ಹಂಚಿಕೆ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸರಣಿಯಲ್ಲಿ ಶೇಕಡ 75ಕ್ಕೂ ಅಧಿಕ ಪಂದ್ಯದಲ್ಲಿ ಆಡಿದವರಿಗೆ ಪ್ರತಿ ಪಂದ್ಯಕ್ಕೆ ಹೆಚ್ಚುವರಿ 45 ಲಕ್ಷ ರೂಪಾಯಿ ನೀಡಲಾಗುತ್ತದೆ. ಶೇಕಡ 50ಕ್ಕಿಂತ ಅಧಿಕ ಪಂದ್ಯದಲ್ಲಿ ಆಡಿದವರಿಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂಪಾಯಿ ನೀಡಲಾಗುತ್ತದೆ.

ಈ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಹಿರಿಯರಿಗೆ ‘ಟೆಸ್ಟ್ ಕ್ರಿಕೆಟ್ ಇನ್ಸೆಂಟಿವ್ ಸ್ಕೀಮ್’ ಅನ್ನು ಘೋಷಿಸಲು ನಾನು ಸಂತಸ ಪಡುತ್ತೇನೆ. ನಮ್ಮ ಆಟಗಾರರ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗಾಗಿ ಈ ಯೋಜನೆ. 2022-23ರಿಂದ ಅನ್ವಯವಾಗಲಿದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

ವಿಶ್ವ ಟೆನಿಸ್ ಯುಗದಲ್ಲಿ ಮತ್ತೊಂದು ಹೊಸದೊಂದು ಪ್ರತಿಭೆ ಪ್ರಜ್ವಲಿಸುತ್ತಿದೆ. 21 ವರ್ಷದ...

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...